ಫೆ. 10-15 : ಮೂಡುಬಿದಿರೆಯಲ್ಲಿ ಮಕ್ಕಿಮನೆ ಕಲಾವೃಂದ ಬಳಗ ಸೇರಿದಂತೆ ವಿವಿಧ ತಂಡಗಳ ಸಾಂಸ್ಕೃತಿಕ ವೈಭವ


Logo

Published Date: 09-Feb-2024 Link-Copied

ಮೂಡುಬಿದಿರೆ ಜೈನ್ ಪೇಟೆಯ ಇತಿಹಾಸ ಪ್ರಸಿದ್ಧ ಹೀರೆ ಅಮ್ಮನವರ ಬಸದಿ ಧಾಮ ಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ರಥೋತ್ಸವು ಫೆ. 10 ರಿಂದ 16ರ ತನಕ ಜರುಗಲಿದ್ದು, ಫೆ. 10ರಂದು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರಿನ ಮಕ್ಕಿಮನೆ ಕಲಾವೃಂದದಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ. ಫೆ. 11ರಂದು ಕಾವ್ಯ ವಾಚನ-ವ್ಯಾಖ್ಯಾನ ವೈಭವ (ಪ್ರಸಂಗ : ಭ| ಶ್ರೀ ಶಾಂತಿನಾಥ ಚರಿತೆ), ಫೆ. 12ರಂದು ಜೈನ ಅಂತ್ಯಾಕ್ಷರಿ, ಫೆ. 13ರಂದು ಮುನಿರಾಜ ರೆಂಜಾಳ ಅವರ ಪರಿಕಲ್ಪನೆಯಲ್ಲಿ "ಚಾವಡಿ ಚಿಂತನೆ" ಮತ್ತು ಸಪ್ತವರ್ಣ ಬೆಳುವಾಯಿ ಇವರ ತಂಡದವರಿಂದ "ನಾಟ್ಯ ವೈಭವ, ಫೆ. 14ರಂದು "ಅಭಯಮತಿ, ಅಭಯರುಚಿ" ರೂಪಕ ಕಾರ್ಯಕ್ರಮ, ಫೆ. 15ರಂದು ಯಕ್ಷಗಾನ ಶೈಲಿಯಲ್ಲಿ ಕಾವ್ಯ ವಾಚನ ಪ್ರವಚನ ವೈಭವ (ಪ್ರಸಂಗ : ಶ್ರೀ ಪದ್ಮಾವತಿ ದೇವಿ ಚರಿತೆ) ಕಾರ್ಯಕ್ರಮಗಳು ನಡೆಯಲಿದೆ.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img