ವೇಣೂರು: ನೂತನ ಪದಾಧಿಕಾರಿಗಳ ಪದಗ್ರಹಣ


Logo

Published Date: 19-Jul-2025 Link-Copied

ಬ್ರಾಹ್ಮಿ ಜೈನ ಮಹಿಳಾ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಯಾತ್ರಿ ನಿವಾಸದಲ್ಲಿ ಜು. 13ರಂದು ನಡೆಯಿತು. ಸಭಾ ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ಭ| ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ ಮತ್ತು ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರ್ಕಳ ಜಿನವಾಣಿ ಮಹಿಳಾ ಸಮಾಜದ ಅಧ್ಯಕ್ಷರಾದ ಸುಮನಾಜಿ ಡಿ. ಅಧಿಕಾರಿ ಹಾಗೂ ಮೂಡಬಿದ್ರಿ ಸರ್ವಮಂಗಳ ಜೈನ ಮಹಿಳಾ ಸಮಾಜದ ಅಧ್ಯಕ್ಷರಾದ ಮಂಜುಳಾ ಯಶೋಧರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ನೂತನ ಅಧ್ಯಕ್ಷರಾಗಿ ಸುನೀತಾ ಶಾಂತಿಪ್ರಸಾದ್ ಹಾಗೂ ಕಾರ್ಯದರ್ಶಿಯಾಗಿ ದೀಪಶ್ರೀ ಜೈನ್ ಮತ್ತು ಕೋಶಾಧಿಕಾರಿಯಾಗಿ ಸುಕನ್ಯ ಬಲ್ಲಾಳ್ ಆಯ್ಕೆಯಾದರು. ಸಮಾರಂಭದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಮಹಿಳಾ ಒಕ್ಕೂಟದ ನಿರ್ದೇಶಕರಾದ ಸರೋಜ ಗುಣಪಾಲ್ ಜೈನ್ ವಹಿಸಿದ್ದರು. ಗೌರವ ಉಪಸ್ಥಿತಿಯನ್ನು ಬ್ರಾಹ್ಮಿ ಜೈನ ಮಹಿಳಾ ಸಮಾಜದ ಸ್ಥಾಪಕ ಅಧ್ಯಕ್ಷರಾದ ಪ್ರಸನ್ನ ಆರ್. ಹೆಗ್ಡೆ ಹಾಗೂ ರಾಜೇಶ್ವರಿ ವಿ.ಅಧಿಕಾರಿ ವಹಿಸಿದ್ದರು. ವಾರ್ಷಿಕ ಗತ ಸಭೆಯ ವರದಿಯನ್ನು ನಿರ್ಗಮಿತ ಕಾರ್ಯದರ್ಶಿಗಳಾದ ಆಶಾಲತಾ ಮಂಡಿಸಿದರು. ಹಾಗೆಯೇ ನಿರ್ಗಮಿತ ಕೋಶಾಧಿಕಾರಿ ವಾಣಿ ವೃಷಭರಾಜ್ ಲೆಕ್ಕ ಪತ್ರ ಮಂಡಿಸಿದರು. ನಿರ್ಗಮಿತ ಅಧ್ಯಕ್ಷರಾದ ಸರೋಜಾ ಗುಣಪಾಲ್ ಜೈನ್ ನೂತನ ಅಧ್ಯಕ್ಷರಾದ ಸುನೀತಾ ಶಾಂತಿಪ್ರಸಾದ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಪದ್ಮಲತಾ ಮತ್ತು ಸುನೀತಾ ಬಲ್ಲಾಳ್ ಪ್ರಾರ್ಥಿಸಿ, ನಿರ್ಗಮಿತ ಜತೆ ಕಾರ್ಯದಶಿಗಳಾದ ಮಮತಾ ಪ್ರಸಾದ್ ಸ್ವಾಗತಿಸಿದರು. ನೂತನ ಕಾರ್ಯದರ್ಶಿಗಳಾದ ದೀಪಶ್ರೀ ಜೈನ್ ಧನ್ಯವಾದವಿತ್ತರು. ಸಂಧ್ಯಾ ಸುಕುಮಾರ್, ಆಶಾಲತಾ ಜೈನ್‌ರವರು ಕಾರ್ಯಕ್ರಮ ನಿರೂಪಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img