ಕರ್ನಾಟಕ ರಾಜ್ಯ ಮಕ್ಕಳ ಶಸ್ತ್ರಚಿಕಿತ್ಸೆ ಸಮ್ಮೇಳನ- ಹುಬ್ಬಳ್ಳಿ ಧಾರವಾಡ
Published Date: 12-Aug-2025 Link-Copied
ಧಾರವಾಡ, 8,9 ಮತ್ತು 10 ಆಗಸ್ಟ್ 2025: ಕರ್ನಾಟಕ ರಾಜ್ಯದ ಮಕ್ಕಳ ಶಸ್ತ್ರಚಿಕಿತ್ಸಕರ ಸಂಘದ (ಐ ಎ ಪಿಎಸ್-ಕೆ.ಎಸ್.ಸಿ.) -20 ನೇ ವಾರ್ಷಿಕ ಸಮ್ಮೇಳನವನ್ನು ಧಾರವಾಡದ ಎಸ್.ಡಿ.ಮ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಹುಬ್ಬಳ್ಳಿಯ ಕರ್ನಾಟಕ ವೈದ್ಯಕಿಯ ಮಹಾವಿದ್ಯಾಲಯ (ಕೆ.ಎಂ.ಸಿ) ಜಂಟಿ ಸಹಯೋಗದೊಂದಿಗೆ “ಪೆಸುಕಾನ್ 2025“ ಎಂಬ ಶೀರ್ಷಿಕೆ ಅಡಿಯಲ್ಲಿ ಆಗಸ್ಟ್ 8ರಿಂದ 10ರವರಗೆ, "ಮಕ್ಕಳ ಶಸ್ತ್ರಚಿಕಿತ್ಸೆಯ ಆಯಾಮವನ್ನು ವಿಸ್ತರಿಸುವುದು" ಎಂಬ ಪರಿಕಲ್ಪನೆಯ ಸ್ಪೂರ್ತಿದಾಯಕ ವಿಷಯದೊಂದಿಗೆ ನಡೆಸಲಾಯಿತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಿ. ವೀರೇಂದ್ರ ಹೆಗ್ಗಡೆ, ಉಪಕುಲಪತಿ ಡಾ. ನಿರಂಜನ್ ಕುಮಾರ್ ಅವರ ಆಶೀರ್ವಾದದೊಂದಿಗೆ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಆಗಸ್ಟ್ 9 ರಂದು ಎಸ್.ಡಿ.ಮ್ ಆಸ್ಪತ್ರೆಯಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಯತೀಂದ್ರ ನಂಜಯ್ಯ, (ಮಕ್ಕಳ ಶಸ್ತ್ರಚಿಕಿತ್ಸಕರು, ರಾಜ್ಯ ಮಟ್ಟಡ ಅಧ್ಯಕ್ಷರು), ಗೌರವಾನ್ವಿತ ಅತಿಥಿಗಳಾಗಿ ಸಾಕೆತ್ ಶೆಟ್ಟಿ, (ನಿರ್ವಾಹಕ ನಿರ್ದೇಶಕ, ಎಸ್.ಡಿ.ಮ್ ), ಡಾ. ವಿಜಯ್ ಕುಲಕರ್ಣಿ (ಪ್ರಾಂಶುಪಾಲರು ಎಸ್.ಡಿ.ಮ್), ಡಾ. ಅನಿಲ್ ಹಲಗೆರಿ ಬಿ, (ಪೆಸುಕಾನ್ 2025 ರ ಅಧ್ಯಕ್ಷರು), ಡಾ. ವಿಜಯ್ ಪೂಜಾರ್ ಸಿ (ಪೆಸುಕಾನ್ 2025, ರ ಸಹ-ಅಧ್ಯಕ್ಷರು), ಡಾ. ಕಿರಣ್ ಎಂ (ಗೌರವಾನ್ವಿತ ರಾಜ್ಯ ಮಟ್ತ್ಟದ ಕಾರ್ಯದರ್ಶಿ, ಐಎಪಿಎಸ್–ಕೆಎಸ್‌ಸಿ), ಡಾ. ಅಕ್ಷಯ್ ಕಲಾವಂತ್ (ಪೆಸುಕಾನ್ 2025, ರ ಸಂಘಟನಾ ಕಾರ್ಯದರ್ಶಿ), ಡಾ. ಪ್ರಶಾಂತ್ ಕೆ ಜುಲ್ಪಿ (ಪೆಸುಕಾನ್ 2025, ಖಜಾಂಚಿ) ಮತ್ತು ಡಾ. ವೆಂಕಟೇಶ್ ಕೆ ಎಲ್,ಬೆಂಗಳೂರು (ಐಎಪಿಎಸ್–ಕೆಎಸ್‌ಸಿಯ ಚುನಾಯಿತ ಅಧ್ಯಕ್ಷರು) ಸೇರಿದಂತೆ ಗಣ್ಯರು ಭಾಗವಹಿಸಿದ್ದರು. ಆಗಸ್ಟ್ 8 ರಂದು, ಹುಬ್ಬಳ್ಳಿಯ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಡಾ. ರಾಜಶಂಕರ ಸಂಕಲ್ ಹಾಗೂ ಡಾ ರವೀಂದ್ರ ಖಾಸನಿಸ್ ರವರ ಸಹಯೋಗದೋಂದಿಗೆ ಮಕ್ಕಳ ಮೂತ್ರಪಿಂಡದ ಕಲ್ಲಿನ ಚಿಕಿತ್ಸೆ ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಯಿತು. ಆಗಸ್ಟ್ 9 ಮತ್ತು 10 2025 ರಂದು ಎಸ್‌ಡಿಎಂ ಆಸ್ಪತ್ರೆ ಧಾರವಾಡದಲ್ಲಿ ನಡೆದ ಮುಖ್ಯ ಸಮ್ಮೇಳನದಲ್ಲಿ ಮಕ್ಕಳ ಅರ್ಭುಧರೋಗ, ಎದೆಗೂಡಿನ ಮತ್ತು ವಾಯುಮಾರ್ಗ ಶಸ್ತ್ರಚಿಕಿತ್ಸೆ, ಭ್ರೂಣದ ಶಸ್ತ್ರಚಿಕಿತ್ಸೆ ಹಾಗೂ ಲಾಪ್ರೋಸ್ಕೋಪಿ ಮತ್ತು ರೊಬೊಟಿಕ್ ಶಸ್ತ್ರಚಿಕಿತ್ಸೆ ಕುರಿತು ಉಪನ್ಯಾಸ ನೀಡಲಾಯಿತು. ಈ ಕಾರ್ಯಾಕ್ರಮದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಉಪನ್ಯಾಸಕರು ಮತ್ತು ಪ್ರತಿನಿಧಿಗಳು ಪಾಲ್ಗೊಂಡಿದರು.