ಫೆ. 25 : 4ನೇ ದಿನವಾದ ಇಂದು ದಿನವಿಡೀ ಮಹಾಮಸ್ತಕಾಭಿಷೇಕ
Published Date: 24-Feb-2024 Link-Copied
ವೇಣೂರು ಭಗವಾನ್ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕದ 4ನೇ ದಿನವಾದ ಇಂದು (ಫೆ. 25) ಮಧ್ಯಾಹ್ನ 1ರಿಂದ 2.30ರ ವರೆಗೆ ಯುಗಳ ಮುನಿಗಳಾದ ಪೂಜ್ಯ ೧೦೮ ಶ್ರೀ ಅಮೋಘಕೀರ್ತಿ ಮಹಾರಾಜರು ಹಾಗೂ ೧೦೮ ಶ್ರೀ ಅಮರಕೀರ್ತಿ ಮಹಾರಾಜರ ರಜತ ದೀಕ್ಷಾ ಜಯಂತಿ ಸಮಾರಂಭ ನೆರವೇರಲಿದ್ದು, ಈ ಪ್ರಯುಕ್ತ ಮುಂಜಾನೆಯಿಂದಲೇ ಮಹಾಮಸ್ತಕಾಭಿಷೇಕ ಪ್ರಾರಂಭವಾಗಿದ್ದು, ಮಹಾಪೂಜೆ, ಮಹಾಮಂಗಳಾರತಿಯೊಂದಿಗೆ ಸಂಪನ್ನಗೊಳ್ಳಲಿದೆ. ಈ ದಿನದ ಸಂಜೆಯ ಮಹಾಮಸ್ತಕಾಭಿಷೇಕದ ಸೇವಾಕರ್ತರು ಪೆರಿಂಜೆ ಪಡ್ಯೋಡಿಗುತ್ತು ಜೀವಂಧರ ಕುಮಾರ್ ಮತ್ತು ಕುಟುಂಬದವರಾಗಿದ್ದು, ಬೆಳಗ್ಗೆ 8ರಿಂದ ಪಂಚಕುಂಭ ವಿನ್ಯಾಸಯುಕ್ತ ಗ್ರಹಯಜ್ಞ ವಿಧಾನ, ಜಲಾಗ್ನಿ ಹೋಮ, ಅಪರಾಹ್ನ 2ರಿಂದ ಬೃಹತ್ ಶಾಂತಿ ಯಂತ್ರಾರಾಧನಾ ವಿಧಾನ, ಆಗ್ರೋದಕ ಮೆರವಣಿಗೆ, ಸಂಜೆ 4ರಿಂದ ಶ್ರೀ ಬಾಹುಬಲಿ ಸ್ವಾಮಿಗೆ 108 ಕಲಶಗಳಿಂದ ಮಹಾಮಸ್ತಕಾಭಿಷೇಕ ಮಹಾಪೂಜೆ, ನೆರವೇರಲಿದೆ. ಹೀಗೆ ಈ ದಿನ ದಿನವೀಡಿ ಮಹಾಮಸ್ತಕಾಭಿಷೇಕದ ಸಂಭ್ರಮವನ್ನು ಭಕ್ತರು ಕಣ್ತುಂಬಿಕೊಳ್ಳಬಹುದು.