ಬಿದರೂರು ಜೈನ ಬಸದಿಯಲ್ಲಿ ವಿಶೇಷ ಪೂಜೆ, ಅಭಿಷೇಕ
Published Date: 22-Aug-2026 Link-Copied
ಸಾಗರ/ಕಾರ್ಗಲ್: ಇತಿಹಾಸ ಪ್ರಸಿದ್ಧ ಬಿದರೂರು ಜೈನ ಬಸದಿಯಲ್ಲಿ ಶ್ರಾವಣ ಶುಕ್ರವಾರದ ಅಂಗವಾಗಿ ಭಗವಾನ್ ವರ್ಧಮಾನ ಸ್ವಾಮಿ, ಕೂಷ್ಮಾಂಡಿನಿ ಮಾತೆ ಹಾಗೂ ಪದ್ಮಾವತಿ ಮತ್ತು ಸಿದ್ಧಯಿನಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಅರ್ಚಕರಾದ ಮೋಹನ ಕುಮಾರ ಇಂದ್ರರು, ವಿದ್ಯಾಧರ ಇಂದ್ರರು, ಛವಿಷಾ ಇಂದ್ರರ ನೇತೃತ್ವದಲ್ಲಿ ಕುಂಕುಮಾರ್ಚನೆ, ಅಷ್ಟ ವಿಧಾರ್ಚನೆಗಳು ಮತ್ತು ಮಹಾಮಂಗಳಾರತಿ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು.