ಕಲಾವಿದನ ಕೈಚಳಕ: ತೆಂಗಿನಕಾಯಿಯಲ್ಲಿ ಅರಳಿದ ಗಣೇಶ


Logo

Published Date: 27-Aug-2025 Link-Copied

ಒಬ್ಬ ಕಲಾವಿದನ ಕೈಚಳಕದಿಂದ ಅದ್ಬುತ ಕಲೆಗಳು ಸೃಷ್ಟಿಯಾಗುತ್ತವೆ ಹಾಗೂ ಅವರ ಕಲ್ಪನೆಯ ಚಿತ್ರಗಳು ವೈವಿದ್ಯಮಯವಾಗಿ ಮೂಡಿ ಬರುತ್ತವೆ ಹಲವಾರು ಕ್ಷೇತ್ರಗಳಲ್ಲಿ ಇಂಥ ಪ್ರಸಂಗಗಳನ್ನು ನೋಡಬಹುದಾಗಿದೆ. ಇವರಲ್ಲಿ ಬೆಳಗಾವಿ ಜಿಲ್ಲಾ ಬೈಲಹೊಂಗಲ ತಾಲೂಕು ದೇವಲಾಪುರ ಗ್ರಾಮದ ಕುಬೇರ ಮಹಾವೀರ ಲಗಮಣ್ಣವರ ಇವರೂ ಕೂಡಾ ಒಬ್ಬರು. ಇವರು ಅಪ್ಪಟ ಗ್ರಾಮೀಣ ಕಲಾವಿದ, ಅವರ ಮೂಲ ವೃತ್ತಿ ಕೃಷಿ. ಜೊತೆಗೆ ಕೃಷಿಗೆ ಪೂರಕ ಚಟುವಟಿಕೆಯಲ್ಲಿ ತೊಡಗಿಕೊಂಡ ಇವರು ಸೃಜನಶೀಲ ಕಲಾವಿದರಲ್ಲಿ ಅತ್ಯಂತ ಪ್ರಮುಖರಾಗಿದ್ದಾರೆ. ಇವರು ಪ್ರಗತಿಪರ ಕೃಷಿಕರಾಗಿರುವದರಿಂದ ಸಹಜವಾಗಿ ಇವರಲ್ಲಿ ಪರಿಸರಪ್ರೇಮ ಮೈಗೂಡಿಕೊಂಡಿದೆ. ಇದೀಗ ಗಣೇಶ ಉತ್ಸವ ಬಂದಿದೆ ದೇಶದಾದ್ಯಂತ ಗಣೇಶ ಚತುರ್ಥಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇವರು ಸಿಪ್ಪೆಸಹಿತ ಇರುವ ಟೆಂಗಿನಕಾಯಿಯಲ್ಲಿ ಸೂಕ್ಷ್ಮವಾಗಿ ಕೆತ್ತನೆ ಮಾಡಿ ಗಣೇಶನ ಮೂರ್ತಿಯನ್ನು ಅತ್ಯಂತ ಸುಂದರವಾಗಿ ತಯಾರಿಸುತ್ತಾರೆ. ಇವುಗಳು ಎಷ್ಟು ಸುಂದರವಾಗಿವೆ ಎಂದರೆ ಇವುಗಳನ್ನು ನೋಡಿದ ತಕ್ಷಣ ಆಕರ್ಷಣೀಯವಾಗಿರುತ್ತವೆ. ಇವರ ಈ ಟೆಂಗಿನಕಾಯಿಯ ಗಣಪತಿಯನ್ನು ಮನೆ ಮನೆಯಲ್ಲಿ ಪ್ರತಿಷ್ಠಾಪಿಸಲು ಜನ ತುಂಬಾ ಉತ್ಸುಕರಾಗಿದ್ದಾರೆ. ಐದು ದಿನಗಳ ಪೂಜೆಯ ನಂತರ ಈ ಮೂರ್ತಿಯನ್ನು ಹೊಲದಲ್ಲಿ ಅಥವಾ ಹಿತ್ತಲಿನಲ್ಲಿ ತೆಗ್ಗು ತೆಗೆದು ಹೂಳುವ ಮುಖಾಂತರ ವಿಸರ್ಜಿಸುತ್ತಾರೆ. ಇದು ಕೆಲವು ದಿನಗಳ ನಂತರ ಮೊಳಕೆಯೊಡೆದು ಮತ್ತೊಂದು ತೆಂಗಿನಗಿಡವಾಗಿ ಬೆಳೆಯುತ್ತದೆ ಎನ್ನುವ ಉದ್ದೇಶವಿರುತ್ತದೆ. ಇದರಿಂದಾಗಿ ಪರಿಸರದ ರಕ್ಷಣೆಯ ಜೊತೆಗೆ ಸಸ್ಯವೃದ್ಧಿಯಾಗುತ್ತದೆ ಎನ್ನುವ ಪರಿಕಲ್ಪನೆ ನಿಜವಾಗಿಯೂ ಅದ್ಭುತವಾದದ್ದು. ಗಣೇಶ ಮಾತ್ರವಲ್ಲ ತೀರ್ಥoಕರರ ಮೂರ್ತಿಯನ್ನು ಕೂಡಾ ಸಿಪ್ಪೆಸಹಿತ ಇರುವ ಟೆಂಗಿನಕಾಯಿ ಯಲ್ಲಿ ಮೂಡಿಸುತ್ತಾರೆ. ಇವರ ಕಲೆಯನ್ನು ಮೆಚ್ಚಿ ದಿಗಂಬರ ಜೈನ ಮುನಿಗಳು ತ್ಯಾಗಿಗಳು ಮೆಚ್ಚುಗೆ ವ್ಯಕ್ತಪಡಿಸಿದ ಆಶೀರ್ವದಿಸಿದ್ದಾರೆ. ಇವರದು ಇದೇತರಹದ ಕಲ್ಪನಾ ಲೋಕ, ಗ್ರಾಮೀಣ ಪರಿಸರದಲ್ಲಿ ಅಲ್ಲಿನ ಜನಪದ ಪ್ರಭಾವದಿಂದಾಗಿ ಎತ್ತು, ಚಕ್ಕಡಿ, ಗ್ವಾದಲಿ ಮುಂತಾದ ಕಮತದ ಪರಿಕರಗಳ ಚಿತ್ರಣಗಳನ್ನು ಕಣ್ಣು ಕಟ್ಟುವಂತೆ ತಯಾರಿಸುವದಕ್ಕೆ ಇವರು ಸಿದ್ದ ಹಸ್ತರು. ನಮ್ಮ ಹಳೆಯ ಕಾಲದ ಮನೆಗಳ ಕೂಡುಕುಟುಂಬ ಜೀವನದ ಸೊಗಸನ್ನು ಅರ್ಥ ಮಾಡಿಕೊಂಡವರಿಗೆ ಮಾತ್ರ ನಮ್ಮ ಜಾನಪದ ಸೊಗಡು ಅರ್ಥವಾಗಬಲ್ಲದು ಅಳಿವಿನ ಅಂಚಿನಲ್ಲಿರುವ ಇಂಥ ವಸ್ತುಗಳನ್ನು ತಯಾರಿಸಿ ಕುತೂಹಲ ಮೂಡಿಸುತ್ತಿದ್ದಾರೆ. ಇವರಲ್ಲಿಯ ಕಲಾಪ್ರತಿಭೆಗೆ ಪ್ರೋತ್ಸಾಹ ಹಾಗೂ ಪುರಸ್ಕಾರದ ಅಗತ್ಯವಿದೆ. ಈ ಅದ್ಬುತ ಕಲಾವಿದನ ಕೈಯಿಂದ ಇನ್ನೂ ಹಲವಾರು ಸಾಮಗ್ರಿಗಳು ಮೂಡಿಬರಲಿ, ಸರಕಾರವೂ ಸೇರಿದಂತೆ ಎಲ್ಲರೂ ಇವರ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಲಿ ಎನ್ನುವ ಆಶಯ ನಮ್ಮದು. ಶಾಂತರಾಜ ಮಲ್ಲಸಮುದ್ರ ಲೇಖಕರು

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img