ನ್ಯಾಯಮೂರ್ತಿ ಗೌರವಾನ್ವಿತ ಉಷಾರಾಣಿ ಅವರಿಗೆ ಗೌರವ ಸಮರ್ಪಣೆ
Published Date: 21-Oct-2026 Link-Copied
ಬೆಳ್ತಂಗಡಿ: ಕರ್ನಾಟಕದ ನ್ಯಾಯಾoಗ ಕ್ಷೇತ್ರದಲ್ಲಿ ತನ್ನ ಅಪ್ರತಿಮ ಸೇವೆ, ಸುಧೀರ್ಘವಾದ ಅನುಭವ, ಜ್ಞಾನ, ಭದ್ಧತೆಯ ಮೂಲಕ ಇತಿಹಾಸ ಸೃಷ್ಟಿಸಿದ ಅಪೂರ್ವ ವ್ಯಕ್ತಿತ್ವ ಉಷಾರಾಣಿ ಅವರದ್ದು, ಬೆಳ್ತಂಗಡಿ ತಾಲೂಕು, ಪಡoಗಡಿ, ನಡಿಬೆಟ್ಟು ಗುತ್ತು, ಜೈನ ಮನೆತನದ ಮಾನ್ಯರು ಉತ್ತಮ ಜೀವನ ಮೌಲ್ಯ, ಜೀವನ ಕೌಶಲ್ಯ, ಶಿಸ್ತು, ಧಾರ್ಮಿಕ ಹಿನ್ನೆಲೆ, ಸಾಧನೆಯ ಮೂಲಕ ಬೆಳೆದು ಬಂದವರು, ಸಿವಿಲ್ ಜಡ್ಜ್ ಆಗಿ ವಿವಿಧ ತಾಲೂಕು ಮತ್ತು ಜಿಲ್ಲಾ ಕೇoದ್ರಗಳಲ್ಲಿ ಕಾರ್ಯನಿರ್ವಹಿಸಿ, ಇದೀಗ ಕರ್ನಾಟಕ ಉಚ್ಛ ನ್ಯಾಯಲಯದ ನ್ಯಾಯಮೂರ್ತಿ ಆಗಿ ನೇಮಕಗೊಂಡಿರುತ್ತಾರೆ. ಈ ಹಿನ್ನಲೆಯಲ್ಲಿ ಧೀಮತಿ ಮಹಿಳಾ ಸಮಾಜ, ಉಜಿರೆ ಇದರ ಅಧ್ಯಕ್ಷರಾದ ಅಶ್ವಿನಿ ಪ್ರವೀಣ್ ಕುಮಾರ್ ಇವರ ನೇತೃತ್ವದಲ್ಲಿ ಸುಮಾರು ಮೂವತ್ತಕಿಂತಲೂ ಮಿಕ್ಕಿ ಸದಸ್ಯರು ಆಗಮಿಸಿ, ಉಷಾರಾಣಿ ಅವರ ಸ್ವಗ್ರಹ ನಡಿಬೆಟ್ಟು ಗುತ್ತುನಲ್ಲಿ ಗೌರವಿಸಿದರು, ಈ ಸಂದರ್ಭದಲ್ಲಿ ಅವರ ಬಾಲ್ಯದ ಜೀವನ, ತಂದೆ ತಾಯಿಯ ಪ್ರೋತ್ಸಾಹ, ಮಾರ್ಗದರ್ಶನ, ಜೈನ ಧರ್ಮದ ಪಂಚಾನು ವ್ರತಗಳು, ತತ್ವ, ಸಿದ್ಧಾಂತಗಳ ಬಗ್ಗೆ, ತಮ್ಮ ಅನಿಸಿಕೆ ಹಂಚಿಕೊಂಡು, ಸಂತೋಷ ವ್ಯಕ್ತಪಡಿಸಿದರು.