ಮೂಡುಬಿದಿರೆ: ಇನ್ನರ್ ವೀಲ್ ಕ್ಲಬ್ ಗೆ ಪ್ರಶಸ್ತಿ
Published Date: 28-Jun-2026 Link-Copied
ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ 2025–2026ನೇ ಸಾಲಿನಲ್ಲಿ ಸಮಾಜಮುಖಿ ಸೇವಾ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ದಾಖಲಿಸಿದ್ದು, 55 ಇನ್ನರ್ ವೀಲ್ ಕ್ಲಬ್‌ಗಳ ಪೈಕಿ ಅತ್ಯಧಿಕ ಸಂಖ್ಯೆಯ 200 ಸಮಾಜಮುಖಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ "Special Recognition for Remarkable Highest Number of Projects" ವಿಶೇಷ ಗೌರವವನ್ನು ಪಡೆದುಕೊಂಡಿದೆ. ಕ್ಲಬ್‌ನ ಅಧ್ಯಕ್ಷೆ ಶ್ವೇತ ಜೈನ್ ಅವರ ಸಮರ್ಥ ನಾಯಕತ್ವ, ದೂರದೃಷ್ಟಿ ಮತ್ತು ಸಮಾಜಸೇವೆಯ ಬದ್ಧತೆಯ ಫಲವಾಗಿ ಈ ಮಹತ್ವದ ಸಾಧನೆ ಸಾಧ್ಯವಾಗಿದೆ. ಅವರ ಮಾರ್ಗದರ್ಶನದಲ್ಲಿ ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ,ಮಕ್ಕಳ ಹಕ್ಕುಗಳು, ಹಿರಿಯ ನಾಗರಿಕರ care, ಪರಿಸರ ಸಂರಕ್ಷಣೆ ಹಾಗೂ ವಿವಿಧ ಸಮಾಜಮುಖಿ ಕ್ಷೇತ್ರಗಳಲ್ಲಿ ಅನೇಕ ಪರಿಣಾಮಕಾರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಯಿತು. ಈ ಸಾಧನೆಗೆ ಕಾರ್ಯದರ್ಶಿ ಅನಿತಾ ಪೃತ್ವಿರಾಜ್ ಶೆಟ್ಟಿ ಹಾಗೂ ಕ್ಲಬ್‌ನ ಎಲ್ಲಾ ಸದಸ್ಯೆಯರ ಶ್ರಮ, ಸಹಕಾರ ಮತ್ತು ಸಮರ್ಪಿತ ಸೇವೆಯೂ ಪ್ರಮುಖ ಕಾರಣವಾಗಿದೆ ಎಂಬುದನ್ನು ಅಧ್ಯಕ್ಷರು ನೆನಪಿಸಿಕೊಳ್ಳುತ್ತಾರೆ.