ಮಂದಾರಗಿರಿಯಲ್ಲಿ ಬಸದಿ ನಿರ್ಮಾಣ ಮತ್ತು ಕಮಂಡಲ ಮಂದಿರದ ಭೂಮಿ ಪೂಜೆ
Published Date: 19-Oct-2026 Link-Copied
ತುಮಕೂರು: ಶ್ರೀಕ್ಷೇತ್ರ ಮಂದಾರಗಿರಿಯಲ್ಲಿ ಜಗನ್ಮಾತೆ ಶ್ರೀ ಜ್ವಾಲಾಮಾಲಿನಿ ದೇವಿ ಅಮ್ಮನವರ ಬಸದಿ ನಿರ್ಮಾಣ ಮತ್ತು ಕಮಂಡಲ ಮಂದಿರ (ಸಹಸ್ರ ಜಿನ ಬಿಂಬ ಒಳಗೊಂಡ) ಭೂಮಿ ಪೂಜೆಯು ಆಚಾರ್ಯ ಶ್ರೀ108 ಪ್ರಮುಖ್ ಸಾಗರ್ ಜೀ ಮಹಾರಾಜರವರು ಹಾಗೂ ಸಂಘದ ಪಾವನ ಸಾನ್ನಿಧ್ಯದಲ್ಲಿ ದಿನಾಂಕ:21-10-2026, ಬುಧವಾರ ಬೆಳಗ್ಗೆ 11-00 ಗಂಟೆಗೆ ಆಯೋಜಿಸಲಾಗಿದೆ. ವಿ.ಸೂ: ಇದೇ ದಿನ ಮಧ್ಯಾಹ್ನ 3-00 ಗಂಟೆಗೆ ವಿಜಯದಶಮಿ ಪ್ರಯುಕ್ತ ತುಮಕೂರು ಚಿಕ್ಕಪೇಟೆ ಜಿನಮಂದಿರದಿಂದ ಭಗವಾನ್ 1008 ಶ್ರೀ ಪಾರ್ಶ್ವನಾಥಸ್ವಾಮಿಯ ಶ್ರೀ ವಿಹಾರವು ಪಾಂಡುಕ ಶಿಲೆಯಲ್ಲಿ ಭಗವಂತರಿಗೆ ಪಂಚಾಮೃತ ಅಭಿಷೇಕ, ಶಮಿ ಪೂಜೆ ಆಯೋಜಿಸಲಾಗಿದೆ. ನಂತರ ಪಾಂಡುಕ ಶಿಲೆಯಿಂದ ಮಂಡಿಪೇಟೆ ಮುಖಾಂತರ ಜಿನ ಮಂದಿರಕ್ಕೆ ಮೆರವಣಿಗೆ ನಂತರ ಅಭಿಷೇಕ, ಅಮ್ಮನವರಿಗೆ ಅಲಂಕಾರ ಮತ್ತು ಮಹಾಮಂಗಳಾರತಿ ನೆರವೇರಲಿದೆ.