ಡಾ. ಪದ್ಮಪ್ರಸಾದ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ
Published Date: 13-Jun-2026 Link-Copied
ಬೆಳ್ರಂಗಡಿ: ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಡಾ. ಪದ್ಮಪ್ರಸಾದ್ ರವರು ಡಾ.ಪಾಂಡುರಂಗರಾವ್ ಎಂ. ವಿರವರ ಮಾರ್ಗದರ್ಶನದಲ್ಲಿ “ಎ ಡೀಪ್ ಲರ್ನಿಂಗ್ ಹೈಬ್ರಿಡ್ ಮಾಡೆಲ್ ಫಾರ್ ಇಂಪ್ರೂವಿಂಗ್ ಮಷಿನ್ ಟ್ರಾನ್ಸ್‌ಲೇಶನ್ ಆಫ್ ಲೋ-ರಿಸೋರ್ಸ್ ಲ್ಯಾಂಗ್ವೇಜ್” ಎಂಬ ಸಂಶೋಧನಾ ಪ್ರಬಂಧಕ್ಕೆ ಜೈನ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ ವತಿಯಿಂದ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ನಲ್ಲಿ “ಡಾಕ್ಟರ್ ಆಫ್ ಫಿಲಾಸಫಿ” (PHD) ಪದವಿ ಪ್ರದಾನಗೊಂಡಿದೆ. ಇವರು ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ರತ್ನವರ್ಮ ಜೈನ್ ಮತ್ತು ವಸಂತಿ ಜೈನ್ ದಂಪತಿಗಳ ಪುತ್ರ.