ವೇಣೂರು : ಮೂಡುಬಿದಿರೆ ಶ್ರೀಗಳ ಉಪಸ್ಥಿತಿಯಲ್ಲಿ ಸಮಾಲೋಚನಾ ಸಭೆ


Logo

Published Date: 17-Feb-2024 Link-Copied

ವೇಣೂರು: ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ವೈಭವದ ಮಹಾಮಸ್ತಕಾಭಿಷೇಕಕ್ಕೆ ಇನ್ನು ಕೆಲವೇ ದಿನಗಳ ಅಂತರ. ಫೆ. 17ರಂದು ಮೂಡುಬಿದಿರೆ ಶ್ರೀ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀತಿ೯ ಭಟ್ಟಾರಕ ಪಂಡಿತಾಚಾಯ೯ವಯ೯ ಮಹಾಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ಮಹಾಮಸ್ತಕಾಭಿಷೇಕದ ಪೂವ೯ಸಿದ್ಧತೆಯ ಕುರಿತು ಸಮಾಲೋಚನಾ ಸಭೆಯು ಯಾತ್ರಿ ನಿವಾಸದಲ್ಲಿ ನಡೆಯಿತು. ಪೂಜ್ಯ ಸ್ವಾಮೀಜಿಯವರು ಮಹಾಮಸ್ತಕಾಭಿಷೇಕದ ಧಾಮಿ೯ಕ ವಿಧಿ-ವಿಧಾನವು ಯಾವುದೇ ಅಡೆತಡೆಗಳಿಲ್ಲದೆ ಸಾಂಗವಾಗಿ ನೆರವೇರಲಿ ಎಂದು ಆಶಿಸಿದರು. ಅಭಿಷೇಕ ಸಮಿತಿ, ಪೂಜಾ ಸಮಿತಿ, ಆಹಾರ ಸಮಿತಿ, ಮಹಿಳಾ ಸಮಿತಿ ಹಾಗೂ ಸೇವಾಕರ್ತೃಗಳ ಜೊತೆ ಸಮಾಲೋಚನೆ ನಡೆಸಿ ಎಲ್ಲಾ ಸಮಿತಿಗಳಿಗೆ ಮಾಗ೯ದಶ೯ನ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಮಸ್ತಕಾಭಿಷೇಕ ಸಮಿತಿಯ ಕಾಯಾ೯ಧ್ಯಕ್ಷರಾದ ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಾಮಸ್ತಕಾಭಿಷೇಕಕ್ಕೆ ದ್ಯವ್ಯಗಳನ್ನು ಸೇವೆಯಾಗಿ ನೀಡಿದ ತುಮಕೂರಿನ ಉದ್ಯಮಿ ರಾಜೇಂದ್ರ ಕುಮಾರ್‌ ಅವರನ್ನು ಪೂಜ್ಯ ಶ್ರೀಗಳು ಮತ್ತು ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ಗೌರವಿಸಿದರು. ಈ ಸಂದಭ೯ದಲ್ಲಿ ನೋಡಲ್ ಅಧಿಕಾರಿ ಮಾಣಿಕ್ಯ ಎಂ., ಮಸ್ತಕಾಭಿಷೇಕ ಸಮಿತಿಯ ಕೋಶಾಧಿಕಾರಿ ಜಯರಾಜ್ ಕಂಬಳಿ, ಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ ಮತ್ತಿತರರು ಉಪಸ್ಥಿತರಿದ್ದರು. ಕಾಯ೯ದಶಿ೯ ಮಹಾವೀರ್ ಜೈನ್ ಮೂಡುಕೋಡಿ ಗುತ್ತು ಕಾರ್ಯಕ್ರಮ ನಿರೂಪಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img