ಎನ್. ಜಿನ್ನಪ್ಪ ಕಡಂಬ ನಿಧನ


Logo

Published Date: 19-Oct-2026 Link-Copied

ಬೆಳ್ತಂಗಡಿ ತಾಲೂಕಿನ ವೇಣೂರು, ಕುಕ್ಕೇಡಿಗುತ್ತು ನಿವಾಸಿ, ಹಿರಿಯ ವಕೀಲರಾದ ಎನ್.ಜಿನ್ನಪ್ಪ ಕಡಂಬ (91 ವ) ಇವರು ಅ.19ರಂದು ನಿಧನ ಹೊಂದಿದರು. ಇವರು ಮಕ್ಕಳಾದ, ವಂದನ ಯಶೋಧರ, ಸವಿತಾ ರಾಜಣ್ಣ, ಕೆ. ಪ್ರವೀಣ್ ಅಜ್ರಿ, ಡಾ. ಮೃಣಾಲಿನಿ ರತ್ನವರ್ಮಬುಣ್ಣು, ಶರ್ಮಿಳಾ ರಾಜದೀಪಕ್ ಮತ್ತು ವನಿತಾ.ಎಸ್.ಬಳ್ಳಾಲ್ ಹಾಗೂ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ. ಇವರು ಮಂಗಳೂರಿನ S.D.M Law ಕಾಲೇಜಿನ ಫೌಂಡರ್ ಪ್ರಾಂಶುಪಾಲರಾಗಿ 22 ವರ್ಷ ಸೇವೆ ಸಲ್ಲಿಸಿರುತ್ತಾರೆ. ಬೆಳ್ತಂಗಡಿಯಲ್ಲಿ ಹೆಚ್ಚಿನ ಅವಧಿಯಲ್ಲಿ ಲಾ ಪ್ರಾಕ್ಟೀಷನರ್ ಆಗಿದ್ದರಿಂದ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಅಲ್ಲದೇ ಬೆಳ್ತಂಗಡಿ L.D ಬ್ಯಾಂಕ್, ಸಿ.ಎ ಬ್ಯಾಂಕ್ ನ ಅಧ್ಯಕ್ಷರಾಗಿರುವುದರ ಜೊತೆಗೆ ರೋಟರಿ ಕ್ಲಬ್ ನ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದರು. ಇವರು ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img