ಫೆ. 10-16: ಮೂಡುಬಿದಿರೆ ಅಮ್ಮನವರ ಬಸದಿ ಧಾಮ ಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವ


Logo

Published Date: 07-Feb-2024 Link-Copied

ಜೈನಕಾಶಿ ಎಂದೇ ಪ್ರಸಿದ್ಧವಾಗಿರುವ ಮೂಡುಬಿದಿರೆಯ ಹದಿನೆಂಟು ಬಸದಿಗಳಲ್ಲಿ ಒಂದಾದ ಭ| ಶ್ರೀ ಶಾಂತಿನಾಥ ಸ್ವಾಮಿ ಮೂಲ ನಾಯಕನಾಗಿರುವ, ಶ್ರೀ ಹಿರೇ ಅಮ್ಮನವರ ಬಸದಿಯ ಹಾಗೂ ಧ್ವಜಸ್ತಂಭದ ಜೀರ್ಣೋದ್ಧಾರದ ಕಾರ್ಯಕ್ರಮಗಳು 28 ಜನವರಿ 2023ರಂದು ಪ್ರಾರಂಭವಾಗಿ, ಇದೀಗ ಸಂಪೂರ್ಣವಾಗಿ ಮುಕ್ತಾಯಗೊಂಡು ಪುನಃ ಪ್ರತಿಷ್ಠಾ ಮಹೋತ್ಸವದ ಪುಣ್ಯ ಕಾರ್ಯಕ್ಕೆ ಸಿದ್ಧವಾಗಿದೆ. ಯುಗಳ ಮುನಿಗಳಾದ ಪರಮಪೂಜ್ಯ ೧೦೮ ಶ್ರೀ ಅಮೋಘಕೀರ್ತಿ ಮುನಿಮಹಾರಾಜರು ಹಾಗೂ ಪರಮಪೂಜ್ಯ ೧೦೮ ಶ್ರೀ ಅಮರಕೀರ್ತಿ ಮುನಿಮಹಾರಾಜರ ಪಾವನ ಸಾನ್ನಿಧ್ಯದಲ್ಲಿ, ಮೂಡುಬಿದಿರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಹಾಗೂ ದಿವ್ಯ ನೇತೃತ್ವದಲ್ಲಿ ಹಾಗೂ ನಾಡಿನ ಸಮಸ್ತ ಭಟ್ಟಾರಕರ ದಿವ್ಯ ಸಾನ್ನಿಧ್ಯದಲ್ಲಿ ಧಾಮ ಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ರಥೋತ್ಸವ ಕಾರ್ಯಕ್ರಮವು ಫೆ. 10ರಿಂದ ಫೆ. 16ರ ವರೆಗೆ ಜೈನ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಸಂಪನ್ನಗೊಳ್ಳಲಿರುವುದು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img