ವೇಣೂರು: ನವೀಕೃತ ಶ್ರೀ ಬಾಹುಬಲಿ ಸಭಾಭವನದ ಉದ್ಘಾಟನೆ
Published Date: 27-Aug-2025 Link-Copied
2000ನೇ ಇಸವಿಯಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಸಂದಭ೯ದಲ್ಲಿ ಶ್ರೀ ಬಾಹುಬಲಿ ಸಭಾಭವನವನ್ನು ನಿಮಾ೯ಣ ಮಾಡಿ ಲೋಕಾಪ೯ಣೆ ಮಾಡಲಾಗಿತ್ತು. ಈಗ ಈ ಸಭಾಭವನದ ವ್ಯವಸ್ಥೆಯನ್ನು ಇನ್ನಷ್ಟು ಉನ್ನತೀಕರಿಸಿ ಆಧುನಿಕವಾಗಿ ನವೀಕರಿಸಲಾಗಿದೆ. ದಿನಾಂಕ 22.08.2025ನೇ ಶ್ರಾವಣ ಶುಕ್ರವಾರದ ಶುಭ ಸಂದಭ೯ದಲ್ಲಿ ಶ್ರೀ ಬಾಹುಬಲಿ ಸಭಾಭವನದ ಉದ್ಘಾಟನೆಯನ್ನು ಮೂಡುಬಿದ್ರಿ ಶ್ರೀ ಜೈನ ಮಠದ ಪರಮ ಪೂಜ್ಯ ,"ಭಾರತಭೂಷಣ" ಡಾ|ಸ್ವಸ್ತಿಶ್ರೀ ಚಾರುಕೀತಿ೯ ಪಂಡಿತಾಚಾಯ೯ವಯ೯ ಮಹಾಸ್ವಾಮೀಜಿಯವರ ಪಾವನ ಸಾನ್ನಿಧ್ಯದಲ್ಲಿ, ಶ್ರೀ ದಿಗಂಬರ ಜೈನ ತೀಥ೯ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ|ಪದ್ಮಪ್ರಸಾದ್ ಅಜಿಲರ ಉಪಸ್ಥಿತಿಯಲ್ಲಿ, ಕನಾ೯ಟಕ ಸರಕಾರದ ಮಾಜಿ ಸಚಿವರಾದ ಕೆ.ಅಭಯಚಂದ್ರ ಜೈನ್ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಈ ಸಂದಭ೯ದಲ್ಲಿ ಬೆಳ್ಳಿಬೀಡು ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ. ಹೇಮರಾಜ್ ಬೆಳ್ಳಿಬೀಡು, ಶ್ರೀ ದಿಗಂಬರ ಜೈನ ತೀಥ೯ಕ್ಷೇತ್ರ ಸಮಿತಿಯ ಕಾಯ೯ದಶಿ೯ಗಳಾದ ವಿ.ಪ್ರವೀಣ್ ಕುಮಾರ್ ಇಂದ್ರ ಕೋಶಾಧಿಕಾರಿಗಳಾದ ಪಿ. ಜಯರಾಜ್ ಕಂಬ್ಳಿ, ಜತೆ ಕಾಯ೯ದಶಿ೯ಗಳಾದ ಮಹಾವೀರ್ ಜೈನ್ ಮೂಡುಕೋಡಿ, ಕಾಯ೯ಕಾರಿ ಸಮಿತಿಯ ಸದಸ್ಯರುಗಳಾದ ಬಿ.ರತ್ನವಮ೯ ಇಂದ್ರ, ಪ್ರವೀಣ್ ಅಜ್ರಿ, ಸುರೇಶ್ ಕುಮಾರ್ ಆರಿಗ, ಭರತ್ ಕುಮಾರ್ ಆರಿಗ, ಶಮಿ೯ತ್ ಕುಮಾರ್ ಹಾಗೂ ಹಿರಿಯ ಶ್ರಾವಕಿಯಾದ ಗುಣವತಿ ಎ. ಆಳ್ವ ಮತ್ತು ರಾಜ್ಯ ಜೈನ ಮಹಿಳಾ ಒಕ್ಕೂಟದ ನಿದೇ೯ಶಕಿಯಾದ ಸರೋಜಾ ಜಿ.ಜೈನ್, ಪುರೋಹಿತ ಸಚಿನ್ ಇಂದ್ರ ಮತ್ತಿತರರು ಉಪಸ್ಥಿತರಿದ್ದರು.