ಧನ್ಯಕುಮಾರ್ ಅವರಿಗೆ ಸಹಕಾರ ರತ್ನ ಪ್ರಶಸ್ತಿ
Published Date: 29-Nov-2025 Link-Copied
ತಾಲೂಕಿನ ಹಿರಿಯ ಜೈನ ಸಮಾಜದ ಮುಖಂಡರು ಹಾಗೂ ಪಟ್ಟಣದ ಪಾರ್ಶ್ವನಾಥ ಸಹಕಾರ ಸಂಘ ನಿಯಮಿತದ ಅಧ್ಯಕ್ಷರು ಆದ ಇ.ವಿ ಧನ್ಯಕುಮಾರ್ ಇವರಿಗೆ ಕರ್ನಾಟಕ ಸರ್ಕಾರದ ವತಿಯಿಂದ "ಸಹಕಾರ ರತ್ನ ಪ್ರಶಸ್ತಿ" ಲಭಿಸಿದೆ. ಇವರು ಸಹಕಾರ ಕ್ಷೇತ್ರದಲ್ಲಿ ಐದು ದಶಕಗಳ ಕಾಲ ಹಗಲಿರಳು ಶ್ರಮಿಸಿ ಅನೇಕ ಸಹಕಾರ. ಸಂಘಗಳಲ್ಲಿ ಸೇವೆ ಸಲ್ಲಿಸಿ ಹಾಗೂ ಪಟ್ಟಣದ ಶ್ರೀ ಪಾರ್ಶ್ವನಾಥ ಬ್ಯಾಂಕಿನ ಅಧ್ಯಕ್ಷರು ಮತ್ತು ಸಂಸ್ಥಾಪಕರು ಆಗಿ ಬ್ಯಾಂಕಿನ ಸ್ವಂತ ಕಟ್ಟಡದ ನಿರ್ಮಾತೃ ಆಗಿದ್ದಾರೆ ಹಾಗೂ ಖಾಸಗಿ ಬಸ್ಸಿನ ಮಾಲೀಕರು ಆದಂತಹ ಇವರು ವಿಜಯಗಂಗೋತ್ರಿ ಶಾಲೆಯ ಕಾರ್ಯದರ್ಶಿಯಾಗಿ ಹಾಗೂ ಜೈನ ಸಮಾಜದ ಗೌರವಾಧ್ಯಕ್ಷರಾಗಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳಿಗೆ ಶ್ರಮಿಸಿದವರಾಗಿದ್ದ ಇವರ ಹಿರಿಯತನಕ್ಕೆ ಗೌರವ ಲಭಿಸಿದ್ದಾಗಿದೆ. ಜೈನ ಸಮಾಜದ ಮುಖಂಡರುಗಳಾದ ಧನಪಾಲ್, ಬ್ರಹ್ಮಪಾಲ್.ಡಿ, ಆದಿರಾಜಯ್ಯ, ಅನುಷ್ ಜೈನ್, ಶ್ರೀ ಪಾರ್ಶ್ವನಾಥ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಟಿ.ಜಿ.ಗುರುಸ್ವಾಮಿ, ಸಿಬ್ಬಂಧಿವರ್ಗ, ಸರ್ವ ಸದಸ್ಯರು ಸೇರಿದಂತೆ ಮತ್ತಿತರರು ಅಭಿನಂದಿಸಿದ್ದಾರೆ.