ಸಾಮೂಹಿಕ ಕ್ಷಮಾವಳಿ ಕಾರ್ಯಕ್ರಮ


Logo

Published Date: 19-Oct-2026 Link-Copied

ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಚಾತುರ್ಮಾಸ ಆಚರಣೆಯಲ್ಲಿರುವ ಬಾಲಾಚಾರ್ಯ ಡಾ. ಸಿದ್ದಸೇನ ಮುನಿ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ನಡೆದ ಸಾಮೂಹಿಕ ಕ್ಷಮಾವಳಿ ಕಾರ್ಯಕ್ರಮವು ಅ.18ರಂದು ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡುತ್ತಾ, ಜೈನ ಸ್ವಾಮೀಜಿಗಳ ಚಾತುರ್ಮಾಸ ಕಾರ್ಯಕ್ರಮದ ಕ್ಷಮಾವಳಿ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸುವುದೆ ನನ್ನ ದೊಡ್ಡ ಸೌಭಾಗ್ಯ ಎಂದರಲ್ಲದೆ ಜೈನ ದಿಗಂಬರ ಮುನಿಗಳು ಕಠಿಣ ವೃತಗಳಿಂದ ಸಿದ್ದಿ ಪಡೆದವರು ಅವರ ಆಶೀರ್ವಾದ ನಮಗೆಲ್ಲ ಬಹುಮುಖ್ಯ. ಗೋ ಸೇವೆ ಮಾಡುವ, ಧರ್ಮ ರಕ್ಷಣೆ ಮಾಡುವ ಯಾರೊಬ್ಬರಿಗೆ ಅಪಜಯ ಕನಸಿನ ಮಾತು, ಸನಾತನ ಧರ್ಮದ ಉಳಿವಿನಲ್ಲಿ ಜೈನರ ಕೊಡುಗೆ ಅಪಾರ ಎಂದು ಹೇಳಿ ನನಗೆ ಸನಾತನ ಧರ್ಮದ ಸ್ವಾಮಿಜೀಗಳ ಆಶೀರ್ವಾದ ಇರೊವರೆಗೂ ಸಮಾಜ ಸೇವೆಯೆ ನನ್ನ ಮೊದಲ ಆದ್ಯತೆ ಎಂದರು. ಜೈನ ಧರ್ಮದಲ್ಲಿ ಸನ್ಯಾಸತ್ವ ಸ್ವೀಕರಿಸುವುದು ಈ ಕಲಿಯುಗದಲ್ಲಿ ಬಹಳಷ್ಟು ಕಠಿಣ ಆದರೆ ಜೈನ ಧರ್ಮದಲ್ಲಿ ಸಣ್ಣ ಸಣ್ಣ ಯುವಕರು,ಯುವತಿಯರು ಇವತ್ತು ಸನ್ಯಾಸತ್ವ ಸ್ವೀಕರಿಸಿ ಜಗತ್ತಿನ ಒಳತಿಗಾಗಿ ಪಾದಾಯಾತ್ರೆಯ ಮೂಲಕವೇ ಇಡೀ ದೇಶವನ್ನು ಸಂಚಾರ ಮಾಡುತ್ತಾ ಧರ್ಮ ಪ್ರಭಾವನೆ ಮಾಡುತ್ತಾರೆ ಅವರ ಸಂದೇಶ ನಮಗೆಲ್ಲ ಸದಾಕಾಲ ಪ್ರೇರಣೆ ಎಂದು ಅತಿಥಿಯಾಗಿ ಭಾಗವಹಿಸಿ ಮಾಜಿ ಸಭಾಪತಿಗಳು, ವಿಧಾನ ಪರಿಷತ್ತಿನ ಸದಸ್ಯರೂ ಆಗಿರುವ ಬಸವರಾಜ ಹೊರಟ್ಟಿಯವರು ಮಾತನಾಡಿದರು. ಇನೋರ್ವ ಅತಿಥಿಗಳಾಗಿ ಆಗಮಿಸಿದ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿರುವ ಬಿ ವೈ ವಿಜಯೇಂದ್ರ ಮಾತನಾಡಿ ಜೈನ ಧರ್ಮದ ಶ್ರೇಷ್ಠ ಪರಂಪರೆ ಸಂದೇಶ ಎಂದರೆ ಬಾಳು ಬಾಳಲು ಬೀಡು ಅದರಂತೆ ಈ ಭರತಖಂಡದಲ್ಲಿ ಯಾವ ಮಾನವ ಕುಲ, ಪ್ರಾಣಿ, ಪಕ್ಷಿ, ಪ್ರಕೃತಿಗೆ ಸಣ್ಣ ನೋವನ್ನು ಮಾಡದೆ ಬದುಕುತ್ತಿರುವ ಧರ್ಮ ಯಾವುದಾದರು ಇದ್ದರೆ ಅದು ಜೈನ ಧರ್ಮ. ಜೈನ ಧರ್ಮದ ಅಹಿಂಸೆ, ಶಾಂತಿ ಮತ್ತು ಕ್ಷಮಾಗುಣದ ಮಹೋನ್ನತ ತತ್ವಗಳು ಮನುಕುಲಕ್ಕೆ ಸದಾ ಬೆಳಕಾಗಿವೆ ಎಂದು ಮಾತನಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪ ಪೂ ಬಾಲಾಚಾರ್ಯ 108 ಡಾ. ಸಿದ್ದಸೇನ ಮುನಿ ಮಹಾರಾಜರ ವಹಿಸಿ ನೆರೆದವರನ್ನ ಉದ್ದೇಶಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಹುಧಾ ಮಹಾನಗರ ಪಾಲಿಕೆ ಸದಸ್ಯರಾಗಿರುವ ರಾಜಣ್ಣ ಕೊರವಿ, ಶೀತಲ ಕುಮಾರ ಗೂಗಿ, ರವಿ ದಂಡಿನ, ನಿಂಗಪ್ಪ ಸುತಗಟ್ಟಿ ಮತ್ತು ಛಬ್ಬಿ ಜೈನ ಸಮಾಜದ ಮುಖಂಡರಾದ ರವಿ ಹುಲ್ಲಂಬಿ, ದೇವೆಂದ್ರಪ್ಪ ಕಾಗೇನವರ, ವಿಜಯ ಹನಮಕ್ಕನವರ, ಸೋಮರಾಯ ಹನಮಕ್ಕನವರ, ಅನಂತ ಕಲಘಟಗಿ, ಕುಶಾಲ ನಾಗರಳ್ಳಿ ಹಾಗೂ ಗಣ್ಯಾತೀಗಣ್ಯರು ಉಪಸ್ಥಿತರಿದ್ದರು. ದೊಡ್ಡಾಟ ಕಲಾವಿಧರಾಗಿರುವ ಅಜಿತ ಬಸಾಪೂರ ನಿರೂಪಿಸಿದರು. ವರದಿ : ಶಾಂತರಾಜ ಮಲ್ಲಸಮುದ್ರ

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img