ಬೆಳಗಾವಿಯ ಧರ್ಮನಗರಿ ಶಮನೇವಾಡಿಯಲ್ಲಿ ಜೈನ ಸಮ್ಮೇಳನ
Published Date: 07-Feb-2024 Link-Copied
ಬೆಳಗಾವಿಯ ಧರ್ಮನಗರಿ ಶಮನೇವಾಡಿಯಲ್ಲಿ ಪರಮ ಪೂಜ್ಯ ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮುನಿಮಹಾರಾಜರ 33ನೆಯ ದೀಕ್ಷಾ ಜಯಂತಿ ನಿಮಿತ್ತ ಇಂದು ಮಧ್ಯಾಹ್ನ 2:00 ಗಂಟೆಗೆ ಬೃಹತ್ ಜೈನ ಸಮ್ಮೇಳನ ನಡೆಯಲಿದೆ. ಜೈನ ಸಮ್ಮೇಳನದ ಉದ್ದೇಶ: ಸರಕಾರವು ಜೈನ ನಿಗಮ ಮಂಡಳಿಯನ್ನು ಸ್ಥಾಪಿಸಬೇಕು, ಮಹಾನಗರಗಳಲ್ಲಿ ಜೈನ್ ಹಾಸ್ಟೆಲ್‌ಗಳ ಸ್ಥಾಪನೆ ಆಗಬೇಕು, ಪ್ರತಿ ಜಿಲ್ಲೆಗಳಲ್ಲಿ ಬಡಜನರ ಉಚಿತ ಚಿಕಿತ್ಸೆಗಾಗಿ ಆಸ್ಪತ್ರೆಗಳ ಸ್ಥಾಪನೆ ಆಗಬೇಕು, ಜೈನ ಸಾಧುಗಳ ಸುರಕ್ಷತೆ ಆಗಬೇಕು, ಜೈನ ಬಡ ವಿದ್ಯಾರ್ಥಿಗಳಿಗೆ ನಿಶುಲ್ಕ (ಉಚಿತ) ವಿದ್ಯಾರ್ಜನೆ ಆಗಬೇಕು, ಪ್ರತಿ ಹಳ್ಳಿ ಹಳ್ಳಿಗೆ ಮುನಿ ನಿವಾಸ ಹಾಗೂ ಮಂಗಲ ಕಾರ್ಯಾಲಯಗಳು ನಿರ್ಮಾಣವಾಗಬೇಕು, ಕರ್ನಾಟಕ ಜೈನ ಸಂಸ್ಕೃತಿಯ ಸಂರಕ್ಷಣೆ ಆಗಬೇಕು. ಸಾಂಸ್ಕೃತಿಕ ಕಾರ್ಯಕ್ರಮ: ಇಂದು ಸಂಜೆ ನಟರಾಜ ಎಂಟಟೈನರ್ಸ್ ಅರ್ಪಿಸುವ ವಿಶ್ವ ಪ್ರಸಿದ್ದ ಕನ್ನಡ ಸಂಗೀತಗಾರ ರಾಜೇಶ್ ಕೃಷ್ಣನ್ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.