ಮಂಗಳೂರಿನ ಹೃದಯಭಾಗ ಪಾಂಡೇಶ್ವರದಲ್ಲಿ ಐಷಾರಾಮಿ ಅಭಿಷ್ ವಿಸ್ಟಾ ಸೀ ವ್ಯೂ ಅಪಾರ್ಟ್ಮೆಂಟ್
Published Date: 03-Oct-2025 Link-Copied
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಭಿಷ್ ಬಿಲ್ರ‍್ಸ್ ಸಂಸ್ಥೆಯ ನೂತನ ಐಶಾರಾಮಿ ವಸತಿ ಸಮುಚ್ಚಯ ಅಭಿಷ್ ವಿಸ್ಟಾವನ್ನು ಅನಾವರಣಗೊಳಿಸಿದ್ದು, ಯೋಜನೆಗೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ನಗರದ ಹೃದಯ ಭಾಗವಾದ ಪಾಂಡೇಶ್ವರದಲ್ಲಿ ನಿರ್ಮಾಣವಾಗುತ್ತಿರುವ ಅಭಿಷ್ ವಿಸ್ಟಾ ಅಪಾರ್ಟ್ಮೆಂಟ್ ವಸತಿ ಸಮುಚ್ಚಯ ನಿರ್ಮಾಣವಾಗುತ್ತಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಪುಷ್ಪರಾಜ್ ಜೈನ್ ತಿಳಿಸಿದ್ದಾರೆ. ಆಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ಈ ಪ್ರೀಮಿಯಂ ಅಪಾರ್ಟ್ಮೆಂಟ್ ತನ್ನ ವಿಶಿಷ್ಟ ಸ್ಥಳ ಮತ್ತು ಆಕರ್ಷಕ ವಿನ್ಯಾಸದಿಂದ ವಿಶಿಷ್ಟತೆ ಸಾಧಿಸಿದೆ. ಮೂರನೇ ಮಹಡಿಯ ಮೇಲ್ಭಾಗದಿಂದಲೇ ಸಮುದ್ರ ಹಾಗೂ ಪಶ್ಚಿಮ ಘಟ್ಟದಿಂದ ಹರಿದು ಬರುವ ನೇತ್ರಾವತಿ ಹಾಗೂ ಪಲ್ಗುಣಿ ನದಿಯ ಸಂಗಮದ ವಿಹಂಗಮಕ ನೋಟ ಕಣ್ಣು ಸೆಳೆಯುತ್ತದೆ. ನೈಸರ್ಗಿಕ ಸೌಂದರ್ಯದೊಂದಿಗೆ ನಗರದ ಚೈತನ್ಯವನ್ನೂ ಅನುಭವಿಸಲು ಸಾಧ್ಯವಾಗುವ ಈ ವಾಸಸ್ಥಳವು `ಗುಡ್ ಲೊಕೇಶನ್ - ರಿಚ್ ಲೊಕೇಶನ್' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಗರದ ಪ್ರಮುಖ ಭಾಗ ಎಂದರೆ ಪ್ರೆಮ್ ಲೊಕೇಷನ್‌ನಲ್ಲಿ ಒಂದಾಗಿರುವ ಪಾಂಡೇಶ್ವರ - ಮಂಗಳಾದೇವಿ ದೇವಸ್ಥಾನ ಮುಖ್ಯ ರಸ್ತೆಯಲ್ಲೆ ಅಭಿಷ್ ವಿಸ್ಟಾ ನಿರ್ಮಾಣವಾಗುತ್ತಿದೆ. ಈ ಯೋಜನೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು, ಎರಡುವರೆ ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಹಣಕಾಸು ಸೌಲಭ್ಯ: ಈ ಯೋಜನೆಯಲ್ಲಿ ಮನೆ ಖರೀದಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳೊಂದಿಗೆ ಅಭಿಷ್ ಬಿಲ್ರ‍್ಸ್ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡಿದ್ದು, ಇದರಿಂದಾಗಿ ಮನೆ ಖರೀದಿಗೆ ಸುಲಭವಾಗಿ ಗ್ರಾಹಕರಿಗೆ ಹಣಕಾಸು ಸೌಲಭ್ಯ ಸಿಗಲಿದೆ. ಸಾರ್ವಜನಿಕ ಸಾರಿಗೆ, ಉತ್ತಮ ಪರಿಸರ, ಶಾಪಿಂಗ್ ಮಾಲ್, ದೇವಸ್ಥಾನ, ಮಸೀದಿ, ಚರ್ಚ್, ಶಿಕ್ಷಣ ಸಂಸ್ಥೆ, ವೃತ್ತಿಪರ ಶಿಕ್ಷಣ ಸಂಸ್ಥೆ, ವೈದ್ಯಕೀಯ ಕಾಲೇಜುಗಳು ಆಸುಪಾಸಿನಲ್ಲಿರುವ, ಬಸ್ ನಿಲ್ದಾಣ, ವಿಮಾನ ನಿಲ್ದಾಣ, ರೈಲು ನಿಲ್ದಾಣವನ್ನು ಸುಲಭವಾಗಿ ತಲುಪುವಂತಿರುವ ಅಭಿಷ್ ವಿಸ್ಟಾದಲ್ಲಿ ಗ್ರಾಹಕರು ಮನೆ ಬುಕ್ ಮಾಡಬಹುದಾಗಿದೆ. 1660 ಚದರ ಅಡಿಯಿಂದ 1875 ಚದರ ಅಡಿ ವರೆಗಿನ ಮೂರು ಬೆಡ್ ರೂಂನ ಮನೆ ನಿರ್ಮಾಣವಾಗಲಿದೆ. ಪ್ರತಿ ಮಹಡಿಯಲ್ಲಿ ಐದು ಮನೆ ಇದ್ದು, ಗಾಳಿ ಬೆಳಕಿಗೆ ತೆರೆದುಕೊಂಡಿದೆ. ಒಟ್ಟು 17 ಮಹಡಿಯ ಈ ವಸತಿ ಸಮುಚ್ಚಯದಲ್ಲಿ ಎರಡು ಮಹಡಿ ಕಾರು ನಿಲುಗಡೆ, 14 ಮಹಡಿಯಲ್ಲಿ 70 ಮನೆಗಳು ಹಾಗೂ ಟಾಪ್ ಫ್ಲೋರ್‌ನಲ್ಲಿ ಕ್ಲಬ್ ಹೌಸ್ ನಿರ್ಮಾಣವಾಗಲಿದೆ. ಈ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಅತೀ ಎತ್ತರದ ಹಾಗೂ ಬೃಹತ್ ವಸತಿ ಸಮುಚ್ಚಯ ಇದಾಗಿದ್ದು, ಅಭಿಷ್ ವಿಸ್ಟಾ ಕೇವಲ ವಾಸಸ್ಥಳವಲ್ಲ, ಬುದ್ಧಿವಂತ ಹೂಡಿಕೆದಾರರಿಗಾಗಿ ಭವಿಷ್ಯದ ಮೌಲ್ಯವರ್ಧಿತ ಆಸ್ತಿ ಕೂಡ ಹೌದು. ಆಧುನಿಕ ಜೀವನಶೈಲಿಯ ಕನಸನ್ನು ನನಸು ಮಾಡುವ ಅಭಿಷ್ ವಿಸ್ಟಾ ಇಂದು ನಗರದ ಅತ್ಯಂತ ಆಕರ್ಷಕ ಪ್ರೀಮಿಯಂ ಅಪಾರ್ಟ್ಮೆಂಟ್ ಯೋಜನೆಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ. ಅಭಿಷ್‌ನ ವಿಸ್ತಾದ ವಿಶೇಷತೆ: ಪ್ರೆಮ್ ಲೊಕೇಷನ್ 17 ಮಹಡಿ – 70 ಮನೆ ಚತುಷ್ಪಥ ಕಾಂಕ್ರೀಟ್ ರಸ್ತೆಗೆ ತಾಗಿಕೊಂಡು ವಸತಿ ಸಮುಚ್ಚಯ ಮೂರನೇ ಮಹಡಿಯ ಬಳಿಕ ನೇತ್ರಾವತಿ, ಪಲ್ಗುಣಿ ನದಿ ಹಾಗೂ ಸಮುದ್ರದ ಸಂಗಮದ ವಿಹಂಗಮ ನೋಟ ಅತ್ಯಾಧುನಿಕ ಸೌಲಭ್ಯ, ಟ್ರಾಫಿಕ್ ಜಂಜಾಟದಿಂದ ಮುಕ್ತಿ ಸ್ವಚ್ಛಂದ ಜೀವನಕ್ಕೆ ಪರಿಪೂರ್ಣ ಸಮುಚ್ಚಯ ಎಲ್ಲ ಮನೆಗಳನ್ನು ವಾಸ್ತು ಪ್ರಧಾನವಾಗಿಸಿಕೊಂಡು ವಿನ್ಯಾಸ ಮಲ್ಟಿ ಜಿಮ್, ಮೆಡಿಟೇಶನ್ ಸೆಂಟರ್, ಪಾರ್ಟಿ ಹಾಲ್ ಚಿಲ್ಡ್ರನ್ಸ್ ಪ್ಲೇ ಏರಿಯಾ. ವಾಕಿಂಗ್‌ಗಾಗಿ ಫೂಟ್ ರಿಫ್ಲೆಕ್ಸೋಲಜಿ ಪಥ ಅತಿಥಿಗಳು ಹಾಗೂ ಮಾಲೀಕರಿಗೆ ಪ್ರತ್ಯೇಕ ಕಾರು ಪಾರ್ಕಿಂಗ್ ಆಧುನಿಕ ಪರಿಕರಗಳೊಂದಿಗೆ ಆಕರ್ಷಕ ವಿನ್ಯಾಸ ಕಡಿಮೆ, ಮಧ್ಯಮ ಆದಾಯದ ಕುಟುಂಬಕ್ಕೆ ಸೂಕ್ತ ಟೆರೆಸ್‌ನಲ್ಲಿ ಲ್ಯಾಂಡ್ ಸ್ಕೇಪ್.