ಸತ್ತೂರು, ಧಾರವಾಡ: ಡಾ. ನಿರಂಜನ್ ಕುಮಾರ್ ಅವರಿಗೆ ಜಾಗತಿಕ ಶ್ರೇಷ್ಠತೆ ಮತ್ತು ಗೌರವ ಪ್ರಧಾನ
Published Date: 18-Jul-2025 Link-Copied
ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರಿಗೆ ಟೈಮ್ಸ್ ಆಫ್ ಇಂಡಿಯಾ ಮತ್ತು ವಿಜಯ ಕರ್ನಾಟಕ ಸಮೂಹ ಮಾಧ್ಯಮಗಳು, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಡಾ. ನಿರಂಜನ್ ಕುಮಾರ್ ಅವರ ಮಹತ್ವದ ಕೊಡುಗೆಗಳನ್ನು ಪರಿಗಣಿಸಿ ಜಾಗತಿಕ ಶ್ರೇಷ್ಠತೆಯ ಪ್ರಮಾಣಪತ್ರವನ್ನು ನೀಡಿ ಗೌರವಿಸಿವೆ. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ ಅವರು ಡಾ. ನಿರಂಜನ್ ಕುಮಾರ್ ಅವರ ಪರವಾಗಿ ಈ ಪ್ರತಿಷ್ಠಿತ ಜಾಗತಿಕ ಶ್ರೇಷ್ಠತೆಯ ಗೌರವವನ್ನು ಮಲೇಷ್ಯಾದ ಮ್ಯಾಪ್ಸ್ ಗ್ರುಪ್‌ನ ಸಂಸ್ಥಾಪಕರಾದ ದಾತುಕ್ ಎಂ.ಎ.ಪಿ. ಸಿಗರನ್ ಮತ್ತು ಇತರ ಗಣ್ಯರಿಂದ ಸ್ವೀಕರಿಸಿದರು. ಈ ಪ್ರಶಸ್ತಿಯನ್ನು ಜುಲೈ 13, 2025 ರಂದು ಮಲೇಷ್ಯಾದ ಕೌಲಾಲಂಪುರದ ರಾಯಲ್ ಚುಲಾನ್‌ನಲ್ಲಿ ನಡೆದ ಕರ್ನಾಟಕ ಜಾಗತಿಕ ಸಾಧಕರ ಅಂತರರಾಷ್ಟ್ರೀಯ ಆಚರಣೆಯ ಸಂದರ್ಭದಲ್ಲಿ ನೀಡಲಾಯಿತು.