ಕುಂತಿನಾಥ ಕಲಮನಿ ಅವರಿಗೆ ಸಾರ್ವಜನಿಕ ಗ್ರಂಥಾಲಯ ಪತ್ರಕರ್ತ ಪ್ರಶಸ್ತಿ
Published Date: 28-Jan-2024 Link-Copied
ಬೆಳಗಾವಿಯ ಸಾರ್ವಜನಿಕ ಗ್ರಂಥಾಲಯ ವತಿಯಿಂದ ನೀಡಲಾಗುವ "ಸಾರ್ವಜನಿಕ ಗ್ರಂಥಾಲಯ ಪತ್ರಕರ್ತ ಪ್ರಶಸ್ತಿ"ಯನ್ನು ಕನ್ನಡ ವಿಭಾಗದಲ್ಲಿ ಬೆಳಗಾವಿಯ ಹಳ್ಳಿಯ ಸಂದೇಶ ಪತ್ರಿಕೆಯ ಸಂಪಾದಕರಾದ ಕುಂತಿನಾಥ ಕಲಮನಿ ಅವರಿಗೆ ಬೆಳಗಾವಿಯ ಮರಾಠಾ ಮಂದಿರದಲ್ಲಿ ಜ. 18ರಂದು ಬ್ಯಾರಿಸ್ಟರ್ ನಾಥ್ ಪೈ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು 5 ಸಾವಿರ ರೂ. ನಗದು ಗೌರವ ಧನ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.