ಧಾರವಾಡ: ಸಾಂಸ್ಕೃತಿಕ ಕಾರ್ಯಕ್ರಮ
Published Date: 07-May-2025 Link-Copied
ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಅಲೈಡ ಹೆಲ್ತ್ ಸೈನ್ಸಸ್ ವಿಭಾಗದವರಿಂದ “ಪರ್ವ 2025” ಅನ್ನು “ದಿ ಫ್ರಾಸ್ಟಿವಲ್ - ವಿಂಟರ್ಸ್ ಸಿಂಫನಿ” ಎಂಬ ಧ್ಯೇಯೆಯೊಂದಿಗೆ ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಅವರು ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿದರು. ಪದ್ಮಲತಾ ನಿರಂಜನ್ ಮತ್ತು ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಾ, ವಿದ್ಯಾರ್ಥಿಗಳು ಸೃಜನಶೀಲತೆಯಿಂದ ಏನು ಬೇಕಾದರೂ ಸಾಧಿಸಬಹುದು. ಎಲ್ಲಾ ಆರೋಗ್ಯ ವೃತ್ತಿಪರರು ರೋಗಿಗಳನ್ನು ನೋಡಿಕೊಳ್ಳಲು ಉತ್ತಮ ಮನಸ್ಸಿನಿಂದ ಕೆಲಸ ಮಾಡಬೇಕು ಪೂರ್ಣ ಸಮರ್ಪಣೆ ಮತ್ತು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ನಿಮ್ಮ ಜ್ಞಾನ ಮತ್ತು ನವೀನ ಕೌಶಲ್ಯಗಳನ್ನು ನವೀಕರಿಸುತ್ತಿರಬೇಕು. ಅಭಿವೃದ್ಧಿ ಒಳ್ಳೆಯ ಉದ್ದೇಶಕ್ಕಾಗಿ ನಡೆಯಬೇಕು. ಶಿಸ್ತಿನಿಂದ ಎಸ್.ಡಿ.ಎಂ. ಹೆಸರು ಮತ್ತು ಖ್ಯಾತಿಯನ್ನು ಜಾಗತಿಕವಾಗಿ ಮುಂದೆ ತರಬೇಕು. ರೋಗಿಯ ಸುರಕ್ಷತೆ ಮತ್ತು ಉತ್ತಮ ಅಭ್ಯಾಸಗಳು ವಿದ್ಯಾರ್ಥಿಗಳ ಮೂಲ ಉದ್ದೇಶ. ಬುದ್ಧಿವಂತ ವ್ಯಕ್ತಿಯಾಗುವುದಕ್ಕಿಂತ ಜ್ಞಾನವುಳ್ಳ ವ್ಯಕ್ತಿಯಾಗುವುದು ಹೆಚ್ಚು ಮುಖ್ಯ ಎಂದು ಹೇಳಿದರು. ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ್ ಹೆಗ್ಡೆ, ಅಲೈಡ್ ಹೆಲ್ತ್ ಸೈನ್ಸಸ್‌ನ ಸಂಯೋಜಕರಾದ ಡಾ. ವಿದ್ಯಾ ಎಸ್. ಪಾಟೀಲ್ ಅವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸೂರಜ್ ಮತ್ತು ಎಲ್ಹಾಮ್ ಖಾನ್ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಅತಿಥಿಗಳನ್ನು ಸ್ವಾಗತಿಸಿದರು. ಆಂಜೆಲ್ ಬ್ಲಿಸ್ಸಿ ವಂದನಾರ್ಪಣೆ ಸಲ್ಲಿಸಿದರು.