ಅನಂತ ಪಾರ್ಶ್ವ ಜೈನ್ ಮಿಲನ್ ಪದಗ್ರಹಣ ಮತ್ತು ಬಸ್ ನಿಲ್ದಾಣ ಉದ್ಘಾಟನೆ
Published Date: 12-Jul-2025 Link-Copied
ಕುಪ್ಪೆ ಪದವು:- ಅನಂತ ಪಾರ್ಶ್ವ ಜೈನ್ ಮಿಲನಿನ ಪದಗ್ರಹಣ ಮತ್ತು ನಮ್ಮ ಮಿಲನ ಸದಸ್ಯರಾದ ಅಜಿತ್ ಕುಮಾರ್ ಜೈನ್ ರವರು ಸಾರ್ವಜನಿಕರಿಗೆ ಬಸ್ ನಿಲ್ದಾಣವನ್ನು ನಿರ್ಮಿಸಿದರು, ಮಂಗಳೂರು ವಲಯ -8 ರ ನಿಕಟ ಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಜೈನ್‌ರವರು ಉದ್ಘಾಟಿಸಿದರು. ಅನಂತ್ ರಾಜ ಸಭಾಭವನದಲ್ಲಿ ದಿನಾಂಕ 29-6-2025 ಸಂಜೆ 3 ಗಂಟೆಗೆ ಪದಗ್ರಹಣ ಸಮಾರಂಭ ನಡೆಯಿತು. ಜಯರಾಜ್ ಕಂಬಳಿ, ವಲಯ ನಿರ್ದೇಶಕರು ಹೊಸ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಮಾಡಿದರು. ಸುದರ್ಶನ್ ಜೈನ್, ಉಪಾಧ್ಯಕ್ಷರು ಮಂಗಳೂರು ವಲಯ-8. ಕುಪ್ಪೆಪದ ಜೈನ್ ಮಿಲನ್ ಸಣ್ಣದಾದರು ಅಚ್ಚುಕಟ್ಟಾಗಿ ಎಲ್ಲಾ ಕೆಲಸಗಳನ್ನು ಒಳ್ಳೆಯ ರೀತಿಯಲ್ಲಿ ನಿರ್ವಹಿಸುತ್ತಾ ಒಳ್ಳೆ ಹೆಸರನ್ನು ಗಳಿಸಿದ್ದಾರೆ ಎಂದು ಶ್ಲಾಘಿಸಿದರು. ವೇದಿಕೆಯಲ್ಲಿ ಪುಷ್ಪರಾಜ್ ಜೈನ್, ಸುಭಾಷ್ ಚಂದ್ರ ಜೈನ್, ಶ್ವೇತಾ ಜೈನ್, ಡಾ। ಸುದೀಪ್ ಜೈನ್, ಭೋಜರಾಜ್ ಜೈನ್, ಅಧ್ಯಕ್ಷ ಸ್ವರ್ಣ ಲತಾ ಅಜಿತ್, ಹರ್ಷ ಲತಾ, ವನಿತಾ ಭೋಜರಾಜ ಜೈನ ಹಾಗೂ ಪದಗ್ರಹಣ ಸ್ವೀಕರಿಸಿದ ಧೀರಜ್ ಜೈನ ಮತ್ತು ಕಾರ್ತಿಕ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂರ್ವಿತಾ ಪ್ರಾರ್ಥನೆ ಮಾಡಿದರು. ಅನ್ವಿತ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು. ಅದ್ವಿತ ಮತ್ತು ಅಶ್ವಿತ ಶಾಂತಿ ಮಂತ್ರವನ್ನು ಪಟಿಸಿ ಸಭೆಯನ್ನು ಮುಕ್ತಾಯ ಗೊಳಿಸಿದರು.