ವಧು ವರರ ಅನ್ವೇಷಣೆಯಲ್ಲಿದ್ದ ಜೈನರಿಗೆ ಸುವರ್ಣಾವಕಾಶ


Logo

Published Date: 12-Sep-2025 Link-Copied

ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ವರನಿಗೆ ವಧು, ವಧುವಿಗೆ ವರ ಸುಲಭವಾಗಿ ಸಿಕ್ಕು ಮದುವೆಯಾಗುವದು ತುಂಬಾ ಕಷ್ಟಸಾದ್ಯವಾಗಿದೆ. ಅದರಲ್ಲೂ ಮುಖ್ಯವಾಗಿ ಹುಡುಗರಿಗೆ ಹುಡುಗಿಯರು ಸಿಗದಿರುವದೇ ಗಂಭೀರವಾದ ಸಮಸ್ಯೆಯಾಗಿದೆ. ಈ ಸಮಸ್ಯೆ ಎಲ್ಲಾ ಸಮುದಾಯದಲ್ಲೂ ಇದೆ ಆದರೆ ಜೈನ ಸಮುದಾಯದಲ್ಲಿ ತುಸು ಹೆಚ್ಚು ಎಂದೇ ಹೇಳಬೇಕು ( ಇದಕ್ಕೆ ಹಲವಾರು ಕಾರಣಗಳಿವೆ ಇವುಗಳನ್ನು ವಿಶ್ಲೇಶಿಸುವದು ಬೇಡ ಇದು ಎಲ್ಲರಿಗೂ ಗೊತ್ತಿದ್ದ ಸಂಗತಿ ) ಈ ವಿಷಯವಾಗಿ ಮಕ್ಕಳ ಪಾಲಕರು ಕಷ್ಟಪಡುತ್ತಿದಾರೆ ಅಷ್ಟೇ ಅಲ್ಲ ತುಂಬಾ ನೊಂದುಕೊಳ್ಳುತ್ತಿದ್ದಾರೆ. ಈ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಅನೇಕ ಮಾಹಿತಿ ಕೇಂದ್ರಗಳು, ಮೇಳಗಳು ಮತ್ತು ಮೆಟ್ರಿಮೊನಿ ಇತ್ಯಾದಿ ಸಂಸ್ಥೆಗಳು ಹುಟ್ಟಿಕೊಂಡಿವೆಯಾದರೂ ಅವೆಲ್ಲವೂ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. "ಇಂಥ ಸಮಸ್ಯೆ ಪರಿಹಾರಕ್ಕೆ ಕಂಕಣಬದ್ದವಾಗಿದೆ ಬೆಳಗಾವಿಯ ಮಾಣಿಕಬಾಗ ದಿಗಂಬರ ಜೈನ್ ಬೋರ್ಡಿಂಗ್ ಸಂಸ್ಥೆ" ಇವೆಲ್ಲವನ್ನೂ ಗಮನಿಸಿದ ದಕ್ಷಿಣ ಭಾರತ ಜೈನ ಸಭಾದ ಅಂಗ ಸಂಸ್ಥೆ ಬೆಳಗಾವಿಯ ಮಾಣಿಕಭಾಗ ದಿಗಂಬರ ಜೈನ ಬೋರ್ಡಿಂಗಿನ ಆಡಳಿತ ಮಂಡಳಿ ಶ್ರೀ ಕುಂತಿನಾಥ ಕಲಮನಿ ಇವರ ಸಾರಥ್ಯದಲ್ಲಿ ಕಳೆದ 17 ವರ್ಷಗಳಿಂದ ಮದುವೆಗಾಗಿ ಸೂಕ್ತ ವಧು ಅಥವಾ ವರರನ್ನು ಹುಡುಕುವ ಪ್ರಕ್ರಿಯೆಯ ಭಾಗವಾಗಿ ಜೈನ್ ವಧು-ವರ ಪರಿಚಯ ಸಮಾವೇಶವನ್ನು ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಯಶಸ್ವಿಯಾಗಿ ನಡೆಸುತ್ತಾ ಬಂದಿದೆ ಇದು ಎಷ್ಟು ಅದ್ಭುತವಾದ ಕಾರ್ಯಮಾಡುತ್ತಿದೆ ಎಂದರೆ ಪರಸ್ಪರ ಹೊಂದಾಣಿಕೆಯಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮದುವೆಗಳು ಜರುಗಿವೆ ಹಾಗೂ ಅವರೆಲ್ಲ ಸುಖವಾಗಿ ಕೌಟುಂಬಿಕ ಜೀವನ ಸಾಗಿಸುತ್ತಾ ಈ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಇದೀಗ ಈ ವರ್ಷದ 18 ನೇ ಜೈನ್ ವಧು-ವರ ಪರಿಚಯ ಸಮಾವೇಶ ಜರುಗಲಿದೆ. 17ನೇ ಸಮಾವೇಶದ ಭವ್ಯ ಯಶಸ್ಸಿನ ನಂತರ ಬಹಳಷ್ಟು ಶ್ರಾವಕ ಶ್ರಾವಿಕೆಯರ ಆಗ್ರಹ ಹಾಗೂ ವಿನಂತಿಯ ಮೇರೆಗೆ ಇದೀಗ 18ನೇ ಜೈನ್ ವಧು-ವರ ಪರಿಚಯ ಸಮಾವೇಶ ಮುಂಬರುವ ದಿನಾಂಕ 12-10-2025 ರಂದು ರವಿವಾರ ಬೆಳಗಾವಿಯ ಧರ್ಮನಾಥ ಭವನದಲ್ಲಿ ಬೆಳಿಗ್ಗೆ 9ರಿಂದ ಪ್ರಾರಂಭವಾಗಲಿದೆ. ನೋಂದಣಿ ಕಾರ್ಯ ಪ್ರಾರಂಭವಾಗಿದೆ: ಈ ಸಮಾವೇಶದಲ್ಲಿ ಭಾಗಿಯಾಗಲು ಹೆಚ್ಚಿನ ಸಂಖ್ಯೆಯ ಜನ ನೋಂದಣಿ ಮಾಡಿಸಿದ್ದಾರೆ. ಸಮಾವೇಶದ ಪ್ರಯೋಜನ ಪಡೆದುಕೊಳ್ಳಲು ತಾವೂ ರೂ 820/- ಶುಲ್ಕ ಪಾವತಿಸಿ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬಹುದಾಗಿದೆ. www.mdjbbelagavi.in ನೋಂದಣಿಗೆ ಕೊನೆಯ ದಿನಾಂಕ: 30/09/2025 ಇರುತ್ತದೆ. ಇದರ ಪ್ರಯೋಜನ ಪಡೆದುಕೊಳ್ಳಲು ಜೈನ ಧರ್ಮ ಬಂಧುಗಳಿಗೆ ಇದೊಂದು ದೊಡ್ಡ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ: 70226 91008, 94804 48108 ಈ ಸಂಖ್ಯೆಯಿಂದ ಪಡೆದುಕೊಳ್ಳಬಹುದು. ವರದಿ : ಶಾಂತರಾಜ ಮಲ್ಲಸಮುದ್ರ

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img