ಕಾರ್ಕಳ : ದಶಲಕ್ಷಣ ಪರ್ವ ಆಚರಣೆ


Logo

Published Date: 09-Sep-2025 Link-Copied

ಕಾರ್ಕಳ ಹಿರಿಯಂಗಡಿ ಶ್ರೀ ಭುಜಬಲಿ ಬ್ರಹ್ಮಚರ್ಯಾಶ್ರಮದಲ್ಲಿ ದಿನಾಂಕ 28.08.2025 ನೇ ಗುರುವಾರದಿಂದ ದಿನಾಂಕ 06.09.2025 ನೇ ಶನಿವಾರದವರೆಗೆ ಪರಮ ಪೂಜ್ಯ 108 ಮುನಿಶ್ರೀ ಮಹಿಮಾಸಾಗರ ಮುನಿ ಮಹಾರಾಜರ ಆಶೀರ್ವಾದಪೂರ್ವಕ ಹಾಗೂ ಕಾರ್ಕಳ ದಾನಶಾಲಾ ಜೈನ ಮಠದ ರಾಜಗುರು ಧ್ಯಾನ ಯೋಗಿ ಪರಮಪೂಜ್ಯ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ದಶಲಕ್ಷಣ ಪರ್ವವನ್ನು ಶ್ರದ್ಧಾ ಭಕ್ತಿಯಿಂದ ಪ್ರತಿ ವರ್ಷದಂತೆ ಆಚರಿಸಲಾಯಿತು. ಉತ್ತಮ ಕ್ಷಮಾಧರ್ಮದಂದು ಯುವ ನ್ಯಾಯವಾದಿಗಳಾದ ಸುವೃತ್ ಕುಮಾರ್ ಹಾಗೂ ಸಮಾಜದ ಹಿರಿಯರು ದೀಪ ಬೆಳಗಿಸುವುದರ ಮೂಲಕ 10 ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರತಿದಿನ ಸಂಜೆ ಜಿನಪೂಜೆ, ಭಜನೆ, ಮಹಾಮಂಗಳಾರತಿ, ವಿದ್ವಾಂಸರಿಂದ ಉಪನ್ಯಾಸ, ತತ್ವಾರ್ಥ ಸೂತ್ರವಾಚನ, ನಿಲಯದ ವಿದ್ಯಾರ್ಥಿಗಳಿಂದ ಭಾಷಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕೊನೆಯ ದಿನವಾದ ದಿನಾಂಕ 06.09.2025 ನೇ ಶನಿವಾರ ಉತ್ತಮ ಬ್ರಹ್ಮಚರ್ಯ ಧರ್ಮದ ಆಚರಣೆಯಂದು ಆಶ್ರಮದ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಎಂಕೆ ವಿಜಯಕುಮಾರ್ ಇವರ ಅಧ್ಯಕ್ಷತೆಯಲ್ಲಿ ಕೋಶಾಧಿಕಾರಿಗಳಾದ ಎಸ್ ಅನಂತರಾಜ್ ಪೂವಣಿ ಮತ್ತು ಆಶ್ರಮದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸನ್ಮತ್ ಕುಮಾರ್ ನಾರಾವಿ ಇವರ ಗೌರವ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮದ ಆರಂಭದಲ್ಲಿ ಯೋಗರಾಜ್ ಶಾಸ್ತ್ರಿ ಇವರು ಸ್ವಾಗತಿಸಿದರು. ಪರ್ವದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನಡೆಸಲಾದ ಧಾರ್ಮಿಕ ಮತ್ತು ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆಶ್ರಮದ ಹಳೆ ವಿದ್ಯಾರ್ಥಿ ಸಂಘದ ಸದಸ್ಯರ ವತಿಯಿಂದ 7 ನೇ, 10 ನೇ ಮತ್ತು ದ್ವಿತೀಯ ಪಿಯುಸಿ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ತಲಾ ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪುರಸ್ಕರಿಸಲಾಯಿತು. ಧಾರ್ಮಿಕ ಗುರುಗಳಾದ ಯೋಗರಾಜ್ ಶಾಸ್ತ್ರಿ ಇವರು ತತ್ವಾರ್ಥಸೂತ್ರ ಪಠಿಸಿದರು. ವಿದ್ಯಾರ್ಥಿ ಹಿತೇಶ್ ಪ್ರಾರ್ಥಿಸಿದರು. ಅನ್ವಿತ್ ಎಚ್ ಎಸ್ ವರದಿ ಮಂಡಿಸಿದರು. ಶ್ರವಣ್ ವಿದ್ಯಾರ್ಥಿ ಭಾಷಣ ನೆರವೇರಿಸಿದರು. ಆಶ್ರಮದ ಮೇಲ್ವಿಚಾರಕರಾದ ವೀರೇಂದ್ರ ಜೈನ್ ಧನ್ಯವಾದ ಸಮರ್ಪಿಸಿದರು. ತೀರ್ಥನ್ ಇವರು ಕಾರ್ಯಕ್ರಮ ನಿರೂಪಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img