ಕೈಯಾಳ ಸುಧಾ ಪಾರ್ಶ್ವನಾಥ್‌ ಅವರಿಗೆ ಅಪ್ರತಿಮ ಸಂಘಟಕಿ ಪ್ರಶಸ್ತಿ


Logo

Published Date: 14-Oct-2026 Link-Copied

ಮೂಡಬಿದಿರೆ: ಸರ್ವಮಂಗಳ ಜೈನ ಮಹಿಳಾ ಸಂಘ (ರಿ) ವತಿಯಿಂದ ಇತ್ತೀಚೆಗೆ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕೈಯಾಳ ಸುಧಾ ಪಾರ್ಶ್ವನಾಥ್‌ರವರ ಸಾಮಾಜಿಕ , ಧಾರ್ಮಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಗುರುತಿಸಿ, ಅಪ್ರತಿಮ ಸಂಘಟಕಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಇವರು ಮೂಡುಬಿದಿರೆಯ ಜೈನ್ ಹೈಸ್ಕೂಲ್‌ನಲ್ಲಿ ಕಳೆದ 32 ವರ್ಷಗಳಿಂದ ಸಮಾಜ ವಿಜ್ಞಾನ & ಇಂಗ್ಲೀಷ್ ಶಿಕ್ಷಕಿಯಾಗಿರುತ್ತಾರೆ. ಇವರು ಈವರೆಗೆ ಸುಮಾರು 200 ಜೈನ ಬಸದಿಗಳನ್ನು ಸುಮಧುರ ಹಿನ್ನಲೆ ಗಾಯನದೊಂದಿಗೆ ಸಂಯೋಜನೆಗೊಳಿಸಿ, ಪರಿಚಯಿಸುವ ವೀಡಿಯೋ ಚಿತ್ರೀಕರಣ ಮಾಡಿ ಯೂಟ್ಯೂಬ್‌ಗೆ ಆಪ್‌ಲೋಡ್ ಮಾಡಿರುವ ಖ್ಯಾತಿ ಇವರಿಗಿದೆ. ಸರ್ವ ಮಂಗಳ ಜೈನ ಮಹಿಳಾ ಸಂಘದ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿರುತ್ತಾರೆ. ಇವರು ಮಂಗಳೂರಿನ ಮಾಂಡೋವಿ ಮೋಟಾರ್ಸ್ ನ ಉಪಾಧ್ಯಕ್ಷರಾಗಿರುವ ನೇರೆಂಕಿ ಪಾರ್ಶ್ವನಾಥ್‌ರವರ ಧರ್ಮಪತ್ನಿ.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img