ಕರ್ನಾಟಕದ ಖ್ಯಾತ ಇಬ್ಬರು ಶಾಸ್ತ್ರೀಗಳಿಗೆ ರಾಷ್ಟ್ರ ಮಟ್ಟದ ಜೈನ ಸ್ಮೃತಿ ಶಾಸ್ತ್ರೀ ಪರಿಷತ್ ಪ್ರಶಸ್ತಿ


Logo

Published Date: 02-Jun-2026 Link-Copied

ಜೈನ ಧರ್ಮದ ಸಂಸ್ಕೃತಿ ಪರಂಪರೆ ಹಾಗೂ ಧರ್ಮಪ್ರಭಾವನೆಗೆ ಮಹತ್ತರವಾದ ಕೊಡುಗೆ ನೀಡುತ್ತಿರುವವರು ಈ ದೇಶದ ಅಪಾರವಾದ ಜ್ಞಾನ ಪಾಂಡಿತ್ಯ ಹೊಂದಿದ ಶಾಸ್ತ್ರೀಗಳು ವಿದ್ವಾಂಸರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇವರಿಂದಲೇ ಸಂಸ್ಕಾರ ವೃದ್ಧಿಯಾಗುವುದು ಮತ್ತು ಪರಂಪರೆ ರಕ್ಷಣೆಯಾಗುವುದು ಈ ಹಿನ್ನಲೆಯಲ್ಲಿ ನಾಡಿನ ಅನೇಕ ಶಾಸ್ತ್ರೀಗಳು ತಮ್ಮನ್ನು ತಾವು ಜೈನ ಧರ್ಮದ ಪ್ರಭಾವಕ್ಕೆ ಪ್ರಚಾರಕ್ಕಾಗಿ ತೊಡಗಿಸಿಕೊಂಡಿದ್ದಾರೆ ಇವರುಗಳ ಸಾಲಿನಲ್ಲಿ ಕರ್ನಾಟಕದ ಇಬ್ಬರು ಹೆಸರಾಂತ ಶಾಸ್ತ್ರೀಗಳನ್ನು ಗುರುತಿಸಿ ದೇಶದ ಪ್ರತಿಷ್ಠಿತ ಅಖಿಲ ಭಾರತ ದಿಗಂಬರ ಜೈನ ಶಾಸ್ತ್ರೀ ಪರಿಷತ್ ಸಂಸ್ಥೆಯು " ಜೈನ ಸ್ಮೃತಿ ಶಾಸ್ತ್ರೀ ಪರಿಷತ್ ಪ್ರಶಸ್ತಿ " ನೀಡಿ ಗೌರವಿಸಿದೆ. ಅವರೇ ವಿದ್ಯಾ ವಾಚಸ್ಪತಿ ಡಾ. ಮೋಹನಕುಮಾರ ಶಾಸ್ತ್ರೀ ಮತ್ತು ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರೀ ಇವರು. ದಿನಾಂಕ ಮೇ 30 ರಂದು ರಾಜಸ್ಥಾನದ ಕೋಟಾ ಜಿಲ್ಲೆಯ ದಿಗಂಬರ ಜೈನ ಅತಿಶಯ ಕ್ಷೇತ್ರ ಕೇಶವರಾಯ ಪಟಾನ್ ಇಲ್ಲಿ ಭಾರತ ಗೌರವ ಗಣನಿ ಆರ್ಯಾಕಾ ಸ್ವಸ್ತಿಭೂಷಣ ಪೂಜ್ಯ ಮಾತಾಜಿ ಇವರ ಸಾನಿದ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಇಬ್ಬರಲ್ಲಿ ಒಂದು ಸಾಮ್ಯತೆ ಇದೆ ಅದೇನೆಂದರೆ ಡಾ. ಮೋಹನಕುಮಾರ ಶಾಸ್ತ್ರೀ ಮೂಲತಃ ಜೈನ ಕಾಶಿ ಎಂದೇ ಹೆಸರಾದ ಶ್ರವಣಬೆಳಗೊಳ ಇವರ ಜನ್ಮಭೂಮಿ ಆದರೆ ಇವರ ಕರ್ಮಭೂಮಿ ಸಾಂಸ್ಕೃತಿಕ ನಗರ ಮೈಸೂರು ಇಲ್ಲಿ ಆಚಾರ್ಯ ಗುರುಕುಲದ ಮೂಲಕ ಈ ಭಾಗದಲ್ಲಿ ಧರ್ಮಪ್ರಭಾವನೆ ಮಾಡಿದವರು ಇನ್ನೊಬ್ಬರು ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರೀ ಇವರ ಜನ್ಮಭೂಮಿ ಮೂಲತಃ ಜೈನರ ಬೀಡು ಎಂದೇ ಹೆಸರಾದ ಬೆಳಗಾವಿ ಜಿಲ್ಲೆಯ ಯಲಿಮುನ್ನೋಳಿಯವರು ಆದರೆ *ಕರ್ಮಭೂಮಿ ಶ್ರವಣಬೆಳಗೊಳ ಎಂಬುದು ಗಮನಾರ್ಹ. ತನ್ಮೂಲಕ ಇವರಿರ್ವರ ಜ್ಞಾನ ಜರಿ ಈ ನಾಡಿನಾದ್ಯಂತ ಹರಿದು ಧರ್ಮಪ್ರಭಾವನೆಗೆ ಕಾರಣವಾಗಿದೆ. ಇವರೀರ್ವರ ಸಾಧನೆ ಸೇವೆಗೆ ಅಖಿಲ ಭಾರತ ದಿಗಂಬರ ಜೈನ ಶಾಸ್ತ್ರಿ ಪರಿಷದ್ ವತಿಯಿಂದ ರಾಷ್ಟ್ರ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಭಾಜನರಾದ ಇರ್ವರಿಗೂ ಶುಭಾಶಯಗಳು ಮತ್ತು ಅಭಿನಂದನೆಗಳು. ವಿದ್ಯಾ ವಾಚಸ್ಪತಿ ಡಾ. ಮೋಹನ ಕುಮಾರ ಶಾಸ್ತ್ರಿ, ಕುಲ ಸಚಿವರು ಆಚಾರ್ಯ ಗುರುಕುಲ ಮೈಸೂರು ಇವರ ಸಂಕ್ಷಿಪ್ತ ಪರಿಚಯ : ಈ ನಾಡು,ಸಮಾಜ ಕಂಡ ಅಪರೂಪದ ಚಿಂತಕ ಸಾಹಿತಿ ಶಿಕ್ಷಣ ಪ್ರೇಮಿ ವಿದ್ಯಾವಾಚಸ್ಪತಿ ಡಾ ಎಚ್ ಪಿ ಮೋಹನಕುಮಾರ ಶಾಸ್ತ್ರಿಯವರು ಮೈಸುರು ಆಚಾರ್ಯ ಗುರುಕುಲ ವಿದ್ಯಾಲಯವನ್ನು ಕಳೆದ ದಶಕಗಳಿಂದ ಇವರು ಅತ್ಯಂತ ಸಮರ್ಥತವಾಗಿ ಮುನ್ನಡೆಸುತ್ತಿದ್ದು ಈ ಸಂಸ್ಥೆಯ ಕುಲಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯ ಮುಖಾಂತರ ಜೈನ ಆಗಮ ಜೈನ ಸಂಸ್ಕೃರಕ್ಷಣೆ ಗ್ರಂಥ ಪ್ರಕಟನೆ ಪ್ರಸಾರ ಪ್ರಚಾರ ಉಪನ್ಯಾಸ ಪ್ರವಚನ ಇತ್ಯಾದಿಗಳನ್ನು ಆನ್ಲೈನ್ ಮೂಲಕ ಜೈನ ಪಾಠ ಬೋಧನೆಗಳನ್ನು ಪ್ರಪಂಚದಾದ್ಯಂತ ಜೈನರಿಗೆ ತಲುಪಿಸಿದ್ದಾರೆ ಮತ್ತು ಈಗಲೂ ಮುಂದುವರಿದಿದ್ದಾರೆ, ಈ ಮೂಲಕ ಯುವ ಜನಾಂಗಕ್ಕೆ ಜೈನ ಜಾಗ್ರತಿ ರಕ್ಷಣೆ ಮತ್ತು ಅರಿವು ಮೂಡಿಸುವ ಮಹತ್ವದ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಎಲ್ಲಾ ಜೈನ ಮಠಗಳ ಪೂಜ್ಯ ಭಟ್ಟಾರಕ ಮಹಾಸ್ವಾಮಿಗಳ ಶುಭಾಶೀರ್ವಾದ ಮತ್ತು ಪ್ರೇರಣೆಯಿಂದ ಕಳೆದ ಎರಡು ವರ್ಷಗಳಿಂದ ಮಹಾಕವಿ ರತ್ನಾಕರವರ್ಣಿ ಅವರ ಶತಕ, ಅಪರಾಜಿತ ಶತಕ ನಿರಂಜನ ಸ್ತುತಿ ಭರತೇಶ ವೈಭವ ಅಣ್ಣನ ಪದಗಳು ಇತ್ಯಾದಿ ಸರಳವಾಗಿ ಎಲ್ಲರಿಗೂ ತಿಳಿಯುವಂತೆ ಬಹಳ ಸುಂದರವಾಗಿ ವ್ಯಖ್ಯಾನ ಸಹಿತ ಕಾವ್ಯವಾಚನ ಮಾಡುತ್ತಾ ಇವುಗಳ ಪ್ರಚಾರ ಮತ್ತು ಪ್ರಸಾರ ಮೂಲಕ ಸಾಮಾನ್ಯರಿಗೂ ಕಾವ್ಯದ ಸ್ವಾದವನ್ನು ಉಣಬಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರಿ ಶ್ರವಣಬೆಳಗೊಳದ ಪ್ರಾಕೃತ ಮತ್ತು ಹಿಂದಿ ವಿಭಾಗದ ಮುಖ್ಯಸ್ಥರು : ಜೈನ ಧರ್ಮದ ಸಾರವನ್ನು, ಪ್ರಾಕೃತ ಮತ್ತು ಸಂಸ್ಕೃತ ಭಾಷೆಗಳ ಆಳವಾದ ಜ್ಞಾನವನ್ನು ಜಗತ್ತಿಗೆ ಪಸರಿಸುತ್ತಿರುವ ಅಪರೂಪದ ಸಾಧಕರಲ್ಲಿ ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರಿ ಪ್ರಮುಖರು. ಬೆಳಗಾವಿ ಜಿಲ್ಲೆಯ ಯಲಿಮುನ್ನೋಳಿಯ ಪುಣ್ಯಭೂಮಿಯಲ್ಲಿ ಅಣ್ಣಾಸಾಹೇಬ್ ಮತ್ತು ಶ್ರೀಮತಿ ಜೀವಕ್ಕ ದಂಪತಿಗಳ ಸುಪುತ್ರನಾಗಿ 24 ಅಕ್ಟೋಬರ್ 1980 ರಂದು ಜನಿಸಿದ ಇವರು, ಇಂದು ಶ್ರವಣಬೆಳಗೊಳದ ಪವಿತ್ರ ಕ್ಷೇತ್ರದಲ್ಲಿ ತಮ್ಮ ಜ್ಞಾನದೀವಿಗೆಯನ್ನು ಬೆಳಗುತ್ತಿದ್ದಾರೆ. ಬಾಲ್ಯದಿಂದಲೇ ಜ್ಞಾನಪಿಪಾಸುವಾಗಿದ್ದ ರಾಜೇಂದ್ರ ಅವರು ಸಂಸ್ಕೃತ, ಪ್ರಾಕೃತ ಮತ್ತು ಜೈನಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ವಿಶೇಷವೆಂದರೆ 2006ರಲ್ಲಿ ಬಿಹಾರ ರಾಜ್ಯಕ್ಕೆ ಪ್ರಾಕೃತ ವಿಷಯದಲ್ಲಿ ಮೊದಲ ಶ್ರೇಣಿ (69.5%)ಪಡೆದು 'ಚಿನ್ನದ ಪದಕ'ಕ್ಕೆ (Gold Medal) ಭಾಜನರಾಗಿದ್ದಾರೆ. ಯುಜಿಸಿ ನೆಟ್ (NET) ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಇವರು, ತಮ್ಮ ವಿದ್ವತ್ಪೂರ್ಣ ಸಂಶೋಧನೆಗಾಗಿ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ವೃತ್ತಿ ಜೀವನ: ಪ್ರಸ್ತುತ ಶ್ರವಣಬೆಳಗೊಳದ NIPSAR ಸಂಸ್ಥೆಯಲ್ಲಿ ಪ್ರಾಕೃತ ಮತ್ತು ಹಿಂದಿ ವಿಭಾಗದ ಮುಖ್ಯಸ್ಥರಾಗಿ (HOD) ಸೇವೆ ಸಲ್ಲಿಸುತ್ತಿದ್ದಾರೆ. ಗ್ರಂಥಾಲಯ ಸಹಾಯಕರಿಂದ ಆರಂಭಿಸಿ ಉಪನ್ಯಾಸಕರವರೆಗೆ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿರುವ ಇವರು, ಕಳೆದ ಮೂರು ದಶಕಗಳಿಂದ (1995 ರಿಂದ 2026) ಶಿಕ್ಷಣ ಮತ್ತು ಧರ್ಮ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಾಧನೆ ಮತ್ತು ಪ್ರಶಸ್ತಿಗಳು: ಇವರ ನಿಸ್ವಾರ್ಥ ಸೇವೆಗೆ ಅನೇಕ ಗೌರವಗಳು ಸಂದಿವೆ: 2023 ಆಚಾರ್ಯ ವಿಮಲಸಾಗರ ಪ್ರಶಸ್ತಿ. 