ಹಿಂದೂ ಮಂದಿರಗಳು ಪಿಕ್ ನಿಕ್ ಸ್ಪಾಟ್‌ ಅಲ್ಲ : ಕೋರ್ಟ್ ತೀರ್ಪು - ಹಾಗಾದರೆ ಜೈನರ ಸಮ್ಮೇದಗಿರಿಗೆ ಪ್ರವಾಸಿಗರ ಪ್ರವೇಶ ಯ


Logo

Published Date: 10-Feb-2024 Link-Copied

ಹಿಂದೂ ಮಂದಿರಗಳು ಪಿಕ್‌ನಿಕ್ ಸ್ಪಾಟ್‌ ಅಲ್ಲ. ಕೇವಲ ಹಿಂದೂ ಭಕ್ತರಿಗೆ ಪ್ರವೇಶ ನೀಡಬೇಕೆಂದು ನ್ಯಾಯಾಲಯ ಆದೇಶ ನೀಡಿರುವುದು ಸ್ವಾಗತಾರ್ಹ. ಹಿಂದೂಗಳ ಪವಿತ್ರ ಭಾವನೆಗೆ ಬೆಲೆ ಸಿಕ್ಕಿರುವುದು ಸಂತೋಷ. ಆದರೆ ಈ ನೀತಿ ಎಲ್ಲರಿಗೂ ಅನ್ವಯವಾಗಬೇಕು. ಜೈನರ ಮಂದಿರಗಳ ದರ್ಶನಕ್ಕೆ ಒಂದು ಸೀಮಿತ ನಿಯಮಗಳೊಂದಿಗೆ ಜೈನೇತರರಿಗೂ ಅನುಮತಿ ನೀಡಬಹುದು. ಯಾಕೆಂದರೆ ಜೈನರ ಮಂದಿರಗಳು ಸಮವಸರಣದ ಪ್ರತೀಕವಾಗಿದೆ. ಸಮವಸರಣಕ್ಕೆ ಸರ್ವ ಜೀವಿಗಳಿಗೂ ಪ್ರವೇಶಕ್ಕೆ ಅವಕಾಶ ಇತ್ತು. ಅದೇ ಮಾದರಿಯಲ್ಲಿ ಎಲ್ಲರಿಗೂ ಅಂದರೆ ಭಕ್ತರಿಗೆ ಪ್ರವೇಶ ನೀಡಬಹುದು. ಜೈನ ದರ್ಶನವು ಸಕಲ ಜೀವಿಗಳಿಗೆ ಮುಕ್ತವಾಗಿದೆ. ಆದರೆ ಕೆಲವೊಂದು ಕಟ್ಟುಪಾಡುಗಳು ಇರುತ್ತವೆ. ಇದು ಜೈನರಿಗೂ, ಜೈನೇತರರಿಗೂ ಕಡ್ಡಾಯವಾಗಿ ಇದೆ. ಆದರೆ ಪ್ರವಾಸೋದ್ಯಮದ ನೆಪ ನೀಡಿ ಪ್ರವಾಸಿಗರಿಗೆ ಜೈನ ಮಂದಿರಗಳ ಪ್ರವೇಶ ನೀಡಿರುವುದು ಯಾವ ನ್ಯಾಯವಾಗಿದೆ. ಜೈನರ ಪರಮ ಪವಿತ್ರ ತೀರ್ಥಕ್ಷೇತ್ರ ಜಾರ್ಖಂಡ್ ರಾಜ್ಯದ ಸಮ್ಮೇದ ಶಿಖರ್ಜಿಗೆ ಪ್ರವಾಸಿಗರಿಗೆ ಯಾವ ನಿಯಮಾವಳಿಗಳ ಮೂಲಕ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಜೈನರ ಅದೆಷ್ಟೋ ಜಿನಮಂದಿರಗಳಿಗೆ ಪ್ರವಾಸಿಗರಿಗೆ ದರ್ಶನಕ್ಕೆ ಅವಕಾಶ ನೀಡಿರುವುದು ಯಾವ ಕಾನೂನು ಸ್ವಾಮಿ. ಜೈನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ಕೃತ್ಯಗಳನ್ನು ಪ್ರವಾಸಿಗರು ಎಸಗುತ್ತಿದ್ದಾರೆ. ಇದು ಸರಕಾರದ ಕಣ್ಣಿಗೆ ಕಾಣುವುದಿಲ್ಲವೇ. ಒಬ್ಬರಿಗೊಂದು ನ್ಯಾಯ, ಇನ್ನೊಬ್ಬರಿಗೆ ಇನ್ನೊಂದು ನ್ಯಾಯದ ತಾರತಮ್ಯವನ್ನು ಎಸಗುವ ಈ ನಾಡಿನ ಆಡಳಿತಕ್ಕೆ, ಕಾನೂನಿಗೆ ಅರಿವಾಗಿಲ್ಲವೇ...? ಅಥವಾ ಜಾಣ ಕುರುಡೇ...? ದೇಶದ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾಗಿರುವ ಜೈನರ ಧಾರ್ಮಿಕ ಭಾವನೆಗಳನ್ನು ಓಟು ಬ್ಯಾಂಕ್ ರಾಜಕಾರಣದ ಕಾರಣಕ್ಕಾಗಿ ಪರಿಗಣನೆಗೆ ತೆಗೆದುಕೊಳ್ಳದ ನೀಚ ಪ್ರವೃತ್ತಿಯನ್ನು ಜೈನರು ಗಂಭೀರವಾಗಿ ಪರಿಗಣಿಸಲೇಬೇಕು. ಜೈನರು ಒಗ್ಗಟ್ಟಾಗಿ ಭಾರತದ ಸಂವಿಧಾನದ ಅಡಿಯಲ್ಲಿ ಮೂಲಭೂತ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಇಲ್ಲದೇ ಹೋದಲ್ಲಿ ಜೈನರ ಧಾರ್ಮಿಕ ಭಾವನೆಗಳ ಜೊತೆ ಆಟವಾಡುವ ರಾಜಕೀಯ ಕೊನೆಯಾಗುವುದಿಲ್ಲ. -ನಿರಂಜನ್ ಜೈನ್ ಕುದ್ಯಾಡಿ

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img