ವೇಣೂರು ಭಗವಾನ್ ಬಾಹುಬಲಿಗೆ ಮೂರನೇ ದಿನದ ಮಹಾಮಸ್ತಕಾಭಿಷೇಕ


Logo

Published Date: 24-Feb-2024 Link-Copied

ವೇಣೂರು,ಫೆ.24: ಉಪಾಧಿಗಳಿಂದ ಬಾಹುಬಲಿಯ ವ್ಯಕ್ತಿತ್ವದ ಸತ್ಯ ತಿಳಿಯಬಹುದು. ಈ ಭೂಮಿಯಲ್ಲಿ ನೈತಿಕತೆ ಎಂಬುದು ಶಾಶ್ವತವಾಗಿರಬೇಕು ಎಂಬ ಸಂದೇಶ ಬಾಹುಬಲಿಯದ್ದು. ಹಾಗಾಗಿ ಈ ಭೂಮಿಯಲ್ಲಿ ಅಹಿಂಸೆಯನ್ನು ಪಾಲಿಸಿದವರು ಮಹಾವೀರನ ಸರ್ವೋದಯ ಪರಿಪಾಲಕರು ಎಂದು ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಮಹಾಸ್ವಾಮೀಜಿಗಳವರು ನುಡಿದರು. “ವೇಣೂರು ಫಲ್ಗುಣಿ ತಟದಲ್ಲಿ ವಿರಾಜಮಾನನಾದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಸ್ತಕಾಭಿಷೇಕದ ಮೂರನೇ ದಿನವಾದ ಫೆ. 24ರಂದು ಭರತೇಶ ಸಭಾಭವನದಲ್ಲಿ ಯುಗಳ ಮುನಿಗಳ ದಿವ್ಯ ಉಪಸ್ಥಿತಿಯಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು ಮಾತನಾಡಿ, ಜೈನಧರ್ಮ ಶ್ರೇಷ್ಠ ವಿಶ್ವಧರ್ಮವಾಗಿದ್ದು ಅದರ ಎಲ್ಲ ತತ್ವಸಿದ್ಧಾಂತಗಳು ವೈಜ್ಞಾನಿಕವಾಗಿಯೂ ಸತ್ಯ ಮತ್ತು ಪರಿಪೂರ್ಣ ಎಂದು ಖಚಿತವಾಗಿದೆ ಎಂದರು. ಪತ್ರಕರ್ತ ಅಜಿತ್ ಹನುಮಕ್ಕನವರ್ ಜಿನಸಿದ್ಧಾಂತದ ಶ್ರೇಷ್ಠತೆ-ಅನೇಕಾಂತವಾದ ವಿಚಾರವಾಗಿ ಮಾತನಾಡಿ, ತ್ಯಾಗವನ್ನು ಮತ್ತು ತ್ಯಾಗಿಗಳನ್ನು ಸದಾಕಾಲ ಪೂಜಿಸಿದ ನಾಡು ನಮ್ಮದು ವಿಶ್ವದಲ್ಲಿ ಹುಟ್ಟಿದ ಅನೇಕ ಭೋಗಿಗಳಿದ್ದರೂ ಪೂಜನೀಯರಾದದ್ದು ತ್ಯಾಗಿಗಳು ಮಾತ್ರ ಎಂದರು. ಏರ್ ಇಂಡಿಯಾದಲ್ಲಿ ಪೈಲೆಟ್ ಆಗಿ ನೇಮಕಗೊಂಡ ವೇಣೂರಿನ ದಿ| ಬಿ.ಪಿ. ಇಂದ್ರರ ಮೊಮ್ಮಗಳು ಅನನ್ಯಾ ಜೈನ್ ಅವರನ್ನು ಸಮಿತಿ ಪರವಾಗಿ ಡಿ. ಹರ್ಷೇಂದ್ರ ಕುಮಾರ್ ಗೌರವಿಸಿದರು. ಬೆಳಗಾವಿಯ ಪೊಲೀಸ್ ವರಿಷ್ಠಾಧಿಕಾರಿ ಜಿನೇಂದ್ರ ಕಣಗಾವಿ, ಹಿರಿಯ ವಕೀಲ ಪಿ.ಪಿ. ಹೆಗ್ಡೆ, ಎಚ್.ಪಿ.ಸಿ.ಎಲ್.ನ ನವೀನ್ ಕುಮಾರ್, ಶಾಸಕ ಹರೀಶ ಪೂಂಜ ಶುಭಾಶಂಸನೆ ಮಾಡಿದರು. ಕಾರ್ಯಾಧ್ಯಕ್ಷ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ ಮತ್ತು ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ ಕುಮಾರ್ ಇಂದ್ರ, ಕೋಶಾಧಿಕಾರಿ ಪಿ. ಜಯರಾಜ್ ಕಂಬಳಿ, ಸೇವಾಕರ್ತರಾದ ಸುನಂದದೇವಿ ಬಿ.ಪಿ. ಇಂದ್ರ ಉಪಸ್ಥಿತರಿದ್ದರು. ಡಾ| ಶಾಂತಿಪ್ರಸಾದ್ ಸ್ವಾಗತಿಸಿದರು. ಶಾಲಿನಿ ನಿರಂಜನ್ ವಂದಿಸಿದರು. ನವಿತಾ ಜೈನ್ ನಿರ್ವಹಿಸಿದರು. ಮುಖ್ಯ ವೇದಿಕೆಯಲ್ಲಿ ಬೆಳಿಗ್ಗೆ ಪರುಷಶ್ರೀ ಜಿನಭಜನ ತಂಡ ಪರುಷಗುಡ್ಡೆ, ಕುಪ್ಪೆಪದವು, ರೆಂಜಾಳ ಜೈನ್ ಮಿಲನ್ ಸದಸ್ಯರಿಂದ ಜಿನಭಜನೆ ನಡೆಯಿತು. ಸಂಜೆ ಮುಖ್ಯ ವೇದಿಕೆಯಲ್ಲಿ ಅಜಯ್ ವಾರಿಯರ್ ಅವರಿಂದ ಸಂಗೀತಯಾನ, ವಸ್ತುಪ್ರದರ್ಶನ ವೇದಿಕೆಯಲ್ಲಿ ಭರತನಾಟ್ಯ, ನೃತ್ಯ ಸಂಗಮ ಪ್ರದರ್ಶನಗೊಂಡಿತು. ದಿನದ ಸೇವಾಕರ್ತರಾದ ಸುನಂದದೇವಿ ಬಿ.ಪಿ. ಇಂದ್ರ, ಮಕ್ಕಳು ಮತ್ತು ಕುಟುಂಬಸ್ಥರಿಂದ ಬಾಹುಬಲಿ ಸ್ವಾಮಿಗೆ ಸಂಜೆ 108 ಕಲಶಗಳಿಂದ ಮಹಾಮಸ್ತಕಾಭಿಷೇಕ, ಮಹಾಪೂಜೆ ನೆರವೇರಿತು. ಇದಕ್ಕೂ ಮುನ್ನ ಪೂಜಾವಿಧಾನ ನಡೆದು ಅಗ್ರೋದಕ ಮೆರವಣಿಗೆ ಭವ್ಯವಾಗಿ ನೆರವೇರಿತು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img