ಮಾ. 01: ಕೊನೆಯ ದಿನದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು


Logo

Published Date: 29-Feb-2024 Link-Copied

12 ವರ್ಷಗಳಿಗೊಮ್ಮೆ ನೆರವೇರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಸಂಭ್ರಮವು ವೇಣೂರಿನಲ್ಲಿ ಫೆ. 22ರಂದು ಮೊದಲ್ಗೊಂಡು, ಇಂದು(ಮಾ. 1) ಸಂಪನ್ನಗೊಳ್ಳಲಿದೆ. ಈ ದಿನದ ಸೇವಾಕರ್ತರಾದ ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯಿಂದ 1008 ಕಲಶಾಭಿಷೇಕ ನಡೆಯಲಿದೆ. ಬೆಳಗ್ಗೆ 9.00ಕ್ಕೆ ನಿತ್ಯ ವಿಧಿ ಸಹಿತ ಸಿದ್ದಚಕ್ರ ಯಂತ್ರಾರಾಧನಾ ವಿಧಾನ, ಗಂಟೆ 10.15ರಿಂದ ಅಗ್ನಿತ್ರಯಾರ್ಚನಾ ಪೂರ್ವಕ ನಿರ್ವಾಣ ಕಲ್ಯಾಣ, ಅಗ್ರೋದಕ ಮೆರವಣಿಗೆ, ಸಂಜೆ ಗಂಟೆ 4.00ರಿಂದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ಮಹೋತ್ಸವ, ಮಹಾಪೂಜೆ, ಸಂಘಪೂಜೆ, ಮಹಾಮಂಗಳಾರತಿ, ಕುಂಕುಮೋತ್ಸವ, ಅವಭೃತ ಸ್ನಾನ, ಧ್ವಜಾವರೋಹಣ, ತೋರಣ ವಿಸರ್ಜನೆ, ಮತ್ತು ಕಂಕಣ ವಿಸರ್ಜನೆ ಜರಗಲಿದೆ. ಅಪರಾಹ್ನ 3.00 ಗಂಟೆಗೆ ಯುಗಳ ಮುನಿಶ್ರೀಗಳಾದ, ಪ. ಪೂ. ೧೦೮ ಶ್ರೀ ಅಮೋಘಕೀರ್ತಿ ಮಹಾರಾಜರು ಹಾಗೂ ಪ. ಪೂ. ೧೦೮ ಶ್ರೀ ಅಮರ ಕೀರ್ತಿ ಮಹಾರಾಜರ ಪಾವನ ಸಾನಿಧ್ಯದಲ್ಲಿ, ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಮತ್ತು ಶ್ರೀ ಕ್ಷೇತ್ರ ಜಿನಕಂಚಿಯ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರವರ ಉಪಸ್ಥಿತಿಯಲ್ಲಿ, ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ಜರಗಲಿದೆ. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು, ಚಿತ್ರದುರ್ಗದ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್ ಎಂ.ಎಲ್., ಎಂಎಲ್‌ಸಿ ಕೆ. ಪ್ರತಾಪಸಿಂಹ ನಾಯಕ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ನಾಗಪುರದ ಡಿ.ಪಿ. ಜೈನ್, ನಾಸಿಕ್‌ನ ರವೀಂದ್ರ ಪಾಟೀಲ್ ಉಪಸ್ಥಿತರಿರಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ ಭರತೇಶ ಸಮುದಾಯ ಭವನದ ಮುಖ್ಯ ವೇದಿಕೆಯಲ್ಲಿ ಸಂಜೆ 7.00ರಿಂದ ಸಾಲಿಗ್ರಾಮದ ಶ್ರೀ ಗುರು ಪ್ರಸಾದಿತ ಯಕ್ಷಗಾನ ಮಂಡಳಿ ಇವರಿಂದ ‘ಹೊಂಬುಜ ಕ್ಷೇತ್ರ ಮಹಾತ್ಮೆ'. ವಸ್ತುಪ್ರದರ್ಶನ ವೇದಿಕೆಯಲ್ಲಿ ರಾತ್ರಿ 7.00ರಿಂದ ವೇಣೂರಿನ ಅನುಸೂಯ ಫಾಟಕ ಮತ್ತು ತಂಡದವರಿಂದ ‘ಸಂಗೀತ ಕಾರ್ಯಕ್ರಮ’, ರಾತ್ರಿ 8.30ರಿಂದ ಮಂಜೇಶ್ವರದ ನಾಟ್ಯ ನಿಲಯಂ ತಂಡದವರಿಂದ ‘ನೃತ್ಯ ಕಾರ್ಯಕ್ರಮ’, ರಾತ್ರಿ 11.00ರಿಂದ ಪುಷ್ಕಳ್ ಕುಮಾರ್ ತೋನ್ಸ್‌ರವರ ತಂಡದವರಿಂದ ‘ಜಿನಕಥೆ-ಶ್ರೀ ಬಾಹುಬಲಿ ಚರಿತೆ’. ಈ ಎಲ್ಲಾ ಕಾರ್ಯಕ್ರಮಗಳು ಇಂದು ನಡೆಯಲಿದೆ.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img