ನಾರಾವಿ ಧಾಮ ಸಂಪ್ರೋಕ್ಷಣೆ ಪ್ರಯುಕ್ತ ಜೈನ ಶ್ರಾವಕ ಶ್ರಾವಕಿಯರಿಗೆ ರಾಜ್ಯ ಮಟ್ಟದ ಸ್ಪರ್ಧೆ
Published Date: 01-Feb-2024 Link-Copied
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮದ ಭ| ೧೦೦೮ ಶ್ರೀ ಧರ್ಮನಾಥ ಸ್ವಾಮಿ ಬಸದಿಯ ಧಾಮ ಸಂಪ್ರೋಕ್ಷಣಾ ಪೂರ್ವಕ ಪ್ರತಿಷ್ಠಾ ಮಹೋತ್ಸವವು ಮಾರ್ಚ್ 22ರಿಂದ 24ರ ವರೆಗೆ ನಡೆಯಲಿದ್ದು, ಈ ಪ್ರಯುಕ್ತ ಜೈನ ಶ್ರಾವಕ ಶ್ರಾವಕಿಯರಿಗೆ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಗಳ ವಿವರ ಮತ್ತು ನಿಯಮಗಳು ಈ ಕೆಳಗಿನಂತಿದೆ. 1. ಧರ್ಮನಾಥ ಜಿನ ಸಂಗೀತ ಸ್ಪರ್ಧೆ ಪ್ರಥಮ ಬಹುಮಾನ : 10,000 ನಗದು ಮತ್ತು ಸ್ಮರಣಿಕೆ ದ್ವಿತೀಯ ಬಹುಮಾನ : 8,000 ನಗದು ಮತ್ತು ಸ್ಮರಣಿಕೆ ನಿಯಮಗಳು: * ಧರ್ಮನಾಥ ಸ್ವಾಮಿಯ ಹಾಡು / ಭಜನೆಯನ್ನು ಒಬ್ಬರೇ ಹಾಡಿ, ವಿಡಿಯೋ ಮಾಡಿ ಕಳುಹಿಸಬೇಕು. * ಸಾಹಿತ್ಯ, ಸ್ವರ, ಹಿನ್ನಲೆ ಸಂಗೀತ, ಛಾಯಾಗ್ರಹಣ ಇತ್ಯಾದಿ ಅಂಶಗಳನ್ನು ಪರಿಗಣಿಸಿ ವಿಜೇತರನ್ನು ಆಯ್ಕೆ ಮಾಡಲಾಗುವುದು. * ನೀವು ಕಳುಹಿಸಿದ ಹಾಡು / ಭಜನೆ ಮತ್ತು ಅದರ ವಿಡಿಯೋ ಈ ಹಿಂದೆ ಎಲ್ಲಿಯೂ ಪ್ರಕಟಗೊಂಡಿರಬಾರದು. * ವಿಡಿಯೋದ ಸಮಯ ಕನಿಷ್ಠ 5 ನಿಮಿಷ, ಗರಿಷ್ಠ 8 ನಿಮಿಷಗಳಾಗಿರಬೇಕು. 2. ಪ್ರಬಂಧ ಸ್ಪರ್ಧೆ ಪ್ರಥಮ ಬಹುಮಾನ : 3,000 ನಗದು ಮತ್ತು ಸ್ಮರಣಿಕೆ ದ್ವಿತೀಯ ಬಹುಮಾನ : 2,000 ನಗದು ಮತ್ತು ಸ್ಮರಣಿಕೆ ನಿಯಮಗಳು: * ಪ್ರಬಂಧದ ವಿಷಯ: “ಜೈನ ಧರ್ಮದ ಆಚರಣೆಗಳು ಮತ್ತು ವೈಜ್ಞಾನಿಕತೆ” * ಪ್ರಬಂಧವು 900 ಶಬ್ದಗಳನ್ನು ಮೀರಿರಬಾರದು. * ಪ್ರಬಂಧವನ್ನು ಕನ್ನಡ ನುಡಿಯಲ್ಲಿ ಟೈಪ್ ಮಾಡಿ PDF ಮಾಡಿ ಕಳುಹಿಸತಕ್ಕದು. ವಿಶೇಷ ಸೂಚನೆ : 1. ವಿಡಿಯೋ ಮತ್ತು ಪ್ರಬಂಧಗಳನ್ನು ಕಳುಹಿಸಲು ಕೊನೆಯ ದಿನಾಂಕ 5 ಮಾರ್ಚ್ 2024. 2. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. 3. ವಿಡಿಯೋ ಮತ್ತು ಪ್ರಬಂಧಗಳನ್ನು ಕಳುಹಿಸುವವರು ತಮ್ಮ ಫೋಟೋ, ವಿಳಾಸ ಮತ್ತು ಮೊಬೈಲ್ ನಂಬರ್‌ಗಳನ್ನು ಜೊತೆಗೆ ಕಳುಹಿಸಬೇಕು. ವಿಡಿಯೋ ಮತ್ತು ಪ್ರಬಂಧಗಳನ್ನು naravibasadi24@gmail.comಗೆ ಮೇಲ್ ಮಾಡಬಹುದು ಅಥವಾ 9481016887 ವಾಟ್ಸ್ಯಾಪ್ ನಂಬರ್‌ಗೆ ಕಳುಹಿಸಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಅತುಲ್ ಎಸ್. ಸೇಮಿತ - 9481016887, ಜ್ಞಾನೇಂದ್ರ ಕುಮಾರ್ ಜೈನ್ - 9902799196 ಇವರನ್ನು ಸಂಪರ್ಕಿಸಬಹುದು.