ವೇಣೂರು ಮಹಾಮಸ್ತಕಾಭಿಷೇಕ : ಅಟ್ಟಳಿಗೆ ಪ್ರವೇಶಕ್ಕೆ ಅವಕಾಶ
Published Date: 10-Feb-2024 Link-Copied
12 ವರುಷಗಳಿಗೊಮ್ಮೆ ಜರಗುವ ಭಗವಾನ್ ಬಾಹುಬಲಿ ಮೂರ್ತಿಯ ಮಹಾಮಸ್ತಕಾಭಿಷೇಕಕ್ಕೆ ನಿರ್ಮಾಣವಾಗಿರುವ ಅಟ್ಟಳಿಗೆಯನ್ನು ಹತ್ತುವುದು, ದೇವರನ್ನು ಅತೀ ಹತ್ತಿರದಿಂದ ವೀಕ್ಷಿಸುವುದು, ಎತ್ತರದಿಂದ ಪ್ರಕೃತಿಯನ್ನು ನೋಡುವುದು ಅಂದರೆ ಏನೋ ಸಂಭ್ರಮ. ಈ ಸೌಂದರ್ಯ ವೀಕ್ಷಿಸಲು ಭಕ್ತರು ಈಗಾಗಲೇ ವೇಣೂರಿನ ಬಾಹುಬಲಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಅಟ್ಟಳಿಗೆ ಪ್ರವೇಶಿಸಲು ನಿಗದಿತ ಶುಲ್ಕದೊಂದಿಗೆ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಅವಕಾಶವಿರುತ್ತದೆ. ಅಟ್ಟಳಿಗೆಯಲ್ಲಿ ಮೊಬೈಲ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮೂರ್ತಿಯನ್ನು ಮುಟ್ಟದೆ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಮಸ್ತಕಾಭಿಷೇಕ ಮಹೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.