ವೇಣೂರು : ಜೀರ್ಣೋದ್ಧಾರಗೊಳಿಸಿದ ತ್ಯಾಗಿಭವನ ಉದ್ಘಾಟನೆ
Published Date: 24-Feb-2024 Link-Copied
ವೇಣೂರು, ಫೆ. 24: ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡ ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ತ್ಯಾಗಿಭವನದ ಉದ್ಘಾಟನೆಯು ಪರಮಪೂಜ್ಯ ಯುಗಳ ಮುನಿಶ್ರೀಗಳಿಂದ ನೆರವೇರಿತು. ಈ ಸಂದರ್ಭ ಹೊಂಬುಜ ಮಠಾಧೀಶರಾದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು, ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು, ಕ್ಷೇತ್ರದ ಸ್ಥಾಪಕ ವಂಶೀಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು, ತೀರ್ಥಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ್ ಕುಮಾರ್ ಇಂದ್ರ, ಕಾಮಗಾರಿಯ ದಾನಿಗಳಾದ ಪೆರಿಂಜೆ ರಾಜ್ಯಗುತ್ತು ದೇವಕುಮಾರ್ ಕಂಬಳಿ ಮತ್ತು ಕುಟುಂಬಸ್ಥರು ಹಾಗೂ ಮಹಾಮಸ್ತಕಾಭಿಷೇಕ ಸಮಿತಿ ಸ್ವಯಂಸೇವಕರು ಮತ್ತು ಶ್ರಾವಕರು ಉಪಸ್ಥಿತರಿದ್ದರು.