ಹೊಂಬುಜ ಶ್ರೀ ಜೈನ ಮಠದಲ್ಲಿ ಶ್ರೀಶರನ್ನವರಾತ್ರಿ ವಿಶೇಷ ಪೂಜಾ ಮಹೋತ್ಸವ
Published Date: 20-Sep-2025 Link-Copied
ಶಿವಮೊಗ್ಗ: ಹೊಂಬುಜ ಶ್ರೀ ಜೈನ ಮಠದಲ್ಲಿ ಶ್ರೀಶರನ್ನವರಾತ್ರಿ ವಿಶೇಷ ಪೂಜಾ ಮಹೋತ್ಸವವು 22-09-2025 ರಿಂದ 02-10-2025 ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ವಿಜಯದಶಮಿಯವರೆಗೆ ಶಕ್ತಿ ದೇವಿಗೆ ವಿವಿಧ ಅಲಂಕಾರಗಳಿಂದ ವಿಶೇಷ ಪೂಜೆ ನೆರವೇರಲಿದೆ. 22-09-2025 ಸೋಮವಾರ ಘಟಸ್ಥಾಪನೆ: ಹೂವಿನ ಅಲಂಕಾರ 23-09-2025, ಮಂಗಳವಾರ ಭೈರವಿ ಪದ್ಮಾವತಿ ದರ್ಶನ 24-09-2025, ಬುಧವಾರ ಮುತ್ತಿನ ಅಲಂಕಾರ 25-09-2025, ಗುರುವಾರ ಹಣ್ಣಿನ ಅಲಂಕಾರ 26-09-2025, ಶುಕ್ರವಾರ (ಲಕ್ಷಹೂವಿನ ಪೂಜೆ) ಸುವರ್ಣ ಅಲಂಕಾರ 27-09-2025, ಶನಿವಾರ ಸೀರೆ ಅಲಂಕಾರ 28-09-2025, ಭಾನುವಾರ ಧಾನ್ಯಗಳ ಅಲಂಕಾರ 29-09-2025 ಸೋಮವಾರ (ಸರಸ್ವತಿ ಪೂಜೆ) ನವಿಲಿನ ಅಲಂಕಾರ 30-09-2025. ಮಂಗಳವಾರ (ಜೀವದಯಾಷ್ಟಮಿ) ಬಳೆ ಅಲಂಕಾರ 01-10-2025, ಬುಧವಾರ (ಆಯುಧ ಪೂಜೆ) ಸುವರ್ಣ ಅಲಂಕಾರ 02-10-2025, ಗುರುವಾರ (ವಿಜಯದಶಮಿ) ಸುವರ್ಣ ಅಲಂಕಾರ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಪಲ್ಲಕ್ಕಿ ಉತ್ಸವದೊಂದಿಗೆ ಬನ್ನಿ ಮಂಟಪದವರೆಗೆ ಸ್ಯಾಕ್ರೋಫೋನ್, ಚಂಡೆ, ಡೊಳ್ಳುಕುಣಿತ, ಸಕಲ ಮಂಗಲವಾದ್ಯಗಳೊಂದಿಗೆ ಸಾಲಾಂಕೃತ ಶೋಭಾಯಾತ್ರೆ ನಡೆಯಲಿದೆ.