ಸುಕೇಶ್ ಕುಮಾರ್ ಜೈನ್ ರವರಿಗೆ- ಆರೋಗ್ಯ ಸೇವಾ ರತ್ನ ಪ್ರಶಸ್ತಿ
Published Date: 09-Jul-2026 Link-Copied
ಬೆಳ್ತಂಗಡಿ: ಬಸವ ಅಕ್ಯೂ ಅಕಾಡೆಮಿ, ಬೆಂಗಳೂರು ವತಿಯಿಂದ ಆಯೋಜಿಸಲಾದ ಅಕ್ಯುಪ್ರೆಶರ್ ಹಾಗೂ ಮರ್ಮಬಿಂದು ಕಾರ್ಯಾಗಾರದಲ್ಲಿ ಔಷಧ ರಹಿತ ಚಿಕಿತ್ಸಾ ಸೇವೆಯಲ್ಲಿ ಸಲ್ಲಿಸಿರುವ ಗಮನಾರ್ಹ ಕೊಡುಗೆಗಾಗಿ ಅಳದಂಗಡಿಯ ಕಲ ಥೆರಪಿಸ್ಟ್ ಸುಕೇಶ್ ಕುಮಾರ್ ಜೈನ್ ಅವರಿಗೆ “ಆರೋಗ್ಯ ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರಲ್ಲಿ ಕಲರ್ ಥೆರಪಿ, ಅಕ್ಯುಪ್ರೆಶರ್, ಮರ್ಮ ಪಾಯಿಂಟ್ ಥೆರಪಿ, ಸೀಡ್ ಥೆರಪಿ, ರೇಖೆ ಹೀಲಿಂಗ್ ಸೇರಿದಂತೆ ವಿವಿಧ ಪರ್ಯಾಯ ಚಿಕಿತ್ಸೆಗಳು ಲಭ್ಯವಿದ್ದು, ಆರೋಗ್ಯ ಜಾಗೃತಿ ಮತ್ತು ಸೇವೆಯ ಮೂಲಕ ಸಮಾಜದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದು, ಸುಕೇಶ್ ಕುಮಾರ್ ಜೈನ್ ಅವರ ಸೇವಾ ಮನೋಭಾವವನ್ನು ಶ್ಲಾಘಿಸಿ ಅಭಿನಂದಿಸಿದರು.