ಮಹಾಮಸ್ತಕಾಭಿಷೇಕದ 7ನೇ ದಿನ - ಫೆ. 28 : ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು


Logo

Published Date: 28-Feb-2024 Link-Copied

ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ 7ನೇ ದಿನವಾದ ಇಂದು (ಫೆ.28) ಸೇವಾಕರ್ತರಾದ ಸ್ವಸ್ತಿಕ್ ಜೈನ್ ಹಾಗೂ ಕುಟುಂಬಸ್ಥರು ಮಾಡಿಸುವ ನಿತ್ಯವಿಧಿ ಸಹಿತ, ಯಾಗಮಂಡಲ ಆರಾಧನಾ ವಿಧಾನ, ಮಧ್ಯಾಹ್ನ 2.00 ಗಂಟೆಗೆ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿಯ ರಾಜ್ಯಾಭಿಷೇಕ, ರಾಜ್ಯಭಾರ, ಸಂಜೆ ಗಂಟೆ 4.05ರ ಕರ್ಕಾಟಕ ಲಗ್ನದಲ್ಲಿ ವೈರಾಗ್ಯ ಪೂರ್ವಕ ದೀಕ್ಷಾ ವಿಧಿ, ಕೇಶಲೋಚನಾ ವಿಧಿ, ಪರಿಷ್ಕೃಮಣ ಕಲ್ಯಾಣ, ಅಗ್ರೋದಕ ಮೆರವಣಿಗೆ, ಬಳಿಕ ಸಂಜೆ ಗಂಟೆ 7.00ರಿಂದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ 216 ಕಲಶಗಳಿಂದ ಮಹಾಮಸ್ತಕಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ಜರಗಲಿದೆ. ಭರತೇಶ ಸಮುದಾಯ ಭವನದ ಮುಖ್ಯ ವೇದಿಕೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮವು ಅಪರಾಹ್ನ 3.00 ಗಂಟೆಗೆ ಯುಗಳ ಮುನಿಶ್ರೀಗಳಾದ ಪ.ಪೂ. ೧೦೮ ಶ್ರೀ ಅಮೋಘಕೀರ್ತಿ ಮಹಾರಾಜರು ಮತ್ತು ಪ.ಪೂ. ೧೦೮ ಶ್ರೀ ಅಮರಕೀರ್ತಿ ಮಹಾರಾಜರ ಪಾವನ ಸಾನ್ನಿಧ್ಯದಲ್ಲಿ, ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು, ವರೂರು ಜೈನ ಮಠದ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಹಾಗೂ ಶ್ರೀಕ್ಷೇತ್ರ ಕೊಲ್ಲಾಪುರ ಜೈನಮಠದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಜರಗಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಭಾ.ಜ.ಪ. ಅಧ್ಯಕ್ಷರು ಮತ್ತು ಶಾಸಕರಾದ ಬಿ.ವೈ. ವಿಜಯೇಂದ್ರ ಇವರು ವಹಿಸಲಿದ್ದು, ಐಪಿಎಸ್ ಪೋಲಿಸ್ ಆಯುಕ್ತರಾದ ಅನುಪಮ್ ಅಗ್ರವಾಲ್, ಚೆನ್ನೈನ ಐ.ಎ.ಎಫ್. ಗ್ರೂಪ್ ಕ್ಯಾಪ್ಟನ್ ವೀರಚಕ್ರ ಅಭಿನಂದನ್ ವರ್ಧಮಾನ್, ಜೈಪುರ್ ರಿಲಯನ್ಸ್ ಇಂಡಸ್ಟ್ರೀಸ್ ಲಿ. ನ ಅಧ್ಯಕ್ಷರಾದ ಉಮೇಶ ಭಂಡಾರಿ, ಬೆಂಗಳೂರು ಗ್ರೀನ್‌ಚೆಫ್‌ನ ಸ್ಥಾಪಕಾಧ್ಯಕ್ಷರಾದ ಸುಖಲಾಲ್ ಜೈನ್, ಬೆಂಗಳೂರು ಮೈಕ್ರೊ ಲ್ಯಾಬ್ ಅಧ್ಯಕ್ಷರು ಮತ್ತು ಎಂ.ಡಿ. ದಿಲೀಪ್ ಸುರಾನ್, ಉಜಿರೆ ಎಸ್.ಡಿ.ಎಮ್. ಸೊಸೈಟಿ (ರಿ.)ನ ಪ್ರಾಜೆಕ್ಟ್ ಡೈರೆಕ್ಟರ್ ಶ್ರೇಯಸ್ ಕುಮಾರ್ ಮತ್ತು ಉದ್ಯಮಿ ಕಿರಣ್ ಜೈನ್ ಉಪಸ್ಥಿತರಿರುವರು. ಬೆಂಗಳೂರಿನ ಲೇಖಕಿ, ಪ್ರಾಧ್ಯಾಪಕಿ ಡಾ. ಪದ್ಮಿನಿ ನಾಗರಾಜ್ ರವರು ವಿಶ್ವಧರ್ಮವಾದ ಜೈನಧರ್ಮದ ಪ್ರಸ್ತುತತೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿರುವರು. ಮುಖ್ಯ ವೇದಿಕೆಯಲ್ಲಿ ರಾತ್ರಿ 8.00ರಿಂದ ಹೊಸದೆಹಲಿಯ ಸ್ವಾತಿ ನಿಹಾಲ್ ಜೈನ್ ಮತ್ತು ಬಳಗದವರಿಂದ ಸಂಗೀತ ಸುಧೆ ಮತ್ತು ವಸ್ತು ಪ್ರದರ್ಶನ ವೇದಿಕೆಯಲ್ಲಿ ರಾತ್ರಿ 7.00ರಿಂದ ಧಾರವಾಡದ ಕು. ಪ್ರಾಪ್ತಿ ಜೈನ್ ಕೆ.ಎ. ಇವರಿಂದ ಭರತ ನಾಟ್ಯ, ವೇಣೂರು ತುಳುನಾಡ ಕಲಾವಿದರಿಂದ ತುಳುನಾಡ ವೈಭವ ನಡೆಯಲಿದೆ.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img