ಭ|| ಶ್ರೀ ಬಾಹುಬಲಿಗೆ ಮಹಾಮಸ್ತಕಾಭಿಷೇಕ


Logo

Published Date: 23-Feb-2024 Link-Copied

ಬೆಳ್ತಂಗಡಿ, ಫೆ. 23: ವೇಣೂರು ವಿರಾಟ್ ವಿರಾಗಿಗೆ ಗುರುವಾರದಿಂದ ಮಹಾಮಸ್ತಕಾಭಿಷೇಕ ಆರಂಭವಾಗುತ್ತಲೆ ಫಲ್ಗುಣಿ ತಟದೆತ್ತರ ಬಾಹುಬಲಿ ಸ್ವಾಮೀಕಿ ಜೈ ಘೋಷ ಮೊಳಗಿದೆ. ರಾಜ್ಯದಲ್ಲಿರುವ ಪ್ರಮುಖ ನಾಲ್ಕು ಬಾಹುಬಲಿ ಮೂರ್ತಿಗಳ ಪೈಕಿ ಮೂರು ಮೂರ್ತಿಗಳು ಅವಿಭಜಿತ ದ.ಕ. ಜಿಲ್ಲೆಯಲ್ಲಿದ್ದರೆ, ಅತಿ ಎತ್ತರದ ಮೂರ್ತಿ ಶ್ರವಣಬೆಳಗೊಳದಲ್ಲಿದೆ. ಕಾರ್ಕಳದಲ್ಲಿ 42 ಅಡಿ, ಧರ್ಮಸ್ಥಳದಲ್ಲಿ 39 ಅಡಿ ಎತ್ತರದ ಬಾಹುಬಲಿ ಮೂರ್ತಿಗಳಿವೆ. ವೇಣೂರಿನಲ್ಲಿ ಅಜಿಲ ಮನೆತನದವರು ಸ್ಥಾಪಿಸಿದ 35 ಅಡಿ ಎತ್ತರದ ನಗುಮೊಗದ ಹಸನ್ಮುಖಿ ಗೊಮ್ಮಟನಿಗೆ ಮಹಾ ಮಸ್ತಕಾಭಿಷೇಕವನ್ನು ಕಂಡಾಗ ಯುಗಮುನಿಗಳ ಸಾನ್ನಿಧ್ಯದಲ್ಲಿ ಯುಗದಾಚೆಗಿನ ಮಹೋನ್ನತ ಜೈನ ಪರಂಪರೆಯ ಶ್ರೇಷ್ಠತೆ ಸಾರಿದೆ. ಭ|| ಶ್ರೀ ಬಾಹುಬಲಿಗೆ ಜಲಾಭಿಷೇಕದಿಂದ ಮೊದಲ್ಗೊಂಡು ಏಳನೀರು, ಇಕ್ಷುರಸ, ಕ್ಷೇರಾಭಿಷೇಕ, ಕಲ್ಕಚೂರ್ಣ, ಅರಶಿನ, ಚತುಷ್ಕೋಣ ಕಲಶ, ಕಷಾಯ, ಗಂಧಮ, ಚಂದನ, ಅಷ್ಠಗಂಧ, ಪುಷ್ಪವೃಷ್ಟಿಗೊಳಿಸಿ ಮಹಾ ಮಂಗಳಾರತಿಯೊಂದಿಗೆ ಮಹಾಕಲಶವನ್ನು ಶಾಂತಿ ಮಂತ್ರದೊಂದಿಗೆ ಪೂರ್ಣಕುಂಭ ಅಭಿಷೇಕವೇ ಮಹಾಮಸ್ತಕಾಭಿಷೇಕದ ವಿಶೇಷ ಕ್ಷಣವಿದು. ವಸ್ತು ಪ್ರದರ್ಶನ ಮಳಿಗೆ ಮಜ್ಜನದ ಇನ್ನೊಂದು ಪ್ರಮುಖ ಆಕರ್ಷಣೆ ಕೇಂದ್ರವೆಂದರೆ ವಸ್ತುಪ್ರದರ್ಶನ ಮಳಿಗೆಯಾಗಿದೆ. ಒಟ್ಟು 200ಕ್ಕೂ ಅಧಿಕ ಸ್ಟಾಲ್‌ಗಳು ಬಂದಿದ್ದು, ಅದರಲ್ಲೂ ವಸ್ತುಪ್ರದರ್ಶನದಲ್ಲಿ 110 ಸ್ಟಾಲ್‌ಗಳು, 10 ಸರಕಾರದ ಅಂದರೆ ಅರಣ್ಯ ಇಲಾಖೆ, ವಾರ್ತಾ ಇಲಾಖೆ, ಕೃಷಿ, ತೋಟಗಾರಿಕೆ, ನಂದಿನಿ ಸೇರಿದಂತೆ ಮಳಿಗೆಗಗಳು ರಚನೆಯಾಗಿದೆ. ಬೆಳಗ್ಗೆ8ರಿಂದ ರಾತ್ರಿ 11 ಗಂಟೆವರೆಗೆ ಪ್ರತಿದಿನ ವಸ್ತುಪ್ರದರ್ಶನ ವೇದಿಕೆಯಲ್ಲಿ ಸಾಂಸ್ಕೃತಿಕ ವೈಭವ ಇದೆ. ಬೆಟ್ಟದ 2 ಕಿ.ಮೀ. ವ್ಯಾಪ್ತಿಯಲ್ಲಿ ನೀಲನಕಾಶೆ ಮಜ್ಜನದ ಹಿನ್ನೆಲೆ ಜಿಲ್ಲಾಡಳಿತದಿಂದ ಈಗಾಗಲೆ ಬೆಟ್ಟದ 2 ಕಿ.ಮೀ. ವ್ಯಾಪ್ತಿಗೊಳ ಪಟ್ಟಂತೆ ನೀಲನಕಾಶೆ ಸಿದ್ಧಪಡಿಸಲಾಗಿದೆ. ಪ್ರಮುಖವಾಗಿ ಬಾಹುಬಲಿ ಬೆಟ್ಟ ಆಸ್ಪತ್ರೆ, ಪಾರ್ಕಿಂಗ್, ವಸ್ತುಪ್ರದರ್ಶನ ಮಳಿಗೆ, ಅನ್ನಛತ್ರ, ವಸತಿಗೃಹ ಸಹಿತ ಬರುವ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳ ಮಾಹಿತಿ ನೀಡಲಾಗಿದೆ. ನಾಲ್ಕು ಕಡೆಗಳಲ್ಲಿ ವಸತಿಗೃಹ ಸ್ವಯಂಸೇವಕರಿಗೆ, ಪೊಲೀಸರಿಗೆ, ಮೀಸಲು ಪಡೆ ಸೇರಿದಂತೆ ಸ್ವಯಂ ಸೇವಕ ಸಮಿತಿ, ಪೂಜಾ ಸಮಿತಿ, ಮೆರವಣಿಗೆಯ ತಂಡಗಳಿಗೆ ನಿಟ್ಟಡೆ, ವೇಣೂರು ಐಟಿಐ, ಹುಂಬೆಟ್ಟು ಶಾಲೆ, ವಿದ್ಯೋದಯ, ಕುಂಭಶ್ರೀ, ಸರಕಾರಿ ಪ್ರೌಢ ಶಾಲೆಗಳಲ್ಲಿ ಸುಮಾರು 500 ಮಂದಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ವಿಐಪಿ ಸೇರಿದಂತೆ ವಿವಿಐಪಿ ಯಾತ್ರಿಕರಿಗೆ ವೇಣೂರು, ಕಾರ್ಕಳ, ಬೆಳ್ತಂಗಡಿಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ದಿನದ 24 ತಾಸು ಆಸ್ಪತ್ರೆ ಸೇವೆ ಬರುವ ಯಾತ್ರಿಕರ ಆರೋಗ್ಯ ಕ್ಷೇಮಕ್ಕಾಗಿ ವೇಣೂರು ಪ್ರಾ.ಆರೋಗ್ಯ ಕೇಂದ್ರ, ಬಾಹುಬಲಿ ಬೆಟ್ಟದ ಮುಂಭಾಗ ಎಸ್.ಡಿ.