ಹಾಸನದ ಶ್ರೀ ಮಹಾವೀರ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನಿಂದ ವಿದ್ಯಾರ್ಥಿ ವೇತನ
Published Date: 23-Oct-2025 Link-Copied
ಹೊಂಬುಜ, ಶ್ರೀ ಜೈನ ಮಠದ ಪೀಠಾಧ್ಯಕ್ಷರಾಗಿರುವ ಪರಮಪೂಜ್ಯ ಶ್ರೀಮದ್ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮಿಗಳು, ಟ್ರಸ್ಟಿನ ಗೌರವಾನ್ವಿತ ಪರಮ ಸಂರಕ್ಷಕರು ಹಾಗೂ ಅಧ್ಯಕ್ಷರು ಆಗಿರುವ ಹಾಸನದ ಶ್ರೀ ಮಹಾವೀರ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಈ ವರ್ಷವೂ 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕರ್ನಾಟಕ ರಾಜ್ಯ ಜೈನ ಸಮಾಜದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ವಿದ್ಯಾರ್ಥಿ ವೇತನಕ್ಕೋಸ್ಕರ ಅರ್ಜಿ ಆಹ್ವಾನಿಸಿದೆ. ಇದು ವೈದ್ಯಕೀಯ, ದಂತವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ, ಇಂಜಿನಿಯರಿಂಗ್, ಡಿಪ್ಲೋಮೋ ಮತ್ತು ಜೈನಾಲಜಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುವುದು. ಅರ್ಹ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹಿಂದಿನ ಪರೀಕ್ಷೆಯಲ್ಲಿ ಗಳಿಸಿರುವ ಅಂಕಪಟ್ಟಿ ನಕಲು, ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಪ್ರವೇಶ ಪತ್ರದ ನಕಲು ಹಾಗೂ ಆಧಾರ್‌ಕಾರ್ಡನ ಪ್ರತಿ ಹಾಗೂ ತಮ್ಮ ಬ್ಯಾಂಕಿನ ವಿವರದೊಂದಿಗೆ ಅರ್ಜಿಯನ್ನು P.D.F Formatನಲ್ಲಿ ಈ ಇಮೇಲ್ ವಿಳಾಸ mahaveeraeducationaltrust@gmail.com ವಾಟ್ಸಾಪ್ ನಂ-9448544333 ಗೆ ದಿನಾಂಕ 15/11/2025ರ ಒಳಗಾಗಿ ಕಳುಹಿಸುವುದು.