ರಕ್ಷಾಬಂಧನದ ಸಂದೇಶ
Published Date: 05-Sep-2026 Link-Copied
ರಕ್ಷಾ ಬಂಧನವನ್ನು ಪ್ರತಿ ವರ್ಷ ಶ್ರಾವಣ ನೂಲು ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಭಾವನೆಗಳಿಗೆ ಸಂಬಂಧಿಸಿದ ಹಬ್ಬ 'ರಕ್ಷಾ ಬಂಧನ' ಭಾವನೆಗಳಿಗೆ ಸಂಬಂಧಿಸಿದ ಹಬ್ಬ. ಅಂದು ಬೆಳಿಗ್ಗೆಯೇ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಹೊಸ ಬಟ್ಟೆ ಧರಿಸಿ, ಅಣ್ಣ – ತಂಗಿಯರ ಸಂಬಂಧ ಉತ್ತಮವಾಗಿರಲೆಂದು ಬೇಡಿ, ತನ್ನ ಅಣ್ಣನಿಗೆ ತಿಲಕವಿಟ್ಟು ಆರತಿ ಮಾಡಿ, ಆತನ ಮಣಿಕಟ್ಟಿಗೆ ರಾಖಿ ಕಟ್ಟಿ ನಮಸ್ಕರಿಸಿ ಆಶೀರ್ವಾದವನ್ನು ತಂಗಿ ಸ್ವೀಕರಿಸುತ್ತಾಳೆ. ಅಣ್ಣನೂ ಸಹ ಅದಕ್ಕೆ ಪ್ರತಿಯಾಗಿ ಉಡುಗೊರೆ ನೀಡುತ್ತಾನೆ. ಆದರೆ ಇವೆಲ್ಲಾ ಪೂಜಾ ಕ್ರಮಗಳನ್ನು ಹಬ್ಬದಂದು ಮಾತ್ರ ಮಾಡುವ ಆಚರಣೆಯಾಗಿದೆ. ಅಣ್ಣನಿಂದ ರಕ್ಷಣೆಯ ಭರವಸೆ ಬಹುಷಃ ಯಾವಾಗ ಮನೆ ಮಗಳು ಮದುವೆಯಾಗಿ ತವರು ಮನೆಯಿಂದ ಗಂಡನ ಮನೆಗೆ ಸೇರಿದಳೋ ಅಂದಿನಿಂದಲೇ ಆಕೆಗೆ ಹೆಚ್ಚಿನ ರಕ್ಷಣೆಯ ಅಗತ್ಯವಿರುತ್ತದೆ. ಹೆಣ್ಣಿನ ಮೇಲೆ ಹಲವು ರೀತಿಯ ಶೋಷಣೆ ಹಾಗೂ ಕಿರುಕುಳದಿಂದಾಗಿ ಆಕೆ ತನ್ನ ಗಂಡನ ಮನೆ ತೊರೆದು ತವರಿಗೆ ಬರುತ್ತಾಳೆ. ಏಕೆಂದರೆ ತವರಿನಲ್ಲಿ ತನಗೆ. ರಕ್ಷಣೆ ಹಾಗೂ ಸಹಕಾರ ದೊರೆಯುತ್ತದೆಂಬ ನಂಬಿಕೆಯಿಂದ, ಹಾಗೆಯೇ ಎಲ್ಲಿ ತನ್ನ ತಂಗಿ. ಪುನಃ ಗಂಡನ ಮನೆಗೆ ಹೋದರೆ ಸಂಕಷ್ಟಕ್ಕೆ ಸಿಲುಕುತ್ತಾಳೋ ಎಂಬ ಭಯದಿಂದ ಇಂದಿಗೂ ಮದುವೆಯಾದ ಹೆಣ್ಣು ಮಗಳು ತನ್ನ ತವರಿನಲ್ಲೇ ಉಳಿದಿರುವ ಸಂಖ್ಯೆಯೂ ಅದೆಷ್ಟೇ ಇಂತಹ ಸಂದರ್ಭದಲ್ಲಿ ಅಣ್ಣ ಧೈರ್ಯ ಹೇಳಿ ಪುನಃ ತಂಗಿಯನ್ನು ಕರೆದುಕೊಂಡು ಹೋಗಿ ಗಂಡನ ಮನೆಯಲ್ಲಿ ಬಿಟ್ಟಾಗ ತನ್ನ ರಕ್ಷಣೆಗೆ ಹಾಗೂ ಸಹಾಯಕ್ಕೆ ಸದಾ ತನ್ನ ತವರು ಇದ್ದೇ ಇರುತ್ತದೆ ಎಂಬ ದೃಢ ವಿಶ್ವಾಸವನ್ನು ವ್ಯಕ್ತಪಡಿಸುತ್ತಾಳೆ. ಇದೇ ನಿಜವಾದ ರಕ್ಷಾ ಬಂಧನ. ಸದಾ ಕಾಲ ಸಹೋದರ ಏಳಿಗೆ ಬಯಸುವ ಸಹೋದರಿ ಸಹೋದರರ ಭ್ರಾತೃತ್ವ ಸಾರುವ ಈ ರಕ್ಷಾ ಬಂಧನ ಹಬ್ಬದ ಹಿನ್ನೆಲೆ, ಐತಿಹಾಸಿಕ ಹಾಗೂ ಪೌರಾಣಿಕ ಕಥೆ, ಏಕೆ ರಕ್ಷಾ ಬಂಧನ ಆಚರಿಸುತ್ತಾರೆ ಎಂದು ಮುಂದೆ ತಿಳಿಯೋಣ: ಜೈನ ಧರ್ಮದಲ್ಲಿ ನೂಲು ಹುಣ್ಣಿಮೆಯನ್ನು ಯಾವಾಗಲೂ ಜನಿವಾರ ಧರಿಸುತ್ತಾರೆ. 8ನೇಯ ವರ್ಷದಲ್ಲಿ ವೃತ ಸ್ವೀಕಾರ ಪಡೆದ ಮೇಲೆ ಜೈನ ಶ್ರಾವಕರೆಲ್ಲರೂ ಜನಿವಾರ ಧರಿಸುವುದು ಕಡ್ಡಾಯವಾಗಿದೆ. ಅದರಲ್ಲೂ ಭಗವಂತನ ಅಭಿಷೇಕಾದಿ ಜೈನ ಧಾರ್ಮಿಕ ಪೂಜಾ ಕಾರ್ಯಗಳಲ್ಲಿ ಜನಿವಾರ ಇರುವುದು ಕಡ್ಡಾಯವಾಗಿದೆ. ಹೀಗಿರುವಾಗ ರತ್ನತ್ರಯ ಸೂತ್ರ / ಜನಿವಾರ ಏನನ್ನು ಸೂಚಿಸುತ್ತದೆ ? ಜನಿವಾರದಲ್ಲಿ ಮೂರು ಪ್ರಧಾನ ಎಳೆಗಳು ಇರುತ್ತದೆ ಪ್ರತಿಯೂಂದು ಎಳೆಗಳಲ್ಲಿಯೂ ಒಂಬತ್ತು ನೂಲಿನ ಎಳೆಗಳಿರುತ್ತವೆ. ಹೀಗೆ ಮೂರು ಪ್ರಾಧಾನ ಎಳೆಗಳಲ್ಲಿ ಒಂಬತ್ತು ಎಳೆಗಳಂತೆ ಒಟ್ಟು ಇಪ್ಪತ್ತೇಳು ಎಳೆಗಳಿರುತ್ತವೆ. ಅವುಗಳನ್ನು ಒಂದು ಗುಂಪಿನಲ್ಲಿ ಜೋಡಿಸಲಾಗುತ್ತದೆ ಅದನ್ನು ಬ್ರಹ್ಮಗಂಟು ಎನ್ನುತ್ತಾರೆ. ಮೂರು ಪ್ರಧಾನ ಎಳೆಗಳು:- ಸಮ್ಯಖ್ ದರ್ಶನ, ಸಮ್ಮಖ್ ಜ್ಞಾನ, ಸಮ್ಯಖ್ ಚಾರಿತ್ರಗಳ ಸೂಚಕವಾಗಿದೆ. "ಸತ್ಯ, ಪ್ರಾಮಾಣಿಕತೆ ಮತ್ತು ಪರಿಶುದ್ಧತೆಗಳಿಂದ ಕೂಡಿದ ಸರಿಯಾದ ನಂಬಿಕೆ ಯೋಗ್ಯವಾದ ಜ್ಞಾನ ಯೋಗ್ಯವಾದ ಕರ್ಮ(ಕ್ರಿಯೆ) ಇವುಗಳನ್ನೇ ರತ್ನತ್ರಯಗಳೆಂದಿದ್ದಾರೆ. ಇದರ ಧೃಡ ನಿರ್ಧಾರ ಸೂಚಕವಾಗಿ ನಾವು ಮೂರು ಎಳೆ ಜನಿವಾರ ಧರಿಸುತ್ತೇವೆ. ಇದು ಸದಾ ರತ್ನತ್ರಯಗಳನ್ನು ಎಚ್ಚರಿಸುವ ಸಾಧನವೂ ಆಗಿದೆ. ಇನ್ನು ಆ ಪ್ರಧಾನ ಮೂರು ಎಳೆಗಳ ಪ್ರತಿಯೊಂದು ಎಳೆಗಳಲ್ಲಿಯೂ ತಲಾ ಒಂಬತ್ತರಂತೆ ಇಪ್ಪತ್ತೇಳು ಎಳೆಗಳನ್ನು ಒಳಗೊಂಡಿರುತ್ತದೆ. ಅದು ಜೈನ ಧರ್ಮದ ವಿಶಿಷ್ಟವಾದ ಇಪ್ಪತ್ತೇಳು ತತ್ವಗಳನ್ನು ಸೂಚಿಸುತ್ತದೆ. 27ತತ್ವಗಳು:- 9ದ್ರವ್ಯಗಳು+7ತತ್ವಗಳು+5ಪದಾರ್ಥಗಳು+5ಅಸ್ತಿಕಾಯಗಳು ಹೀಗೆ ಒಟ್ಟಾಗಿರುವ 27ತತ್ವಗಳನ್ನೇ ಜನಿವಾರದ ಎಳೆಗಳು ಸಂಕೇತಿಸುತ್ತವೆ. ಆ ಎಳೆಗಳನ್ನು ಒಂದು ಗಂಟುಗಳಿಂದ ಜೋಡಿಸಲಾಗುತ್ತದೆ ಬ್ರಹ್ಮ ಎಂದರೆ ಆತ್ಮ/ಜ್ಞಾನಗಳ ಧಾರಣೆ ಮಾಡಿ ಆ ಮೂಲಕ ಪವಿತ್ರವಾದ ಮುಕ್ತಿಯನ್ನು ಪ್ರಾಪ್ತಿ ಮಾಡಿಕೂಳ್ಳುತ್ತೇನೆ ಎಂಬುದರ ಸೂಚಕ ಜನಿವಾರದಲ್ಲಿದೆ. "ಆರು ದ್ರವ್ಯ:-ಜೀವ, ಅಜೀವ, ಧರ್ಮ, ಅಧರ್ಮ, ಆಕಾಶ ಮತ್ತು ಕಾಲ" ಏಳು ತತ್ವಗಳು:- ಜೀವ, ಅಜೀವ, ಅಸ್ರವ, ಬಂಧ, ಸಂವರ, ನಿರ್ಜರ ಮತ್ತು ಮೋಕ್ಷ". ಒಂಬತ್ತು ಪದಾರ್ಥಗಳು:-ಜೀವ, ಅಜೀವ, ಅಸ್ರವ, ಬಂಧ, ಸಂವರ, ನಿರ್ಜರ, ಮೋಕ್ಷ ಮತ್ತು ಪಾಪ-ಪುಣ್ಯಗಳು ಐದು ಅಸ್ತಿಕಾಯಗಳು:- ಜೀವ, ಪದ್ಗುಲ, ಧರ್ಮ, ಅಧರ್ಮ ಮತ್ತು ಆಕಾಶ "ಹೀಗೆ 27ತತ್ವ ಮತ್ತು ರತ್ನತ್ರಯಗಳನ್ನು ನಾವು ನಂಬಿ ತಿಳಿದು ಆಚರಿಸುತ್ತೇವೆ ಎಂಬುದರ ಸಂಕೇತವೇ ಜನಿವಾರ ಧಾರಣೆ." ಸ್ತ್ರಿಯರು ಜನಿವಾರವನ್ನು ವರ್ಷಕ್ಕೊಮ್ಮೆ ನೂಲು ಹುಣ್ಣಿಮೆಯ(ಶ್ರವಣ ಮಾಸದ ಹುಣ್ಣಿಮೆ) ದಿನ ಮಾತ್ರ ಧರಿಸುವ ಕ್ರಿಯೆ ಕೆಲವು ಕಡೆ ಇದೆ. ಆಗಾಗ್ಗೆ ಸೂತಕಾದಿ ಮೈಲಿಗೆಗೆ ಒಳಗಾಗುವುದರಿಂದ ಜನಿವಾರ ಅಪವಿತ್ರವಾಗುತ್ತದೆ ಎಂದು ಅದಕ್ಕೆ ತಮ್ಮ ಪತ್ನಿಯ ಬದಲಾಗಿ ಪತಿಯೇ ತಮ್ಮ ಮೂರು ಎಳೆ ಜನಿವಾರದೂಂದಿಗೆ ಇನ್ನೊಂದು ಮೂರು ಎಳೆಯ ಜನಿವಾರವನ್ನು ಧರಿಸುತ್ತಾರೆ. ಹಾಗಾಗೇ ಅವಿವಾಹಿತ ಮೂರು ಎಳೆ ವಿವಾಹಿತ ಅರು ಎಳೆಯ ಜನಿವಾರ ಧರಿಸುವ ರೂಡಿ ಇದೆ. "ಪ್ರತಿವರ್ಷ ಶ್ರವಣ ನಕ್ಷತ್ರವನ್ನೊಳಗೊಂಡ ಶ್ರಾವಣ ಮಾಸದ ಹುಣ್ಣಿಮೆಯ ಶ್ರವಣ ನಕ್ಷತ್ರದಲ್ಲಿ ಹೊಸ ಜನಿವಾರ ಧರಿಸುವ ಕ್ರಮವಿದೆ. ಹಾಗೆಯೇ ಸೂತಕಾದಿ ಇನ್ನಿತರ ಮೈಲಿಗೆಯಾದ ಸಂದರ್ಭದಲ್ಲಿ ಪರಿಶುದ್ಧರಾದ ಮೇಲೆ ಹೊಸ ಜನಿವಾರ ಧರಿಸಿದ ಹಳೆಯ ಜನಿವಾರ ತೆಗೆಯುವ ಕ್ರಮವಿದೆ. "ಜನಿವಾರ ದೇಹ ಶೃಂಗಾರಕ್ಕಾಗಿ ಅಲ್ಲ. ಮನಸ್ಸಿನಲ್ಲಿ ರತ್ನತ್ರಯ ಮತ್ತು 27ತತ್ವಗಳನ್ನು ಸದಾ ಜಾಗೃತಗೊಳಿಸಿ ಆತ್ಮ ಶೃಂಗಾರವನ್ನು ಪ್ರೇರಿಪಿಸುವ ಒಂದು ಧರ್ಮ ಸಾಧನವಾಗಿದೆ. ಅದನ್ನು ಸದಾ ಪವಿತ್ರತೆಯಿಂದ ಕಾಪಾಡಿಕೊಳ್ಳಬೇಕು. ಭಾರತೀಯ ಪುರಾಣಗಳಲ್ಲಿ ಅತ್ಯಂತ ಜನಪ್ರಿಯವಾದ ಕಥೆಯೆಂದರೆ ಶ್ರೀಕೃಷ್ಣ ಮತ್ತು ದ್ರೌಪದಿ. 'ಪಂಚ ಪಾಂಡವರ ಪತ್ನಿ'. ಕಥೆಯ ಪ್ರಕಾರ, ಮಕರ ಸಂಕ್ರಾಂತಿಯಂದು ಕಬ್ಬನ್ನು ಕತ್ತರಿಸುವಾಗ ಕೃಷ್ಣ ತನ್ನ ಕಿರುಬೆರಳನ್ನು ಕತ್ತರಿಸಿಕೊಂಡ. ರುಕ್ಮಿಣಿ ತಕ್ಷಣವೇ ಅದಕ್ಕೆ ಔಷಧ ತರಲು ಸಹಾಯಕರನ್ನು ಕಳುಹಿಸಿದಳು. ಅಷ್ಟರಲ್ಲಿ ಇಡೀ ಘಟನೆಯನ್ನು ವೀಕ್ಷಿಸುತ್ತಿದ್ದ ದ್ರೌಪದಿ ರಕ್ತಸ್ರಾವವನ್ನು ತಡೆಯಲು ಅವಳ ಸೀರೆಯನ್ನು ಸ್ವಲ್ಪ ಕತ್ತರಿಸಿ ಕೃಷ್ಣನ ಬೆರಳನ್ನು ಕಟ್ಟಿದಳು. ಪ್ರತಿಯಾಗಿ, ಅಗತ್ಯವಿದ್ದಾಗ ಅವಳಿಗೆ ಸಹಾಯ ಮಾಡುವುದಾಗಿ ಕೃಷ್ಣ ಭರವಸೆ ನೀಡಿದನು. ಇದಕ್ಕೆ ಅನುಗುಣವಾಗಿ ದ್ರೌಪದಿಯ ಅನಿಯಂತ್ರಿತ ವಸ್ತ್ರಾಪಹರಣದ ಸಮಯದಲ್ಲಿ ಕೃಷ್ಣನು ನೀಡಿದ ಸಹಾಯದ ಹಿಂದಿನ ಕಥೆಯೆಂದರೆ, ಕೃಷ್ಣನು ಬಂದು ಅವಳ ಸೀರೆಗೆ ಅಂತ್ಯವಿಲ್ಲದಂತೆ ಮಾಡಿದನು, ಅವಳಿಗೆ ಅತ್ಯಂತ ಅಗತ್ಯವಿದ್ದಾಗ ಅವಳ ರಕ್ಷಣೆಯನ್ನು ನೀಡುವ ಮೂಲಕ ಅವಳಿಗೆ ಆಗಬೇಕಿದ್ದ ಮುಜುಗರವನ್ನುಂಟು ತಡೆದನು. ಇನ್ನೊಂದು ಚಾರಿತ್ರಿಕ ಕಥೆಯ ಪ್ರಕಾರ, ಅಲೆಕ್ಸಾಂಡರ್ ದಿ ಗ್ರೇಟ್ ಭಾರತವನ್ನು 326 BC ಯಲ್ಲಿ ಆಕ್ರಮಣ ಮಾಡಿದಾಗ, ಅವನ ಪತ್ನಿ ರೊಕ್ಸಾನಾ ವಿರೋಧಿ ಬಣದ ನಾಯಕ ಪೋರಸ್‌ಗೆ ಪವಿತ್ರವಾದ ದಾರವನ್ನು ಕಳುಹಿಸಿದಳು ಮತ್ತು ಯುದ್ಧಭೂಮಿಯಲ್ಲಿ ತನ್ನ ಗಂಡನಿಗೆ ಹಾನಿಯಾಗದಂತೆ ಕೇಳಿಕೊಂಡಳು. ವಿನಂತಿಯನ್ನು ಗೌರವಿಸಿ, ಅವನು ಅಲೆಕ್ಸಾಂಡರ್ ಅನ್ನು ಎದುರಿಸಿದಾಗ, ಪೋರಸ್ ಅವನು ಅಲೆಕ್ಸಾಂಡರ್ ನನ್ನು ಕೊಲ್ಲಲು ನಿರಾಕರಿಸುತ್ತಾನೆ. ಅಂತಿಮವಾಗಿ, ಪೋರಸ್ ಹೈಡಸ್ಪೆಸ್ ನದಿಯ ಯುದ್ಧವನ್ನು ಕಳೆದುಕೊಳ್ಳುತ್ತಾನೆ ಆದರೆ ಅಲೆಕ್ಸಾಂಡರ್ ನನ್ನು ಗೌರವವನ್ನು ಪಡೆಯುತ್ತಾನೆ. ಹೀಗೆ ಈ ಹಬ್ಬವನ್ನು ಹಿಂದು ಮುಸ್ಲಿಂ ಕ್ರಿಶ್ಚಿಯನ್ ಭೇದ ಭಾವವಿಲ್ಲದೆ ಆಚರಣೆಯನ್ನು ಮಾಡುತ್ತಿದ್ದರು. ಭೇದ ಭಾವವಿಲ್ಲದೆ ಸಮಾಜದ ನಿರ್ಮಾಣ ಮಾಡುವ ಕೆಲಸದಲ್ಲಿ ರಾಷ್ಟ್ರೀಯ ಸ್ವಯಂ ಸಂಘವು ಕೂಡ ಹೌದು. ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಇದು ಸಂಘದ ಚಾರಿತ್ರ್ಯ ನಿರ್ಮಾಣದ ಕೆಲಸದಲ್ಲಿ ಸಂಘದ ಪಾತ್ರ ಬಹುಮುಖ್ಯ ಪಾತ್ರವನ್ನು ವಹಿಸಿದೆ. ಹಾಗಾಗಿ ಇಲ್ಲಿ ಪುರುಷರು ರಾಕಿಯನ್ನು ಪುರುಷರಿಗೆ ಕಟ್ಟುವ ಪದ್ಧತಿಯುಂಟು, ಇದನ್ನು ಹಿಂದೂ ಧರ್ಮದ ಜಾಗೃತಿಯನ್ನು, ಭದ್ರತೆಯನ್ನು ಹಾಗೂ ಎಲ್ಲರಲ್ಲೂ ಪ್ರೀತಿ ವಿಶ್ವಾಸ ನಂಬಿಕೆಯನ್ನು ಉಂಟು ಮಾಡಲು ಪಣತೊಟ್ಟ ರಕ್ಷಾಬಂಧನವಾಗಿದೆ. ಹಿಂದುತ್ವದ ಕಿಚ್ಚನ್ನು ಬಡೆದೆಬ್ಬಿಸುವ, ಹೃದಯ ಹೃದಯಗಳ ಪ್ರೇಮ ಬೆಸೆಯುವ ಭಾರತ ವಿಶ್ವ ಗುರುವನ್ನಾಗಿಸುವುದು ಅದನ್ನು ನನಸಾಗುವ ನಿರೀಕ್ಷೆಯನ್ನು ಹೊಂದಿ ಕೇಸರಿಯ ಶ್ರೀ ರಕ್ಷಣೆ ಮತ್ತು ಅನಾವರತ ತೊಡುವ ದೇಶ ರಕ್ಷಣೆಯನ್ನು ಮಾಡೋಣ ಎಲ್ಲರಿಗೂ ರಕ್ಷಾಬಂಧನದ ಶುಭಾಶಯಗಳು. ಪೌರಾಣಿಕ ಹಿನ್ನೆಲೆ: ರಕ್ಷಾಬಂಧನದ ಹಿನ್ನೆಲೆಯನ್ನು ಹುಡುಕುತ್ತಾ ಹೋದಾಗ ಹಲವು ಸ್ವಾರಸ್ಯಕರ ಪೌರಾಣಿಕ ಪ್ರಸಂಗಗಳು ಎದುರಾಗುತ್ತವೆ. ಜನಪ್ರಿಯ ಕಥನದ ಪ್ರಕಾರ, ಶ್ರೀಕೃಷ್ಣನ ಬೆರಳಿಗೆ ಗಾಯವಾದಾಗ ದ್ರೌಪದಿ ತನ್ನ ಸೀರೆಯ ಅಂಚನ್ನು ಹರಿದು ಅವರ ಬೆರಳಿಗೆ ಕಟ್ಟುತ್ತಾಳೆ. ಮುಂದೆ ದ್ರೌಪದಿಗೆ ಸಂಕಷ್ಟ ಎದುರಾದಾಗ ಕೃಷ್ಣನು ಆಕೆಯ ರಕ್ಷಣೆಗೆ ನಿಂತ ಪ್ರಸಂಗವನ್ನು ರಕ್ಷಾಬಂಧನದ ಭಾವನೆಗೆ ಸಂಬಂಧಿಸಿ ನೋಡಲಾಗುತ್ತದೆ. ಅದೇ ರೀತಿ, ದೇವಾಸುರ ಸಂಗ್ರಾಮದ ಸಂದರ್ಭದಲ್ಲಿ ಇಂದ್ರಾಣಿಯು (ಶಚಿದೇವಿ) ಇಂದ್ರನಿಗೆ ರಕ್ಷಾಸೂತ್ರ ಕಟ್ಟಿದ ಕಥೆಯೂ ಪೌರಾಣಿಕ ಪರಂಪರೆಯಲ್ಲಿ ಉಲ್ಲೇಖವಾಗುತ್ತದೆ. ಯಮ-ಯಮುನೆಯರ ಬಾಂಧವ್ಯದ ಕಥೆ ಹಾಗೂ ಬಲಿ ಚಕ್ರವರ್ತಿಗೆ ಲಕ್ಷ್ಮೀದೇವಿಯು ರಕ್ಷಾಬಂಧನ ಮಾಡಿ ವಿಷ್ಣುವನ್ನು ಮರಳಿ ಪಡೆದ ಪ್ರಸಂಗವೂ ಈ ಹಬ್ಬದೊಂದಿಗೆ ಸಂಬಂಧಿಸಿ ಹೇಳಲಾಗುತ್ತದೆ. ಈ ಕಥನಗಳ ಐತಿಹಾಸಿಕತೆಯ ಕುರಿತು ವಿಭಿನ್ನ ಅಭಿಪ್ರಾಯಗಳಿದ್ದರೂ, ಅವುಗಳಲ್ಲಿ ವ್ಯಕ್ತವಾಗುವ ರಕ್ಷಣೆ, ಪ್ರೀತಿ, ಕರ್ತವ್ಯ ಮತ್ತು ಬಾಂಧವ್ಯದ ಮೌಲ್ಯಗಳು ರಕ್ಷಾಬಂಧನದ ಸಾಂಸ್ಕೃತಿಕ ಅರ್ಥವನ್ನು ಗಾಢಗೊಳಿಸಿವೆ. ಸಾಮಾಜಿಕ ಮತ್ತು ಐತಿಹಾಸಿಕ ಆಯಾಮ: ರಕ್ಷಾಬಂಧನವು ಕೇವಲ ಕುಟುಂಬದ ಆಚರಣೆಯಾಗಿರದೆ, ಕಾಲಕ್ರಮೇಣ ಸಾಮಾಜಿಕ ಏಕತೆ ಮತ್ತು ಪರಸ್ಪರ ಬಾಂಧವ್ಯದ ಸಂಕೇತವಾಗಿಯೂ ರೂಪುಗೊಂಡಿದೆ. 1905ರ ಬಂಗಾಳ ವಿಭಜನೆಯ ಸಂದರ್ಭದಲ್ಲಿ ರವೀಂದ್ರನಾಥ ಠಾಕೂರರು ಹಿಂದೂ-ಮುಸ್ಲಿಂ ಐಕ್ಯತೆಯ ಸಂದೇಶವನ್ನು ಸಾರಲು ರಕ್ಷಾಸೂತ್ರ ಕಟ್ಟುವ ಆಚರಣೆಗೆ ಪ್ರೋತ್ಸಾಹ ನೀಡಿದರು. ವಿಭಜನೆಯ ವಿರುದ್ಧ ಜನರಲ್ಲಿ ಒಗ್ಗಟ್ಟಿನ ಭಾವನೆ ಮೂಡಿಸುವ ಪ್ರಯತ್ನವಾಗಿ ಈ ಆಚರಣೆಯನ್ನು ಬಳಸಿಕೊಂಡದ್ದು, ರಕ್ಷಾಬಂಧನದ ಸಾಮಾಜಿಕ ವ್ಯಾಪ್ತಿಯನ್ನು ತೋರಿಸುವ ಪ್ರಮುಖ ಉದಾಹರಣೆಯಾಗಿದೆ. ಉತ್ತರ ಭಾರತವು ಇತಿಹಾಸದ ವಿವಿಧ ಹಂತಗಳಲ್ಲಿ ವಿದೇಶಿ ಆಕ್ರಮಣಗಳಿಗೆ ಒಳಗಾದ ಹಿನ್ನೆಲೆಯಲ್ಲಿ, ಮಹಿಳೆಯರ ಸುರಕ್ಷತೆ ಮತ್ತು ಸಾಮಾಜಿಕ ರಕ್ಷಣೆಯ ಸಂಕೇತವಾಗಿ ಸಹೋದರತ್ವದ ಬಾಂಧವ್ಯವನ್ನು ಬಲಪಡಿಸುವ ಆಚರಣೆಗಳು ಬೆಳೆಯಲು ಕಾರಣವಾಗಿರಬಹುದು. ರಾಜಪೂತ ಮತ್ತು ಮರಾಠಾ ಸಂಸ್ಥಾನಗಳಲ್ಲಿಯೂ ರಕ್ಷಾಬಂಧನಕ್ಕೆ ಸಾಮಾಜಿಕ ಹಾಗೂ ರಾಜಕೀಯ ಮಹತ್ವವಿದ್ದುದಾಗಿ ವಿವಿಧ ಐತಿಹಾಸಿಕ ಕಥನಗಳು ಸೂಚಿಸುತ್ತವೆ. ದಕ್ಷಿಣ ಭಾರತದ ವಿಭಿನ್ನ ಆಚರಣೆಗಳು: ರಕ್ಷಾಬಂಧನದ ಆಚರಣೆ ಭಾರತದ ಎಲ್ಲ ಪ್ರದೇಶಗಳಲ್ಲೂ ಒಂದೇ ರೀತಿಯಲ್ಲಿಲ್ಲ. ದಕ್ಷಿಣ ಭಾರತದಲ್ಲಿ ಸಹೋದರ-ಸಹೋದರಿಯರ ಬಾಂಧವ್ಯವನ್ನು ಪ್ರತಿಬಿಂಬಿಸುವ ಹಲವು ಸ್ಥಳೀಯ ಆಚರಣೆಗಳು ಈಗಾಗಲೇ ಪ್ರಚಲಿತದಲ್ಲಿವೆ. ಕರ್ನಾಟಕದ ಕೆಲವು ಭಾಗಗಳಲ್ಲಿ ನಾಗರಚೌತಿ-ಪಂಚಮಿಯ ಸಂದರ್ಭದಲ್ಲಿ ನಡೆಯುವ ‘ಅಕ್ಕನ-ತದಿಗೆ’ಯಲ್ಲಿ ಸಹೋದರನು ಸಹೋದರಿಯ ಮನೆಗೆ ತೆರಳಿ ಔತಣ ಸ್ವೀಕರಿಸುವ ಸಂಪ್ರದಾಯವಿದೆ. ಕಾರ್ತಿಕ ಮಾಸದ ದೀಪಾವಳಿ ಸಂದರ್ಭದಲ್ಲಿ ಬಲಿಪಾಡ್ಯದ ಮರುದಿನ ಆಚರಿಸಲಾಗುವ ‘ಭಾವನ ಬಿದಿಗೆ’ಯೂ ಸಹೋದರ-ಸಹೋದರಿಯರ ಬಾಂಧವ್ಯಕ್ಕೆ ಸಂಬಂಧಿಸಿದ ಮತ್ತೊಂದು ಆಚರಣೆಯಾಗಿದೆ. ಇಂತಹ ಸ್ಥಳೀಯ ಹಬ್ಬಗಳು ಮತ್ತು ಆಚರಣೆಗಳ ಪ್ರಾಬಲ್ಯದಿಂದಾಗಿ ರಕ್ಷಾಬಂಧನದ ಆಚರಣೆ ದಕ್ಷಿಣ ಭಾರತದಲ್ಲಿ ಉತ್ತರ ಭಾರತದಷ್ಟೊಂದು ವ್ಯಾಪಕವಾಗಿಲ್ಲ. ಶ್ರಾವಣ ಪೂರ್ಣಿಮೆಯಂದು ನಡೆಯುವ ‘ಉಪಾಕರ್ಮ’ ಅಥವಾ ‘ನೂಲಹುಣ್ಣಿಮೆ’ಗೂ ದಕ್ಷಿಣ ಭಾರತದಲ್ಲಿ ವಿಶೇಷ ಧಾರ್ಮಿಕ ಮಹತ್ವವಿದೆ. ಸಂಘಟನೆಗಳ ಆಚರಣೆ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ತನ್ನ ಪ್ರಮುಖ ಉತ್ಸವಗಳಲ್ಲಿ ರಕ್ಷಾಬಂಧನವನ್ನು ಸೇರಿಸಿಕೊಂಡು ಆಚರಿಸುತ್ತ ಬಂದಿದೆ. ಸ್ವಯಂಸೇವಕರು ಭಗವಾಧ್ವಜಕ್ಕೆ ರಕ್ಷಾಸೂತ್ರ ಅರ್ಪಿಸಿ, ನಂತರ ಪರಸ್ಪರ ರಾಖಿ ಕಟ್ಟಿಕೊಳ್ಳುವ ಮೂಲಕ ಸಾಮಾಜಿಕ ಸಾಮರಸ್ಯ, ರಾಷ್ಟ್ರನಿಷ್ಠೆ ಮತ್ತು ಭ್ರಾತೃತ್ವದ ಸಂಕಲ್ಪವನ್ನು ವ್ಯಕ್ತಪಡಿಸುತ್ತಾರೆ. ‘ಹಿಂದೂ ಸಮಾಜ ಒಂದೇ ಕುಟುಂಬ’ ಎಂಬ ಭಾವನೆಯನ್ನು ಬಲಪಡಿಸುವುದು ಈ ಆಚರಣೆಯ ಉದ್ದೇಶಗಳಲ್ಲಿ ಒಂದಾಗಿದೆ. ಹಿಂದೂ ಜಾಗರಣ ವೇದಿಕೆ, ಭಜರಂಗದ