ಎಂ. ಆಸ್ಪತ್ರೆಯಿಂದ ಉಳಿದಂತೆ ದಿನವೊಂದರಂತೆ ಮಂಗಳೂರಿನ ಪ್ರಖ್ಯಾತ ಆಸ್ಪತ್ರೆಗಳು ಆರೋಗ್ಯ ಸೇವೆ ಒದಗಿಸುತ್ತಿದೆ. ಜತೆಗೆ ತುರ್ತು ಸೇವೆಗೆಂದು 4 ಮತ್ತು 108 ಆ್ಯಂಬುಲೆನ್ಸ್ ನಿಯೋಜಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆ: ವೇಣೂರು ಐಟಿಐ ಸಮೀಪ, ಕಲ್ಲಬಸದಿ, ಬೆಟ್ಟದ ಸುತ್ತ ವಿಐಪಿ, ವಿವಿಐಪಿ, ಮಾರ್ಗದ ಬದಿ, ಬೆಟ್ಟದ ಕೆಳಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಐಟಿಐನ 150 ವಿದ್ಯಾರ್ಥಿಗಳು, 100 ಗೃಹರಕ್ಷಕ, 200 ಪೊಲೀಸರು 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 75 ಸಿಸಿ ಕಣ್ಣಾವಲು: ಬರುವ ಭಕ್ತರ ಸುರಕ್ಷತೆಗಾಗಿ ಒಟ್ಟು 75 ಕಿಒಗಳಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದೆ. ಒಂದು ಪೊಲೀಸ್ ಕಂಟ್ರೋಲ್ ರೂಂ ಎಲ್ಲವನ್ನು ನಿಯಂತ್ರಿಸುವ ಬೆಟ್ಟದ ಮುಂಭಾಗ ವಾಚ್ ಜತೆಗೆ ಟವರ್ ಅಳವಡಿಸಲಾಗಿದೆ. ಡಿವೈಎಸ್‌ಪಿ, 8 ಮಂದಿ ವೃತ್ತ ನಿರೀಕ್ಷಕರು, ಎಲ್ಲ ಠಾಣೆ ಎಸ್.ಐ.ಗಳು ಜತೆಗಿದ್ದು ಭಕ್ತರ ಸುರಕ್ಷತೆಗೆ ಬೇಕಾದ ಅಗತ್ಯ ಕ್ರಮ ಕೈಗೊಂಡಿದ್ದಾರೆ. ದಿನವೊಂದರಂತೆ ಮೂಲಕ ಪುಷ್ಪವೃಷ್ಟಿ: ಶುಕ್ರವಾರ ಬಾಹುಬಲಿ ಮಸ್ತಕಾಭಿಷೇಕ ಸಂದರ್ಭದಲ್ಲಿ ಸೇವಾಕರ್ತೃಗಳಾದ ವೇಣೂರಿನ ಪ್ರವೀಣ್ ಕುಮಾರ್ ಇಂದ್ರ ಮತ್ತು ಅಶ್ವಿನಿಕುಮಾರಿ ಹಾಗೂ ಮಕ್ಕಳಾದ ಸತ್ಯಪ್ರಸಾದ್, ಸತ್ಯಶ್ರೀ, ಸತ್ಯಪ್ರಭಾ ಮತ್ತು ವಿಶ್ವನ್ ಹಾಗೂ ಕುಟುಂಬಸ್ಥರ ವತಿಯಿಂದ ಹೆಲಿಕಾಪ್ಟರ್‌ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ಸೇವಾಕರ್ತರ ವತಿಯಿಂದ ವಿವಿಧ ಧಾರ್ಮಿಕ ವಿಧಿ- ವಿಧಾನಗಳು ನಡೆದವು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img