ಮಹಾಮಸ್ತಕಾಭಿಷೇಕದ 6ನೇ ದಿನ - ಫೆ. 27 : ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು


Logo

Published Date: 27-Feb-2024 Link-Copied

ವೇಣೂರು ಭ| ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕದ 6 ದಿನದ ಸೇವಾಕೃರ್ತಗಳಾದ ಎಂ. ಅನಂತ ಕುಮಾರ್ ಸಹೋದರರು ಮತ್ತು ಸಹೋದರಿಯರು ಹಾಗೂ ಕೆ. ಹೇಮರಾಜ್ ಜೈನ್ ಬೆಳ್ಳಿಬೀಡು ಅವರಿಂದ ಬೆಳಿಗ್ಗೆ 9.30ಕ್ಕೆ ಕಲ್ಲುಬಸದಿಯ ಪಾಂಡುಕಶಿಲೆಯಲ್ಲಿ ಜನ್ಮಾಭಿಷೇಕ ಕಲ್ಯಾಣ ನೆರವೇರಲಿದ್ದು, ನಿತ್ಯವಿಧಿ ಸಹಿತ ಬೆಳಗ್ಗೆ 9.35ರ ಮೇಷ ಲಗ್ನದಲ್ಲಿ ಶ್ರೀ ಜಿನ ಬಾಲಕನ ಜನ್ಮ ಕಲ್ಯಾಣ, ಅಷ್ಟದಿಕ್ಷು ಧಾಮ ಸಂಪ್ರೋಕ್ಷಣೆ, ಚತುರ್ದಿಕ್ಷು ಹೋಮ, ಪಾಂಡುಕಾಶಿಲೋಪರಿ ಜನ್ಮಾಭಿಷೇಕ ಕಲ್ಯಾಣ, ಅಗ್ರೋದಕ ಮೆರವಣಿಗೆ ನಡೆದು ಸಂಜೆ ಗಂಟೆ 6ರಿಂದ ನಾಮಕರಣ, ಬಾಲಲೀಲೋತ್ಸವದ ಬಳಿಕ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ 216 ಕಲಶಗಳಿಂದ ಮಹಾಮಸ್ತಕಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ಜರಗಲಿದೆ. ಭರತೇಶ ಸಮುದಾಯ ಭವನದಲ್ಲಿ ಅಪರಾಹ್ನ 3.00 ಗಂಟೆಗೆ ಯುಗಳ ಮುನಿಶ್ರೀಗಳಾದ ಪ.ಪೂ. 108 ಶ್ರೀ ಅಮೋಘಕೀರ್ತಿ ಮಹಾರಾಜರು ಮತ್ತು ಪ.ಪೂ. 108 ಶ್ರೀ ಅಮರಕೀರ್ತಿ ಮಹಾರಾಜರುಗಳ ಪಾವನ ಸಾನ್ನಿಧ್ಯದಲ್ಲಿ ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಮಹಾಸ್ವಾಮೀಜಿಗಳವರು, ಕಾರ್ಕಳ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು, ಶ್ರೀ ಕ್ಷೇತ್ರ ನಾಂದಣಿ ಜೈನ ಮಠದ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ಜರಗಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯಿಲಿರವರು ವಹಿಸಲಿರುವರು. ಕಾರ್ಯಕ್ರಮದಲ್ಲಿ ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಮಾಜಿ ಸಚಿವ ರಮಾನಾಥ ರೈ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ., ಮೂಡುಬಿದಿರೆ ಎಂ.ಸಿ.ಎಸ್. ಬ್ಯಾಂಕ್‌ನ ಸಿ.ಇ.ಒ., ಚಂದ್ರಶೇಖರ ಉಪಸ್ಥಿತರಿರುವರು. ಧಾರವಾಡದ ವಿಶ್ರಾಂತ ಕುಲಸಚಿವರಾದ ಡಾ. ಶಾಂತಿನಾಥ ದಿಬ್ಬದ ಅವರು "ಆದಿಪುರಾಣದಲ್ಲಿ ಜೀವನ ದರ್ಶನ" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿರುವರು. ಮುಖ್ಯ ವೇದಿಕೆಯಲ್ಲಿ ರಾತ್ರಿ 8.00ರಿಂದ ಧಾರವಾಡದ ವಿಶ್ವಾಂಬರಿ ನೃತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ) ಇವರಿಂದ ವಿರಾಗಿ ಬಾಹುಬಲಿ ನೃತ್ಯ ರೂಪಕ, ವಸ್ತು ಪ್ರದರ್ಶನ ವೇದಿಕೆಯಲ್ಲಿ ರಾತ್ರಿ 7.00ರಿಂದ ಶ್ರುತಿ ಕಾಂತಾಜೆ ಮತ್ತು ಬಳಗದವರಿಂದ ಭಕ್ತಿ ಸಂಗೀತ ಬಳಿಕ ರಾತ್ರಿ 8.30ರಿಂದ ವೇಣೂರು ಐಸಿರಿ ಕಲಾವಿದರು ಇವರಿಂದ "ಮುತ್ತು ಮನಿಪುಜೆ" ತುಳು ಹಾಸ್ಯಮಯ ನಾಟಕ ನಡೆಯಲಿದೆ.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img