ಸುಲ್ಕೇರಿ: ಭಗವಾನ್ ನೇಮಿನಾಥ ಬಸದಿಯಲ್ಲಿ ಮಂಡಲ ಪೂಜಾ ಮಹೋತ್ಸವ
Published Date: 16-Feb-2024 Link-Copied
ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಭಗವಾನ್ ೧೦೦೮ ಶ್ರೀ ನೇಮಿನಾಥ ಸ್ವಾಮಿ ಬಸದಿಯ ಮಂಡಲ ಪೂಜಾ ಮಹೋತ್ಸವವು ಕಾರ್ಕಳ ದಾನಶಾಲಾ ಶ್ರೀ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ಪಾವನ ಸಾನ್ನಿಧ್ಯದಲ್ಲಿ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಫೆ. 17ರಂದು ಜೈನ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಜರಗಲಿದೆ ಎಂದು ಆಡಳಿತ ಮೊಕ್ತೇಸರರಾದ ನಾವರಗುತ್ತು ಎನ್. ರವಿರಾಜ ಹೆಗ್ಡೆರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.