ಕಾರ್ಕಳದ ಶ್ರದ್ಧಾ ಜೈನ್ ಅವರಿಗೆ ಪ್ರಧಾನಿ ಮೋದಿ ಗೌರವ


Logo

Published Date: 09-Mar-2024 Link-Copied

ಹೊಸದಿಲ್ಲಿ ಮಾ. 8: ಕಾರ್ಕಳದ ಶ್ರದ್ಧಾ ಜೈನ್, ತಾಂಜಾನಿಯಾದ ಕಿಲಿ ಪೌಲ್ ಸಹಿತ ಸಾಮಾಜಿಕ ಜಾಲತಾಣಗಳ ಮೂಲಕ ಜನಮನ ಗೆದ್ದಿರುವ ಒಟ್ಟು 20 ಕ್ಷೇತ್ರಗಳ 23 ಯುವ ಕ್ರಿಯೇಟರ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ದೇಶದ ಪ್ರಪ್ರಥಮ 'ನ್ಯಾಷನಲ್ ಕ್ರಿಯೇಟರ್ಸ್ ಪ್ರಶಸ್ತಿ'ಯನ್ನು ಪ್ರದಾನ ಮಾಡಿದರು. ಅತ್ಯಂತ ಸೃಜನಶೀಲ ಮಹಿಳಾ ಕ್ರಿಯೇಟರ್ ವಿಭಾಗದಲ್ಲಿ 'ಅಯ್ಯೋ ಶ್ರದ್ಧಾ' ಎಂದೇ ಖ್ಯಾತರಾಗಿರುವ ಕನ್ನಡತಿ ಶ್ರದ್ಧಾ ಜೈನ್ ಅವರು ಪ್ರಶಸ್ತಿ ಪಡೆದರು. ಇವರಲ್ಲದೆ ಪಂಖ್ತಿ ಪಾಂಡೆ, ಕೀರ್ತಿಕಾ ಗೋವಿಂದಸ್ವಾಮಿ, ಗಾಯಕಿ ಮೈಥಿಲಿ ಠಾಕೂರ್, ಮಲ್ಹಾರ್ ಕಳಂಬೆ ಸಹಿತ ಹಲವು ಯುವ ಪ್ರತಿಭೆಗಳ ಜತೆಗೆ ಮೂವರು ಅಂತರಾಷ್ಟ್ರೀಯ ಕ್ರಿಯೇಟರ್‌ಗಳಿಗೆ ಕೂಡ ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ, ನಾವೆಲ್ಲರೂ ಭಾರತದಲ್ಲೇ ರೂಪಿಸೋಣ, ಜಗತ್ತಿಗಾಗಿ ರೂಪಿಸೋಣ ಎಂದ ಪ್ರಧಾನಿ, ಭಾರತದ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವಂತೆ ಮತ್ತು ನಾರಿ ಶಕ್ತಿಯ ಥೀಮ್‌ನೊಂದಿಗೆ ಕಂಟೆಂಟ್ ರೂಪಿಸುವಂತೆ ಪ್ರಶಸ್ತಿ ಪುರಸ್ಕೃತರಿಗೆ ಕರೆ ನೀಡಿದರು.'ಅಯ್ಯೋ ಶ್ರದ್ಧಾ ಕಾರ್ಕಳ ತಾಲೂಕಿನ ಬಜಗೋಳಿ ವರ್ಧಮಾನ ಜೈನ್ ಹಾಗೂ ದಿ.ಸುಶೀಲಾ ದಂಪತಿಯ ಇಬ್ಬರು ಪುತ್ರಿಯರಲ್ಲಿ ಶ್ರದ್ಧಾ ಒಬ್ಬರು. 'ಅಯ್ಯೋ ಶ್ರದ್ಧಾ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಪ್ರಸ್ತುತ ಬೆಂಗಳೂರಿನಲ್ಲಿದ್ದಾರೆ. ಪ್ರಶಸ್ತಿ ಸ್ವೀಕರಿಸುವ ವೇಳೆ ಶ್ರದ್ಧಾ, ಎಷ್ಟೇ ಒತ್ತಡದ ಪರಿಸ್ಥಿತಿ ಇದ್ದರೂ ನಾವು ಭಾರತೀಯರು ನಗುವ ಮಾರ್ಗವನ್ನು ಕಂಡುಕೊಳ್ಳುತ್ತಲೇ ಇರುತ್ತೇವೆ ಎಂದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img