ಮೂಗೂರು: ಜಿನಾಲಯದ ಮಂಡಲ ಪೂಜೆ ಮಹೋತ್ಸವದ ನಿಮಿತ್ತ ನಡೆದ ಧಾರ್ಮಿಕ ಸಮಾರಂಭ
Published Date: 06-Apr-2026 Link-Copied
ಜೈನ ತತ್ತ್ವಗಳು ವಿಶ್ವಕ್ಕೆ ಶಾಂತಿಯ ಶ್ರೀ ರಕ್ಷೆ: ಪರಮ ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾ ಸ್ವಾಮಿಗಳು ಪೀಠಾಧ್ಯಕ್ಷರು ಶ್ರೀ ಕ್ಷೇತ್ರ ಕನಕಗಿರಿ: ಜೈನ ಸಾಹಿತ್ಯ ಸಂಸ್ಕೃತಿ ಆಚಾರ ವಿಚಾರ ಸಹಿತ ಜೈನ ತತ್ತ್ವಗಳು ವಿಶ್ವದ ಶಾಂತಿಗೆ ಕಾರಣೀಯವಾಗಿದೆ ಎಂದು ಪೂಜ್ಯರು ಮೂಗೂರು ಜಿನಾಲಯದ ಮಂಡಲ ಪೂಜೆ ಮಹೋತ್ಸವದ ನಿಮಿತ್ತ ನಡೆದ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ಮಾಡುತ್ತ ತಿಳಿಸಿದರು. ಗಂಗರು ಜೈನ ಸಂಸ್ಕೃತಿಯ ಪ್ರದೀಪಕರು, ಅವರ ಕಾರ್ಯ ಬಾಹುಳ್ಯ ಮಂಡ್ಯ, ಮೈಸೂರು, ಚಾಮರಾಜನಗರ ಕೋಲಾರ ವ್ಯಾಪ್ತಿಯಲ್ಲಿ ಇದೆ. ಅವರ ಕಾಲದ ಸಾಹಿತ್ಯ, ಕಲೆ ಸಂಸ್ಕೃತಿ ಇಂದಿಗೂ ಇದೆ.. ಮೂಗೂರು ಬಸದಿ ಸೇವಾ ಟ್ರಸ್ಟ್ ಈ ಬಸದಿ ಪುನರ್ ನಿರ್ಮಾಣ ಕಾರ್ಯದಲ್ಲಿ ಅಹರ್ನಿಶಿ ದುಡಿದಿದ್ದಾರೆ ಅವರಿಗೆ ಮಂಗಳವಾಗಲಿ. ಜೈನ ಕ್ಷೇತ್ರ ದರ್ಶನವನ್ನು ಮಾತ್ರ ಶ್ರಾವಕರು ಮಾಡಬೇಕು ದೇವ, ಗುರು, ಶಾಸ್ತ್ರ ಪೂಜೆ ಸದಾ ಶ್ರಾವಕರು ಮಾಡಬೇಕು ಎಂದು ಕರೆ ನೀಡಿದರು. ಬಸದಿ ದರ್ಶನದಿಂದ ಶಾಂತಿ ಪ್ರಾಪ್ತಿ: ಡಾ. ಮೋಹನ ಶಾಸ್ತ್ರಿ ಆತ್ಮನಿಗೆ ಶಾಂತಿ ನೀಡುವ ತಾಣ ಜೈನ ಬಸದಿ ಆದ್ದರಿಂದ ನಿತ್ಯ ಭಗವಂತನ ದರ್ಶನ ಮಾಡಬೇಕು ಅರಿಹಂತ ಭಗವಾನರ ಪೂಜೆ ಆದಮೇಲೆ ಯಕ್ಷ ಯಕ್ಷಿ ಪೂಜೆ ಮಾಡಬೇಕು. ತ್ರಿಕರಣ ಶುದ್ಗಿಯಿಂದ ಮಂದಿರ ದರ್ಶನ ಮಾಡಬೇಕು. ಸಾವಿರಾರು ವರ್ಷಗಳಿಂದ ಇರುವ ಬಸದಿ ಸಂರಕ್ಷಣೆ ಮಾಡಬೇಕು ಇತಿಹಾಸ ಗ್ರಂಥಸ್ಥವಾಗಬೇಕು ಜೈನರಾಗಿ ಹುಟ್ಟುವುದೇ ಮಹಾ ಭಾಗ್ಯ ಅದನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕು ಎಂದರು ಅಧ್ಯಕ್ಷತೆಯನ್ನು ಮೂಗೂರು ಬಸದಿ ದೇವರ ಗುಡಿ ಟ್ರಸ್ಟ್ ಅಧ್ಯಕ್ಷೆ ಶ್ರಾವಿಕ ರತ್ನ ಶೀಲಾ ಅನಂತರಾಜ್ ಅವರು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಚಾರುಣುಡಿಗಳನ್ನಾಡಿದರು. ವೇದಿಕೆಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ನಿರ್ಮಲ ಕುಮಾರ ಮತ್ತು ಶ್ರಾವಕ ಶ್ರೇಷ್ಠ ಬ್ರಹ್ಮದೇವ ಬೆಂಗಳೂರು ಉಪಸ್ಥಿತರಿದ್ದರು. ಮಂಡಲ ಪೂಜೆ ಮಹೋತ್ಸವದ ಪೂಜಾ ವಿಧಿ ವಿಧಾನವನ್ನು ಪ್ರತಿಷ್ಠಾಚಾರ್ಯ ಎಸ್ ಎಂ ಸನ್ಮತಿಕುಮಾರ ಶಾಸ್ತ್ರಿ ವಹಿಸಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಸ್ವಪ್ನ ಲಕ್ಷ್ಮೀಶ ಬಾಬು ಮಾಡಿದ್ದರು. ಚಾಮರಾಜನಗರ, ಮೈಸೂರು, ಮಂಡ್ಯ ಶ್ರಾವಕ ಶ್ರಾವಿಕೆಯರು ಈ ಕಾರ್ಯಕ್ರಮದಲ್ಲಿ ಬಾಗಿಗಳಾಗಿದ್ದರು.