ರಚನಾ ಎಸ್.ಡಿ. ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ
Published Date: 18-Jul-2025 Link-Copied
ಕಾರ್ಕಳ: ಹೊಸದಿಲ್ಲಿ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಮೇ 2025ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಡಾ.ಎನ್. ಎಸ್.ಎ.ಎಮ್. ಪ್ರಥಮದರ್ಜೆ ಕಾಲೇಜಿನ 2017-2020 ನೇ ಸಾಲಿನ ಬಿಕಾಂ ವಿದ್ಯಾರ್ಥಿನಿ ರಚನಾ ಎಸ್.ಡಿ. ತೇರ್ಗಡೆಯಾಗಿದ್ದಾರೆ. ಇವರು ಮೂಡಬಿದ್ರೆಯ ಧೀರಜ್ ಎಸ್.ಎಮ್. ಮತ್ತು ಪದ್ಮಜಾ ಶೆಟ್ಟಿಯವರ ಪುತ್ರಿ, ರಚನಾ ಎಸ್.ಡಿ. ಮಂಗಳೂರಿನ ಕೆಎನ್‌ಡಿಸಿ ಆಂಡ್ ಅಸೋಸಿಯೆಶನ್‌ನಲ್ಲಿ ಸಿಎ ಪ್ರಾಯೋಗಿಕ ತರಬೇತಿಯನ್ನು ಪಡೆದಿರುತ್ತಾರೆ.