ದಿಗಂಬರ್ ಜೈನ್ ಮಹಾಸಮಿತಿ ದೆಹಲಿಯ ಕಾರ್ಯಾಧ್ಯಕ್ಷರ ಭೇಟಿ
Published Date: 15-Sep-2025 Link-Copied
ದಿಗಂಬರ್ ಜೈನ್ ಮಹಾಸಮಿತಿ, ದೆಹಲಿ ಇದರ ಕಾರ್ಯಾಧ್ಯಕ್ಷರು ಬಿಪಿನ್ ಸುಮಾರ್ ಜೈನ್ ಸರಫ್, ದಿನಾಂಕ 12.09.2025ನೇ ಶುಕ್ರವಾರ ಹಾಸನಕ್ಕೆ ಭೇಟಿ ನೀಡಿದರು. ಕಾರ್ಯಕ್ರಮವನ್ನು ಹಾಸನದ ದೆಹಲಿ ದಿಗಂಬರ ಜೈನ್ ಸಮಿತಿಯ ಸಂಚಾಲಕರಾದ ಹೆಚ್.ಎನ್., ಅಭಿನಂದನ್‌ರವರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಜೈನ ಮಹಾಸಮಿತಿಯ ಕಾರ್ಯಾಧ್ಯಕ್ಷರು ಸಮಿತಿಯು 50 ವರ್ಷಗಳ ಹಿಂದೆ 1976ರಲ್ಲಿ ಸ್ಥಾಪಿತವಾಗಿದ್ದು ಶ್ರೀ 108 ವಿದ್ಯಾನಂದ ಮುನಿಮಹರಾಜರ ಆಶೀರ್ವಾದದಿಂದ ಪ್ರಾರಂಭವಾಗಿರುತ್ತದೆ. ಸಮಿತಿಯ ಸಮನ್ವಯ ಸದ್ಭಾವನೆ ಮತ್ತು ಸಂಘಟನೆಯ ಪ್ರತಿಬಿಂಬವಾಗಿರುತ್ತದೆ. ಸಮಿತಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಜೈನ ಸಾಮಾಜಿಕ ಕಲ್ಯಾಣ ಮತ್ತು ಸಾರ್ವಜನಿಕ ಕಲ್ಯಾಣ ಕಾರ್ಯಗಳನ್ನು ಹಂಚಿಕೊಳ್ಳು ಸಮಾಜದ ಹಿತದೃಷ್ಠಿಯಿಂದ ಸರಪಳಿ ಸಧಿಸಬಹುದಾಗಿರುತ್ತದೆ. ಸಮಾಜದ ಬಡವರಿಗೆ, ಮಕ್ಕಳಿಗೆ, ಅವಶ್ಯಕತೆ ಇರುವ ಸವಲತ್ತುಗಳನ್ನು ಪೂರೈಸಲಾಗುತ್ತದೆ. ಹಾಸನದ ಜೈನ ಬಾಂಧವರು ಈ ಸಂಸ್ಥೆಯ ಅಜೀವ ಸದಸ್ಯತ್ವ ಪಡೆದುಕೊಳ್ಳಬೇಕೆಂದು ವಿನಂತಿಸಿದರು. ಹಾಸನ ಜೈನ ಸಂಘದ ಅಧ್ಯಕ್ಷರಾದ ಹೆಚ್.ಬಿ. ಶಾಂತೀಶ್, ಕರ್ನಾಟಕ ಜೈನ ಅಸೋಸಿಯೇಷನ್ ಹಾಸನದ ಪ್ರತಿನಿಧಿ ಹೆಚ್.ಬಿ.ನಾಗೇಂದ್ರಯ್ಯ, ಜೈನ ಸಹಕಾರ ಮಂಡಳಿಯ ಅಧ್ಯಕ್ಷರಾದ ಸುಕುಮಾ ಮತ್ತು ಮಹಾವೀರ ಭವನದ ಅಧ್ಯಕ್ಷರಾದ ಎಂ. ಧನ್ ಪಾಲ್ ಮತ್ತು ಕಾಳಲಾದೇವಿ ಮಹಿಳಾ ಸಮಾಜದ ಅಧ್ಯಕ್ಷರಾದ ಸುಪ್ರಭ ಅಭಿನಂದನ್ ಇವರುಗಳು ಮಾತನಾಡಿ ಸಮಿತಿಯ ಸದಸ್ಯರಾಗಿ ಬೆಂಬಲಿಸುವುದಾಗಿ ತಿಳಿಸಿದರು. ಹಾಸನ ವಿಭಾಗಕ್ಕೆ ಹೆಚ್.ಎನ್. ಅಭಿನಂದನ್ ರವರು ಸಂಚಾಲಕ ಸಂರಕ್ಷಕರಾಗಿರುತ್ತಾರೆ ಎಂದು ಕಾರ್ಯಾಧ್ಯಕ್ಷರು ತಿಳಿಸಿದರು. ಹಾಸನದ ಬಾಹುಬಲಿ ಭವನದಲ್ಲಿ ಜೈನ ಸಮಾಜದ ಪ್ರಮುಖರು ಭಾಗವಹಿಸಿದ್ದರು. ಸಭೆಯು ರಂಜಿತ ಸಮಂತ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸಂಚಾಲಕರಾದ ಅಭಿನಂದನ್‌ರವರು ಸಭೆಗೆ ಆಗಮಿಸಿದ್ದ ಅತಿಥಿಗಳು ಮತ್ತು ಗಣ್ಯರಿಗೆ ಸ್ವಾಗತವನ್ನು ಕೋರಿದರು. ಅಭಿನಂದನ್‌ರವರು ಆಗಮಿಸಿದ್ದ ಅತಿಥಿಗಳಿಗೆ ಗೌರವ ಸಮರ್ಪಿಸಿದರು. ವಂದನಾರ್ಪಣೆ ಮಾಡಿದರು.