ತೌಳವ ಇಂದ್ರ ಸಮಾಜ(ರಿ)ದಿಂದ ಧರ್ಮಸ್ಥಳದಲ್ಲಿ ಶಾಂತಿ ಚಕ್ರ ಆರಾಧನೆ ಮತ್ತು ಲಕ್ಷಾಧಿಕ ಜಾಪ್ಯಮಂತ್ರ ಪಠನೆ


Logo

Published Date: 17-Sep-2025 Link-Copied

ತೌಳವ ಇಂದ್ರ ಸಮಾಜದ ಸದಸ್ಯರಿಂದ ಲೋಕ ಶಾಂತ್ಯರ್ಥವಾಗಿ ಧರ್ಮಸ್ಥಳದ ಭ l ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಶಾಂತಿ ಚಕ್ರ ಆರಾಧನೆ, ಸಾಮೂಹಿಕ ಜಾಪ್ಯಾ ಮಂತ್ರ ಹಾಗೂ ಪೂಜಾ ಕಾರ್ಯಕ್ರಮ ಇತ್ತೀಚೆಗೆ ಜರಗಿತು. ಬೆಳಗ್ಗೆ 7 ಗಂಟೆಗೆ ಆರಾಧನಾ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಂಡವು,ತದನಂತರ ಲಕ್ಷಾಧೀಕ ಶಾಂತಿ ಮಂತ್ರ ಪಠಣ ಕಾರ್ಯ ಸಾಮೂಹಿಕವಾಗಿ ಮಾಡಲಾಯಿತು. ನೆರೆದಿರುವ ಸುಮಾರು ಇನ್ನೂರಕ್ಕೂ ಮಿಕ್ಕಿದ ಸಮಾಜ ಬಾಂಧವರುಗಳು ಬೇರೆಬೇರೆ ಊರುಗಳಿಂದ (ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ) ಬಂದು ಸಕ್ರಿಯವಾಗಿ ಭಾಗವಹಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ತಮ್ಮ ಬೆಂಬಲವನ್ನು ನೀಡಿದರು. ನಂತರ ನಡೆದ ಸರಳ ಸಮಾರಂಭದಲ್ಲಿ ಸಮಾಜ ಬಾಂಧವರಿಂದ ಸನ್ಮಾನ ಹಾಗೂ ಬೇರೆ ಬೇರೆ ಬಸದಿಗಳ ಪ್ರಸಾದ ಸ್ವೀಕರಿಸಿ ಮಾತನಾಡಿದ ಪೂಜ್ಯ ಖಾವಂದರು "ಇಂದ್ರ ಸಮಾಜದವರು ಯಾವತ್ತೂ ನಮ್ಮೊಡನೆ ಇದ್ದು ಕ್ಷೇತ್ರದ ಎಲ್ಲಾ ಕಾರ್ಯಗಳಿಗೆ ಬೆಂಬಲ ನೀಡುತ್ತಾರೆ. ಹಿರಿಯರ ಪುರೋಹಿತರ ಆಶೀರ್ವಾದ ಸದಾ ಸಕಾರಾತ್ಮಕವಾಗಿರಲಿ" ಎಂದು ಎಲ್ಲರನ್ನು ಅಭಿನಂದಿಸಿದರು. ಹೇಮಾವತಿ ಹೆಗ್ಗಡೆಯವರು ಮತ್ತು ಹರ್ಷೇಂದ್ರ ಕುಮಾರ್ ಹೆಗ್ಗಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img