ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಎನ್.ಎ.ಬಿ.ಎಚ್. (NABH) ಮಾನ್ಯತೆ


Logo

Published Date: 19-Nov-2025 Link-Copied

ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಗುಣಮಟ್ಟ ಭರವಸೆ ಕೋಶ ವಿಭಾಗವು ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ NABH ಮಾನ್ಯತೆಯ ಸಂಭ್ರಮವನ್ನು ಆಚರಿಸಲಾಯಿತು. NABH ಮಾನ್ಯತೆ ಪ್ರಕ್ರಿಯೇಯು 2021ರಲ್ಲಿ ಪ್ರಾರಂಭವಾಗಿ, ಜೂನ್ 2025ರಲ್ಲಿ ನಡೆದ NABH ಪರೀವಿಕ್ಷಣೆ ನಡೆದು ಇದೀಗ NABH ಮಾನ್ಯತೆ ಲಭಿಸಿದೆ. ಎಸ್.ಡಿ.ಎಂ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ್ ಹೆಗ್ಡೆ ಮತ್ತು ಉಪ ವೈದ್ಯಕೀಯ ಅಧೀಕ್ಷಕ ಮತ್ತು ಗುಣಮಟ್ಟ ಭರವಸೆ ಕೋಶದ ಮುಖ್ಯಸ್ಥರಾದ ಡಾ. ಮಖ್ದೂಮ್ ಕಿಲ್ಲೇದಾರ್ ಅವರು NABH ಮಾನ್ಯತೆಯ ಪ್ರಮಾಣಪತ್ರ ಮತ್ತು NABH ಮಾನ್ಯತೆ ಪಡೆದ ವಿಭಾಗಗಳ ಪ್ರಮಾಣಪತ್ರವನ್ನು ವೈದ್ಯಕೀಯ ನಿರ್ದೇಶಕರಾದ ಡಾ. ನಿರಂಜನ್ ಕುಮಾರ್ ಅವರಿಗೆ ಹಸ್ತಾಂತರಿಸಿದರು. NABH ಪ್ರಮಾಣಪತ್ರವನ್ನು ಸ್ವೀಕರಿಸಿದ ವೈದ್ಯಕೀಯ ನಿರ್ದೇಶಕರು ಮತ್ತು ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ NABH ಮಾನ್ಯತೆಯ ಪ್ರಮುಖ ಮೈಲಿಗಲ್ಲನ್ನು ಸಾಧಿಸಲು ಕೊಡುಗೆ ನೀಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿ, ಮಾತನಾಡುತ್ತಾ: ನಮ್ಮ ದೈನಂದಿನ ಕೆಲಸದಲ್ಲಿ ಗುಣಮಟ್ಟದ ಸೇವೆಯ ಕಡೆಗೆ ಗಮನವಿರಬೇಕು. ಉದ್ಯೋಗದಲ್ಲಿ ಪರಿಪೂರ್ಣತೆಯು ಎಲ್ಲಾ ಉದ್ಯೋಗಿಯ ಧ್ಯೇಯವಾಗಬೇಕು. ರೋಗಿಗಳಿಗೆ ಸೇವೆ ಸಲ್ಲಿಸುವಾಗ ದಕ್ಷತೆ ಮತ್ತು ಪ್ರೀತಿ ಸೇವೆ ನೀಡಬೇಕು. ಶಿಸ್ತು ಮತ್ತು ನಿರಂತರ ಸುಧಾರಣೆಯೊಂದಿಗೆ ದೊಡ್ಡ ಗುರಿಯನ್ನು ಸಾಧಿಸಬಹುದು. ಸಣ್ಣ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವದರೊಂದಿಗೆ ಉತ್ತಮ ಸಂಸ್ಥೆಗಳನ್ನು ಸೃಷ್ಟಿಸಬಹುದು. ಸುರಕ್ಷತಾ ಮನೋಭಾವ ಮತ್ತು ಸಹಾನುಭೂತಿ ರೋಗಿಗಳ ಆರೈಕೆಯ ಮುಖ್ಯ ಧ್ಯೇಯೆಗಳಾಗಿವೆ. ಸಹ ಉಪ ಕುಲಪತಿಗಳಾದ ವಿ ಜೀವಂಧರ್ ಕುಮಾರ್, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಹಣಕಾಸು ಅಧಿಕಾರಿಗಳಾದ ವಿ ಜಿ ಪ್ರಭು, ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ಕುಲಕರ್ಣಿ, ಕೋರ್ ಕಮಿಟಿ ಮತ್ತು ಸ್ಟೀರಿಂಗ್ ಕಮಿಟಿ ಸದಸ್ಯರ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರತಿಯೊಂದು ಕೋರ್ ಕಮಿಟಿ ಮತ್ತು ಸ್ಟೀರಿಂಗ್ ಕಮಿಟಿ ಸದಸ್ಯರಿಗೆ ಗೌರವ ಪ್ರಮಾಣಪತ್ರವನ್ನು ವಿತರಿಸಲಾಯಿತು. ಡಾ. ಮಖ್ದೂಮ್ ಕಿಲ್ಲೇದಾರ್ NABH ಮಾನ್ಯತೆಯ ಪ್ರಯಾಣ ನಡೆದು ಬಂದ ದಾರಿಯನ್ನು ತಿಳಿಸಿದರು. ಗುಣಮಟ್ಟ ಭರವಸೆ ಕೋಶದ ಅಧಿಕಾರಿಯಾದ ನಿಶಾಂತ್ ಜೈನ್ ಅತಿಥಿಗಳನ್ನು ಸ್ವಾಗತಿಸಿದರು. ಗುಣಮಟ್ಟ ಭರವಸೆ ಇನ್ನೊಬ್ಬ ಅಧಿಕಾರಿಯವರಾದ ಐಶ್ವರ್ಯ ವಿ ಎನ್ ಕಾರ್ಯಕ್ರಮವನ್ನು ನಿರೂಪಿಸಿದರು. ನರ್ಸಿಂಗ್ ಅಧೀಕ್ಷಕಿಯವರಾದ ಮಂಜುಳಾ ಕೆ ಬಿ ವಂದನಾರ್ಪಣೆ ಸಲ್ಲಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img