ಫೆ. 25 ವೇಣೂರು ಮಹಾಮಸ್ತಕಾಭಿಷೇಕ : ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು


Logo

Published Date: 25-Feb-2024 Link-Copied

ವೇಣೂರು ಮಹಾಮಸ್ತಕಾಭಿಷೇಕ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಮೂಡುಬಿದಿರೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ತಮಿಳುನಾಡು ತಿರುಮಲೈ ಸ್ವಸ್ತಿಶ್ರೀ ಧವಲಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಶ್ರೀಕ್ಷೇತ್ರ ಸ್ವಾದಿ ದಿಗಂಬರ ಜೈನಮಠ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಯವರ ಪಾವನ ಸಾನ್ನಿಧ್ಯ ಇರಲಿದ್ದು, ಮಾಜಿ ಮುಖ್ಯಮಂತ್ರಿ ಬಿ. ಬಸವರಾಜ ಬೊಮ್ಮಾಯಿ, ಸಚಿವ ಎನ್.ಎಸ್. ಬೋಸರಾಜ್, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಎಸ್. ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್, ದ.ಕ.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಆನಂದ್ ಕೆ., ದಿನದ ಸೇವಾಕರ್ತರಾದ ಜೀವಂಧರ್ ಕುಮಾರ್ ಉಪಸ್ಥಿತರಿರುವರು. ಡಾ| ಎಸ್.ಪಿ. ಪದ್ಮಪ್ರಸಾದ್ ಅವರಿಂದ ವಿಶೇಷ ಉಪನ್ಯಾಸವೂ ಇರಲಿದೆ. ರಾತ್ರಿ 7.30ಕ್ಕೆ ಮುಖ್ಯವೇದಿಕೆಯಲ್ಲಿ ಶಂಕರ್ ಶಾನಭೋಗ್ ಮತ್ತು ಬಳಗದಿಂದ ಭಕ್ತಿರಸಾಮೃತ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಸ್ತುಪ್ರದರ್ಶನ ವೇದಿಕೆಯಲ್ಲಿ ರಾತ್ರಿ 7ರಿಂದ 7.30ರ ವರೆಗೆ ಅನನ್ಯಾ ರಂಜನಿ, ಮೂಡುಬಿದಿರೆ ಅವರಿಂದ ಭರತನಾಟ್ಯ, 7.30ರಿಂದ 11ರ ವರೆಗೆ ಬಾಹುಬಲಿ ಕಲಾ ತಂಡ ವೇಣೂರು ಆದರಿಂದ ನೃತ್ಯ ವೈವಿಧ್ಯ ಹಾಗೂ ತ್ಯಾಗವೀರ ಬಾಹುಬಲಿ ಎಂಬ ಯಕ್ಷಗಾನ ಕಾರ್ಯಕ್ರಮಗಳು ಜರಗಲಿದೆ.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img