ವೇಣೂರು ಭ. ಬಾಹುಬಲಿ ಕ್ಷೇತ್ರಕ್ಕೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಭೇಟಿ
Published Date: 15-Feb-2024 Link-Copied
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ವೇಣೂರು ಭಗವಾನ್ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಫೆ. 14ರಂದು ಮಹಾಮಸ್ತಕಾಭಿಷೇಕ ಸಮಿತಿ ಹಾಗೂ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಅಧ್ಯಕ್ಷರೂ ಆಗಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಾಹುಬಲಿ ಕ್ಷೇತ್ರಕ್ಕೆ ಆಗಮಿಸಿ, ವಸ್ತುಪ್ರದರ್ಶನ, ಆಹಾರ, ಮಹಾಮಸ್ತಕಾಭಿಷೇಕ ವೀಕ್ಷಣೆಗೆ ನಿರ್ಮಿಸಿರುವ ಗ್ಯಾಲರಿಗಳ ಪೂರ್ವ ತಯಾರಿ ಕಾಮಗಾರಿಗಳ ಬಗ್ಗೆ ವಿವಿಧ ಸಮಿತಿಗಳ ಸಂಚಾಲಕರೊ೦ದಿಗೆ ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಬಳಿಕ ಅಟ್ಟಳಿಗೆ ವೀಕ್ಷಿಸಿ, ಕ್ಷೇತ್ರದಲ್ಲಿ ಆಗಿರುವ ಕಾಮಗಾರಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಅಳದಂಗಡಿ ಅರಮನೆಯ ತಿಮ್ಮಣ್ಡರಸರಾದ ಡಾ| ಪದ್ಮಪ್ರಸಾದ್ ಅಜಿಲರು ಇದುವರೆಗಿನ ಕಾಮಗಾರಿಗಳು ಮತ್ತು ಸರಕಾರದ ಅನುದಾನಗಳ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಮಹಾಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ್ ಕುಮಾರ್ ಇಂದ್ರ ಇದುವರೆಗಿನ ಖರ್ಚು ವೆಚ್ಚಗಳು, ಆಗಲಿರುವ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಮಾಜಿ ಸಚಿವ ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಉಪಾಧ್ಯಕ್ಷರಾದ ಕೆ. ಅಭಯಚಂದ್ರ ಜೈನ್, ಕಾರ್ಯನಿರ್ವಾಹಕ ಅಭಿಯಂತರರಾದ ಶಿವಪ್ರಸಾದ್ ಅಜಿಲ, ಜಿಲ್ಲಾ ನೋಡಲ್ ಅಧಿಕಾರಿ ಮಾಣಿಕ್ಯ ಎಂ., ಸಮನ್ವಯ ಅಧಿಕಾರಿ ಡಾ. ಕೆ. ಜಯಕೀತಿ೯ ಜೈನ್ ಧಮ೯ಸ್ಥಳ, ಮಹಾವೀರ ಅಜ್ರಿ ಧರ್ಮಸ್ಥಳ, ಪಡೋಡಿಗುತ್ತು ಎ. ಜೀವಂಧರ್ ಕುಮಾರ್, ಅಭಿಜಿತ್ ಎಂ., ಸುಭಾಶ್ಚಂದ್ರ ಜೈನ್ ಕೆಲ್ಲಪುತ್ತಿಗೆ, ಬಿ. ರತ್ನವರ್ಮ ಇಂದ್ರ, ನವೀನ್‌ಚಂದ್ ಬಲ್ಲಾಳ್, ಎಂ. ವಿಜಯರಾಜ್ ಅಧಿಕಾರಿ, ಡಾ| ಶಾಂತಿಪ್ರಸಾದ್, ಡಾ| ಕೆ. ಆರ್. ಪ್ರಸಾದ್, ವಿಕಾಸ್ ಜೈನ್, ತೀಥ೯ಕ್ಷೇತ್ರದ ಕಾಯ೯ಕಾರಿ ಸಮಿತಿ ಸದಸ್ಯರು ಮತ್ತು ಶ್ರೀ ಬಾಹುಬಲಿ ಯುವಜನ ಸಂಘದ ಸದಸ್ಯರು, ವೇಣೂರು ಜೈನ್ ಮಿಲನ್ ಸದಸ್ಯರು, ಬ್ರಾಹ್ಮಿ ಮಹಿಳಾ ಸಂಘದ ಸದಸ್ಯರು, ಕಲ್ಲು ಬಸದಿ ಬ್ರಿಗೇಡಿಯರ್ಸ್ ಸದಸ್ಯರು ಹಾಗೂ ಮಹಾಮಸ್ತಕಾಭಿಷೇಕ ಮಹೋತ್ಸವದ ವಿವಿಧ ಸಮಿತಿಗಳ ಸಂಚಾಲಕರು, ಸಂಯೋಜಕರು ಉಪಸ್ಥಿತರಿದ್ದರು. ಸಮಿತಿ ಕಾಯ೯ದಶಿ೯ ಮಹಾವೀರ ಜೈನ್ ಮೂಡುಕೋಡಿಗುತ್ತು ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.