2022 ಆದರ್ಶ ಜೈನ ಶಿಕ್ಷಕ ಪ್ರಶಸ್ತಿ. 2026 ಈಗ ಜೈನ ಸ್ಮೃತಿ ಶಾಸ್ತ್ರೀ ಪರಿಷತ್ ಪ್ರಶಸ್ತಿ ಮತ್ತೊಂದು ಗರಿ ಸೇರ್ಪಡೆಯಾಗಿದೆ. 2012: ದೆಹಲಿ ದೂರದರ್ಶನದಲ್ಲಿ ಭಗವಾನ್ ಮಹಾವೀರರ ಕುರಿತು ವಿಶೇಷ ಉಪನ್ಯಾಸ. ಸಾಹಿತ್ಯ ಸೇವೆ: ಈಗಾಗಲೇ ಇವರ 5 ಪುಸ್ತಕಗಳು ಲೋಕಾರ್ಪಣೆಗೊಂಡಿದ್ದು, ಮತ್ತೊಂದು 5 ಕೃತಿಗಳು ಬಿಡುಗಡೆಗೆ ಸಜ್ಜಾಗಿವೆ. ಬಹುಮುಖ ಪ್ರತಿಭೆ: ಕೇವಲ ಅಧ್ಯಾಪನಕ್ಕೆ ಸೀಮಿತವಾಗದ ಶಾಸ್ತ್ರಿಗಳು, ಧಾರ್ಮಿಕ ಶಿಬಿರಗಳಲ್ಲಿ ಪಾಠ ಪ್ರವಚನ ನೀಡುವುದು, ಪೂಜಾ ವಿಧಾನಗಳನ್ನು ನಡೆಸಿಕೊಡುವುದು ಮತ್ತು ಸುಶ್ರಾವ್ಯವಾಗಿ ಭಜನೆಗಳನ್ನು ಹಾಡುವುದರಲ್ಲಿ ಸಿದ್ಧಹಸ್ತರು. ಎನ್.ಎಸ್.ಎಸ್ (NSS) ಚಟುವಟಿಕೆಗಳ ಮೂಲಕ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದಾರೆ. ಇವರ ಜ್ಞಾನದ ಲಾಭವನ್ನು ಜನಸಾಮಾನ್ಯರಿಗೆ ತಲುಪಿಸಲು 'drrajendrapatilshastri7492' ಎಂಬ ಯೂಟ್ಯೂಬ್ ಚಾನಲ್ ಮೂಲಕವೂ ಸಕ್ರಿಯರಾಗಿದ್ದಾರೆ. ಕೌಟುಂಬಿಕ ಹಿನ್ನೆಲೆ: ಧರ್ಮಪತ್ನಿ ಶ್ರೀಮತಿ ಜೀವರತ್ನ ಮತ್ತು ಪುತ್ರ ಸಮ್ಯಕ್ ಆರ್. ಜೈನ ಅವರೊಂದಿಗೆ ಶ್ರವಣಬೆಳಗೊಳದಲ್ಲಿ ನೆಲೆಸಿರುವ ಇವರು, ಸಂಸಾರದ ಜೊತೆಗೆ ಸಂಯಮದ ಜೀವನವನ್ನು ನಡೆಸುತ್ತಿದ್ದಾರೆ. ಪ್ರಾಕೃತ ಭಾಷೆಯ ಉಳಿವಿಗಾಗಿ ಮತ್ತು ಜೈನ ಧರ್ಮದ ಪ್ರಚಾರಕ್ಕಾಗಿ ಅಹರ್ನಿಶಿ ಶ್ರಮಿಸುತ್ತಿರುವ ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರಿ ಅವರ ಸೇವೆ ನಿರಂತರವಾಗಿರಲಿ ಎಂದು ಹಾರೈಸೋಣ. ಇದೀಗ ಅಖಿಲ ಭಾರತ ವರ್ಷಿಯ ಶಾಸ್ತ್ರೀ ಪರಿಷತ್ ವತಿಯಿಂದ " ಶ್ರೇಷ್ಟಿ ಶ್ರೀ ಜೋರಾವಲ್ ರಜನ್ ದೇವಿ ಜೈನ ದುಮ್ ದುಮಾ ಸ್ಮೃತಿ ಶಾಸ್ತ್ರೀ ಪರಿಷತದ್ ಪುರಸ್ಕಾರ " ಗಳಿಗೆ ಭಾಜನರಾದ ಇಬ್ಬರೂ ವಿದ್ವಾಂಸರಿಗೆ ಅಭಿನಂದನೆಗಳು. ಶಾಂತರಾಜ ಮಲ್ಲಸಮುದ್ರ ಲೇಖಕರು

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img