ಮೀನಾಕ್ಷಿ ಜೈನ್ ರಾಜ್ಯಸಭೆಗೆ ರಾಷ್ಟ್ರಪತಿಯಿಂದ ನೇಮಕ
Published Date: 13-Jul-2025 Link-Copied
ರಾಷ್ಟ್ರಪತಿಯವರು ಹೊಸದಾಗಿ ನಾಲ್ಕು ಜನರನ್ನು ರಾಜ್ಯಸಭಾ ಸದಸ್ಯರನ್ನು ನೇಮಕ ಮಾಡಿದ್ದು ಅವರಲ್ಲಿ ಮೀನಾಕ್ಷಿ ಜೈನ್ ಕೂಡ ಒಬ್ಬರಾಗಿದ್ದಾರೆ. ಮೀನಾಕ್ಷಿ ಜೈನ್ ( 23ನೇ ಮಾರ್ಚ್ 1943 )ರವರು ದೆಹಲಿಯ ಗಾರ್ಗಿ ಕಾಲೇಜಿನಲ್ಲಿ ಇತಿಹಾಸದ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಭಾರತೀಯ ವಿಜ್ಞಾನಿ ಮತ್ತು ಇತಿಹಾಸಕಾರರು. 2014 ರಲ್ಲಿ ಅವರು ಭಾರತ ಸರ್ಕಾರದಿಂದ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್‌ನ ಸದಸ್ಯರಾಗಿ ನಾಮನಿರ್ದೇಶನಗೊಂಡರು. 2020 ರಲ್ಲಿ ಅವರು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಕೆಲಸಕ್ಕಾಗಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.