ಪ್ರೊ. ಅಪ್ಪಣ್ಣ ಹಂಜೆ: ವಿಷಯ ಪರಿಣಿತರಾಗಿ ನೇಮಕ
Published Date: 22-May-2026 Link-Copied
ಕರ್ನಾಟಕ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳ ಆದೇಶದಂತೆ ಕುಲಸಚಿವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಅಪ್ಪಣ್ಣ ಹಂಜೆ ಅವರನ್ನು 2026-27 ಮತ್ತು 2027-28ರ ಸಾಲಿಗೆ ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನಶಾಸ್ತ್ರ ವಿಷಯದ ಸ್ನಾತಕ ಅಭ್ಯಾಸ ಮಂಡಳಿಯ ವಿಷಯ ಪರಿಣಿತರಾಗಿ ನೇಮಕ ಮಾಡಿದ್ದಾರೆ. ಇವರು ಜೈನ ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಸಮಾಜ, ವಾಸ್ತುಕಲೆ, ಶಿಲ್ಪಕಲೆ, ಶಾಸನಗಳು, ಮುನಿಪರಂಪರೆ, ಕವಿಗಳು ಮುಂತಾದ ವಿಷಯಗಳ ಕುರಿತು ತಲಸ್ಪರ್ಶಿ ಸಂಶೋಧನ ಅಧ್ಯಯನ ಕೈಗೊಂಡು ಮೌಲ್ಯಯುತ ಕೃತಿಗಳು ಮತ್ತು ಲೇಖನಗಳನ್ನು ಪ್ರಕಟಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಅಧ್ಯಯನ ವಿಭಾಗದ ಸಂಯೋಜಿತ ಉಜಿರೆಯ ಹಾಮಾನಾ ಸಂಶೋಧನ ಕೇಂದ್ರದಲ್ಲಿ ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಬಾಹ್ಯ ಮಾರ್ಗದರ್ಶಕರಾಗಿ ಹಾಗೂ ಕರ್ನಾಟಕ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಶೈಕ್ಷಣಿಕ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.